ತಂತ್ರಜ್ಞಾನ ಕ್ರಿಯಾಶೀಲತೆಗೆ ಬಳಕೆ ಆಗಲಿ: ಮೋದಿ

KannadaprabhaNewsNetwork |  
Published : Jun 15, 2024, 01:03 AM ISTUpdated : Jun 15, 2024, 05:37 AM IST
ಪ್ರಧಾನಿ | Kannada Prabha

ಸಾರಾಂಶ

ತಂತ್ರಜ್ಞಾನವನ್ನು ಮನುಕುಲದ ಕ್ರಿಯಾಶೀಲತೆಯನ್ನು ಪ್ರತಿಬಿಂಬಿಸುವ ಕಲ್ಪನೆಯೊಂದಿಗೆ ವಿನ್ಯಾಸಗೊಳಿಸಬೇಕು.

ಸಾವೆಲೆಟ್ರಿ ದಿ ಫೆಸಾನೋ (ಇಟಲಿ): ತಂತ್ರಜ್ಞಾನವನ್ನು ಮನುಕುಲದ ಕ್ರಿಯಾಶೀಲತೆಯನ್ನು ಪ್ರತಿಬಿಂಬಿಸುವ ಕಲ್ಪನೆಯೊಂದಿಗೆ ವಿನ್ಯಾಸಗೊಳಿಸಬೇಕು. ಅದನ್ನು ಎಂದಿಗೂ ಮಾನವ ಸಮಾಜದ ವಿನಾಶಕ್ಕೆ ದಾರಿ ಮಾಡಿಕೊಡುವ ರೀತಿಯಲ್ಲಿ ತಯಾರು ಮಾಡಬಾರದು ಎಂದು ಪ್ರಧಾನಿ ಮೋದಿ ಜಿ7 ಔಟ್‌ರೀಚ್‌ ಶೃಂಗದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಜಿ7 ಶೃಂಗಸಭೆಯ ‘ಔಟ್‌ರೀಚ್‌’ ಅಧಿವೇಶನದಲ್ಲಿ ಮಾತನಾಡಿದ ಮೋದಿ, ‘ಕೃತಕ ಬುದ್ಧಿಮತ್ತೆಯನ್ನು ರಾಷ್ಟ್ರೀಯ ಉದ್ದೇಶದೊಂದಿಗೆ ಬಳಕೆ ಮಾಡಬೇಕೆಂದು ಪ್ರತಿಪಾದಿಸಿದ ರಾಷ್ಟ್ರಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಅದೇ ರೀತಿಯಲ್ಲಿ ಎಐ ಬಳಕೆಯ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕೀಕೃತ ಕಾನೂನು ಇರಬೇಕೆಂದು ನಾನು ಪ್ರತಿಪಾದಿಸುತ್ತೇನೆ. 

ನಾವು ಯಾವುದೇ ಹೊಸ ತಂತ್ರಜ್ಞಾನದ ಆವಿಷ್ಕಾರ ಮಾಡಿದರೂ ಅದು ಮನುಕುಲಕ್ಕೆ ಇರುವ ವಿಶಿಷ್ಟ ಬುದ್ಧಿ ಸಾಮರ್ಥ್ಯದ ಪ್ರತಿಬಿಂಬವಾಗಿರಬೇಕು. ಬದಲಾಗಿ ಆ ತಂತ್ರಜ್ಞಾನವೇ ಮುಂದೊಂದು ದಿನ ನಮ್ಮನ್ನು ಆಪೋಷನ ತೆಗೆದುಕೊಳ್ಳುವಂತಿರಬಾರದು. ಹಾಗಾಗಿ ತಂತ್ರಜ್ಞಾನ ಎಂದೆಂದಿಗೂ ಮಾನವ ಕೇಂದ್ರಿತ ದೃಷ್ಟಿಕೋನದಲ್ಲಿ ತಯಾರು ಮಾಡಬೇಕು’ ಎಂದು ಪ್ರತಿಪಾದಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕಿಚ್ಚನ ವೀರಾವೇಶ ದರ್ಶನ್ ವಿರುದ್ಧ ಅಲ್ಲ, ಪೈರಸಿ ಬಗ್ಗೆ!
ಜಿ ರಾಮ್‌ ಜಿಗೆ ರಾಜ್ಯ ಶೇ.40ರಷ್ಟು ಪಾಲು ನೀಡಲಾಗದು : ಡಿಕೆಶಿ