ಪಿಒಕೆಯನ್ನು ಕೈವಶ ಮಾಡಿಕೊಳ್ಳುತ್ತೇವೆ : ಶಾ

KannadaprabhaNewsNetwork |  
Published : Jul 31, 2025, 01:27 AM ISTUpdated : Jul 31, 2025, 04:09 AM IST
ಅಮಿತ್ ಶಾ | Kannada Prabha

ಸಾರಾಂಶ

 ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕಾಂಗ್ರೆಸ್ ಮತ್ತು ಪಿ. ಚಿದಂಬರಂ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಆಕ್ರಮಿತ ಕಾಶ್ಮೀರವನ್ನು ಪಾಕ್‌ಗೆ ನೀಡಿದ್ದು ಕಾಂಗ್ರೆಸ್‌. ನಾವು ಅದನ್ನು ಮರಳಿ ಕೈವಶ ಮಾಡಿಕೊಳ್ಳುತ್ತೇವೆ ಎಂದು ಗುಡುಗಿದ್ದಾರೆ.

 ನವದೆಹಲಿ: ಹಿಂದುಗಳು ಎಂದಿಗೂ ಭಯೋತ್ಪಾದಕರಾಗಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕಾಂಗ್ರೆಸ್ ಮತ್ತು ಪಿ. ಚಿದಂಬರಂ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಆಕ್ರಮಿತ ಕಾಶ್ಮೀರವನ್ನು ಪಾಕ್‌ಗೆ ನೀಡಿದ್ದು ಕಾಂಗ್ರೆಸ್‌. ನಾವು ಅದನ್ನು ಮರಳಿ ಕೈವಶ ಮಾಡಿಕೊಳ್ಳುತ್ತೇವೆ ಎಂದು ಗುಡುಗಿದ್ದಾರೆ.

ಪಹಲ್ಗಾಂ ದಾಳಿಕೋರರು ಭಾರತದವರೇ ಇರಬಹುದು. ಪಾಕ್‌ನವರೆಂದು ಸಾಬೀತಾಗಿಲ್ಲ ಎಂದು ಚಿದು ಹೇಳಿದ್ದರು. ಇದಕ್ಕೆ

ರಾಜ್ಯಸಭೆಯಲ್ಲಿ ಆಪರೇಷನ್ ಸಿಂದೂರ ಚರ್ಚೆಗೆ ಉತ್ತರಿಸಿದ ಶಾ, ‘ಹಿಂದು ಭಯೋತ್ಪಾದನೆ ಎಂಬ ಪದವನ್ನು ಯಾರು ಪರಿಚಯಿಸಿದರು? ಹಿಂದುಗಳು ಎಂದಿಗೂ ಭಯೋತ್ಪಾದಕರಾಗಲು ಸಾಧ್ಯವಿಲ್ಲ’ ಎಂದು ತಿರುಗೇಟು ನೀಡಿದರು,

‘ಪಹಲ್ಗಾಂ ದಾಳಿ ಕಾರಣ ಚಿದಂಬರಂ ನನ್ನ ರಾಜೀನಾಮೆಯನ್ನು ಒತ್ತಾಯಿಸಿದರು ಮತ್ತು ಭಾರತ ಸರ್ಕಾರದ ಆಪರೇಷನ್ ಸಿಂದೂರವನ್ನು ಪ್ರಶ್ನಿಸಿದರು. ಪಹಲ್ಗಾಂ ದಾಳಿಕೋರರನ್ನು ಮೊನ್ನೆ ತಲೆಗೆ ಗುಂಡು ಹೊಡೆದು ಸಾಯಿಸಿದ್ದೇವೆ. ಅವರು ಪಾಕಿಸ್ತಾನದವರೇ ಎಂದು ಪುರಾವೆಗಳ ಸಮೇತ ಸಾಬೀತಾಗಿದೆ. ಆದರೂ ಪಹಲ್ಗಾಂ ದಾಳಿಕೋರರು ಪಾಕಿಸ್ತಾನಿ ಭಯೋತ್ಪಾದಕರು ಎಂಬುದಕ್ಕೆ ಪುರಾವೆಗಳನ್ನು ಅವರು ಪದೇ ಪದೇ ಪ್ರಶ್ನಿಸಿದರು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಿಒಕೆ ಕೈವಶ ಮಾಡಿಕೊಳ್ತೇವೆ:

ಕಾಂಗ್ರೆಸ್‌ ಅಧಿಕಾರದಲ್ಲಿದ್ದರೆ ಈಗ ಪಾಕ್‌ ಮೇಲೆ ದಾಳಿ ಮಾಡದೇ ಪಾಕ್‌ಗೆ ಕೇವಲ ಸಾಕ್ಷ್ಯ ನೀಡಿ ಸುಮ್ಮನಾಗುತ್ತಿತ್ತು. ಉಗ್ರರ ಪರ ಮೃದುನಿಲುವು ಆ ಪಕ್ಷದ್ದು. ಆ ಪಕ್ಷವು ಪಾಕಿಸ್ತಾನದ ಜನನಕ್ಕೆ ಕಾರಣವಾಯಿತು. ಆಕ್ರಮಿತ ಕಾಶ್ಮೀರವನ್ನು ಪಾಕ್‌ಗೇ ಬಿಟ್ಟುಕೊಟ್ಟಿತು. ಆದರೆ ನಾವು ಪಿಒಕೆಯನ್ನು ವಾಪಸ್ ಭಾರತಕ್ಕೆ ತರುತ್ತೇವೆ ಎಂದು ಶ ಗುಡುಗಿದರು.

ರಾಜ್ಯಸಭೆಯಲ್ಲಿ ಸಿಂದೂರ ಚರ್ಚೆಗೆ ಮೋದಿ ಗೈರು: ವಿಪಕ್ಷಗಳ ಸಭಾತ್ಯಾಗ

ನವದೆಹಲಿ: ರಾಜ್ಯಸಭೆಯಲ್ಲಿ ನಡೆಯುತ್ತಿರುವ ಆಪರೇಷನ್ ಸಿಂದೂರ ಕುರಿತಾದ ಚರ್ಚೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳದೆ ಇರುವುದಕ್ಕೆ ಅಸಮಾಧಾನಗೊಂಡ ವಿಪಕ್ಷಗಳು ಮೋದಿ ವಿರುದ್ಧ ಪ್ರತಿಭಟನೆ ನಡೆಸಿ ಸಭಾತ್ಯಾಗ ಮಾಡಿದ ಪ್ರಸಂಗ ಬುಧವಾರ ನಡೆಯಿತು.ಈ ವೇಳೆ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿಯೇ ಇದ್ದರೂ ರಾಜ್ಯಸಭೆಯಲ್ಲಿನ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಇದು ಅವರು ಸಂಸತ್‌ಗೆ ಮತ್ತು ಸಂಸದರಿಗೆ ಮಾಡುವ ಅವಮಾನ’ ಎಂದು ಕಿಡಿಕಾರಿದರು. ಇದಕ್ಕೆ ಉತ್ತರಿಸಿದ ಶಾ, ‘ಮೋದಿ ಎಲ್ಲಿದ್ದಾರೆ ಎಂಬುದಕ್ಕೆ ನಾನು ಉತ್ತರಿಸುತ್ತೇನೆ. ನೀವು ಏಕೆ ಪ್ರಧಾನಿಯವರನ್ನೇ ಬಯಸುತ್ತೀರಿ? ಅವರು ಬಂದರೆ ನೀವು ಹೆಚ್ಚು ತೊಂದರೆಗೆ ಸಿಲುಕುತ್ತೀರಿ. ಮೊದಲು ನೀವು ನನ್ನನ್ನು ಎದುರಿಸಿ’ ಎಂದು ತಿರುಗೇಟು ನೀಡಿದರು.

PREV
Read more Articles on

Recommended Stories

ಹಿಂದೂ ಭಯೋತ್ಪಾದನೆ ಪದ ಹುಟ್ಟು ಹಾಕಿದ್ದ ಕಾಂಗ್ರೆಸ್ಸಿಗರು
ಮೈಸೂರು ಫ್ಯಾಕ್ಟರಿ ಕೇಸ್‌ : ವಶಪಡಿಸಿಕೊಂಡ ಡ್ರಗ್ಸ್‌ಮೌಲ್ಯ ₹435 ಕೋಟಿಗೆ