ನವದೆಹಲಿ: ವಿಶ್ವದ ಜನಪ್ರಿಯ ಆ್ಯಪ್‌ಗಳ ಪೈಕಿ ಒಂದಾದ ವಾಟ್ಸಾಪ್ ಇದೀಗ ತನ್ನ ಬಳಕೆದಾರರಿಗೆ ಕೃತಕ ಬುದ್ಧಿಮತ್ತೆ ಆಧರಿತ ಚಾಟ್‌ಬೋಟ್ ವ್ಯವಸ್ಥೆಯನ್ನು ಪರಿಚಯಿಸಿದೆ. ಭಾರತದಲ್ಲೂ ಆಯ್ದ ಗ್ರಾಹಕರಿಗೆ ಈ ಸೌಲಭ್ಯವನ್ನು ನೀಡಲಾಗಿದೆ.
ಚಾಟ್‌ಬೋಟ್‌ನಲ್ಲಿ ಹಲವು ಅವಕಾಶಗಳನ್ನು ಕಲ್ಪಿಸಲಾಗಿದೆ. ಅವುಗಳ ಮೂಲಕ ಕೃತಕ ಬುದ್ಧಿಮತ್ತೆ ಆಧರಿತ ಚಿತ್ರರಚನೆ ಮಾಡಬಹುದು, ಯಾವುದೇ ಪ್ರಶ್ನೆ ಕೇಳಿ ಉತ್ತರ ಪಡೆಯಬಹುದು, ಕಥೆ ಹೇಳು ಅಥವಾ ಜೋಕ್ಸ್ ಎನ್ನಬಹುದು.
ಕೆಲ ತಿಂಗಳ ಹಿಂದೆಯೇ ಜಾಗತಿಕ ಮಟ್ಟದಲ್ಲಿ ಆಯ್ದ ಬಳಕೆದಾರರಿಗೆ ಪ್ರಾಯೋಗಿಕವಾಗಿ ಈ ಅವಕಾಶ ಕಲ್ಪಿಸಲಾಗಿತ್ತು. ಅದನ್ನು ಇದೀಗ ಭಾರತ ಸೇರಿದಂತೆ ಇನ್ನಷ್ಟು ದೇಶಗಳಲ್ಲಿ ವ್ಯಾಪಕ ಪ್ರಮಾಣದ ಬಳಕೆದಾರರಿಗೆ ಬಿಡುಗಡೆ ಮಾಡಲಾಗಿದೆ.