2008ರಂದು ಪಾಕ್ ಮೂಲದ ಉಗ್ರರ ತಂಡ ಮುಂಬೈನಲ್ಲಿ ಟಾಟಾ ಗ್ರೂಪ್‌ಗೆ ಸೇರಿದ ತಾಜ್ ಹೋಟೆಲ್ ಸೇರಿ ಹಲವು ಕಡೆ ಭೀಕರ ದಾಳಿ ನಡೆಸಿತ್ತು. 160ಕ್ಕೂ ಹೆಚ್ಚು ಜನರನ್ನು ಬಲಿಪಡೆದ ದಾಳಿಯ ಸುದ್ದಿ ತಿಳಿಯುತ್ತಲೇ 70 ವರ್ಷದ ರತನ್ ಟಾಟಾ ಸ್ಥಳಕ್ಕೆ ಧಾವಿಸಿದ್ದರು.
ನಂತರ ಘಟನೆಯಲ್ಲಿ ಮಡಿದವರ ಕುಟುಂಬ, ಸಿಬ್ಬಂದಿಗಳನ್ನು ರತನ್ ವೈಯಕ್ತಿಕವಾಗಿ ಭೇಟಿ ಮಾಡಿ ಸಾಂತ್ವನ ಹೇಳಿದ್ದರು. ಉಗ್ರ ದಾಳಿಗೆ ಹೋಟೆಲ್ ಇದ್ದ ಸ್ಥಿತಿ ನೋಡಿದರೆ ಅದು ತಕ್ಷಣಕ್ಕೆ ಪುನಾರಂಭ ಸಾಧ್ಯತೆ ದೂರವಾಗಿಸಿತ್ತು. ಆದರ ರತನ್‌ರ ಛಲದಿಂದಾಗಿ ಕೇವಲ ಒಂದೇ ತಿಂಗಳಲ್ಲಿ ಹೋಟೆಲ್ ಪುನಾರಂಭವಾಗಿ ಉಗ್ರರ ವಿರುದ್ಧ ಸೆಟೆದಿದ್ದು ನಿಂತಿತ್ತು.
ಇನ್ನೊಂದು ವಿಶೇಷವೆಂದರೆ ಅಂಥದ್ದೊಂದು ದಾಳಿ ನಡೆಸಿದ್ದ ಪಾಕಿಸ್ತಾನ ದೇಶದ ಜಿಡಿಪಿಯನ್ನೇ ಟಾಟಾ ಸಮೂಹ ದಾಳಿ ನಡೆದ 6 ವರ್ಷಗಳಲ್ಲಿ ಮೀರಿಸಿತ್ತು.