ಗಗನ ಯಾತ್ರೆ ಮಾಡುವ ಗಗನಯಾತ್ರಿಗಳ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಬಹಿರಂಗಗೊಳಿಸಿದರು. ನಾಲ್ವರು ವಾಯುಪಡೆ ಅಧಿಕಾರಿಗಳಾಗಿದ್ದಾರೆ.
ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್: ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಅಭ್ಯಾಸ ಮಾಡಿದ್ದಾರೆ. ಏರ್‌ಪೋರ್ಸ್ ಅಕಾಡೆಮಿಯಿಂದ ಸ್ವೋರ್ಡ್ ಆಫ್ ಆನರ್ ಗೌರವಕ್ಕೆ ಪಾತ್ರರಾಗಿದ್ದಾರೆ.
1998ರಲ್ಲಿ ವಾಯುಪಡೆಯ ಯುದ್ಧಪಡೆಗೆ ಸೇರ್ಪಡೆ. ಇವರು ವಾಯುಪಡೆಯಲ್ಲಿ ತರಬೇತಿ ವಿಷಯದಲ್ಲಿ ಬೋಧನೆ ಮಾಡುವ ಜೊತೆಗೆ 3000 ಗಂಟೆಗಳಿಗೂ ಹೆಚ್ಚು ಕಾಲ ವಿಮಾನ ಉಡ್ಡಯನದ ಅಪಾರ ಅನುಭವ ಹೊಂದಿದ್ದಾರೆ.
ಸುಖೋಯ್- 30 ಎಂಕೆಐ, ಮಿಗ್ 21, ಮಿಗ್ 29, ಹಾಕ್, ಡೋರ್ನಿಯರ್, ಎಎನ್ 32 ಸೇರಿ ವಿವಿಧ ಮಾದರಿ ವಿಮಾನ ಉಡ್ಡಯನ ಮಾಡಿದ ಅನುಭವ ಹೊಂದಿದ್ದಾರೆ.
ಗ್ರೂಪ್ ಕ್ಯಾಪ್ಟನ್ ಅಜಿತ್ ಕೃಷ್ಣನ್: ಚೆನ್ನೈ ಮೂಲದವರು. ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಅಭ್ಯಾಸ ಮಾಡಿದ್ದಾರೆ. ರಾಷ್ಟ್ರಪತಿಗಳ ಚಿನ್ನದ ಪದಕ ಮತ್ತು ಏರ್‌ಪೋರ್ಸ್ ಅಕಾಡೆಮಿಯಿಂದ ಸ್ವೋರ್ಡ್ ಆಫ್ ಆನರ್ ಗೌರವಕ್ಕೆ ಪಾತ್ರರಾಗಿದ್ದಾರೆ.
2003ರಲ್ಲಿ ಭಾರತೀಯ ವಾಯುಪಡೆಯ ಯುದ್ಧವಿಮಾನ ವಿಭಾಗಕ್ಕೆ ಸೇರ್ಪಡೆ. ಇವರು ವಾಯುಪಡೆಯಲ್ಲಿ ತರಬೇತಿ ವಿಷಯದಲ್ಲಿ ಬೋಧನೆ ಮಾಡುವ ಜೊತೆಗೆ 2900 ಗಂಟೆಗಳಿಗೂ ಹೆಚ್ಚು ಕಾಲ ವಿಮಾನ ಉಡ್ಡಯನದ ಅಪಾರ ಅನುಭವ ಹೊಂದಿದ್ದಾರೆ.
ಸುಖೋಯ್- 30 ಎಂಕೆಐ, ಮಿಗ್ 21, ಮಿಗ್ 29, ಜಾಗ್ವಾರ್, ಡೋರ್ನಿಯರ್, ಎಎನ್ 32 ಸೇರಿ ವಿವಿಧ ಮಾದರಿ ವಿಮಾನ ಉಡ್ಡಯನ ಮಾಡಿದ ಅನುಭವ ಹೊಂದಿದ್ದಾರೆ.
ಗ್ರೂಪ್ ಕ್ಯಾಪ್ಟನ್ ಅಂಗದ್ ಪ್ರತಾಪ್: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನವರು. ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಅಭ್ಯಾಸ ಮಾಡಿದ್ದಾರೆ. 2004ರಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನ ವಿಭಾಗಕ್ಕೆ ಸೇರ್ಪಡೆಯಾಗಿದ್ದಾರೆ.
ಇವರು ವಾಯುಪಡೆಯಲ್ಲಿ ತರಬೇತಿ ವಿಷಯದಲ್ಲಿ ಬೋಧನೆ ಮಾಡುವ ಜೊತೆಗೆ 2000 ಗಂಟೆಗಳಿಗೂ ಹೆಚ್ಚು ಕಾಲ ವಿಮಾನ ಉಡ್ಡಯನದ ಅಪಾರ ಅನುಭವ ಹೊಂದಿದ್ದಾರೆ.
ಸುಖೋಯ್- 30 ಎಂಕೆಐ, ಮಿಗ್ 21, ಮಿಗ್ 29, ಜಾಗ್ವಾರ್, ಹಾಕ್, ಡೋರ್ನಿಯರ್, ಎಎನ್ 32 ಸೇರಿ ವಿವಿಧ ಮಾದರಿ ವಿಮಾನ ಉಡ್ಡಯನ ಮಾಡಿದ ಅನುಭವ ಹೊಂದಿದ್ದಾರೆ.
ವಿಂಗ್ ಕಮಾಂಡರ್ ಸುಭಾನ್ಷು ಶುಕ್ಲಾ: ಉತ್ತರಪ್ರದೇಶದ ಲಖನೌ ಮೂಲದವರು. ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಅಭ್ಯಾಸ ಮಾಡಿದ್ದಾರೆ. 2006ಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನ ವಿಭಾಗಕ್ಕೆ ಸೇರ್ಪಡೆಯಾಗಿದ್ದಾರೆ.
ಇವರು ವಾಯುಪಡೆಯಲ್ಲಿ ಯುದ್ಧಪಡೆಯ ನಾಯಕರಾಗಿ, ಟೆಸ್ಟ್ ಪೈಲಟ್ ಆಗಿರುವ ಹಿರಿಮೆ ಹೊಂದಿದ್ದಾರೆ. 2000 ಗಂಟೆಗಳ ಕಾಲ ವಿಮಾನ ಉಡ್ಡಯನದ ಅಪಾರ ಅನುಭವ ಹೊಂದಿದ್ದಾರೆ.
ಸುಖೋಯ್- 30 ಎಂಕೆಐ, ಮಿಗ್ 21, ಮಿಗ್ 29, ಜಾಗ್ವಾರ್, ಹಾಕ್, ಡೋರ್ನಿಯರ್, ಎಎನ್ 32 ಸೇರಿ ವಿವಿಧ ಮಾದರಿ ವಿಮಾನ ಉಡ್ಡಯನ ಮಾಡಿದ ಅನುಭವ ಹೊಂದಿದ್ದಾರೆ.