ಸಗಟು ಹಣದುಬ್ಬರ ಸೂಚ್ಯಂಕ 9 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ

KannadaprabhaNewsNetwork |  
Published : Jan 16, 2024, 01:50 AM ISTUpdated : Jan 16, 2024, 01:32 PM IST
ಸಗಟು ಬೆಲೆ ಸೂಚ್ಯಂಕ | Kannada Prabha

ಸಾರಾಂಶ

ಆಹಾರ ಬೆಲೆಗಳ ಭಾರೀ ಏರಿಕೆ ಹಿನ್ನೆಲೆಯಲ್ಲಿ ಸಗಟು ಹಣದುಬ್ಬರ ಸೂಚ್ಯಂಕವು ಒಂಭತ್ತು ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ.

ನವದೆಹಲಿ: ಸಗಟು ಬೆಲೆ ಸೂಚ್ಯಂಕ (ಡಬ್ಲ್ಯೂಪಿಐ) ಆಧಾರಿತ ಹಣದುಬ್ಬರವು ಡಿಸೆಂಬರ್ 2023ರಲ್ಲಿ ಒಂಬತ್ತು ತಿಂಗಳ ಗರಿಷ್ಠವಾದ 0.73 ಶೇಕಡಾಕ್ಕೆ ಏರಿಕೆ ಕಂಡಿದೆ. ಆಹಾರದ ಬೆಲೆಗಳಲ್ಲಿನ ತೀವ್ರ ಏರಿಕೆಯು ಇದಕ್ಕೆ ಕಾರಣವಾಗಿದೆ.

ಆಹಾರ ಪದಾರ್ಥಗಳು, ಯಂತ್ರೋಪಕರಣಗಳು, ಸಾರಿಗೆ ಉಪಕರಣಗಳು, ಕಂಪ್ಯೂಟರ್, ಎಲೆಕ್ಟ್ರಾನಿಕ್ಸ್ ಮತ್ತು ಆಪ್ಟಿಕಲ್ ಉತ್ಪನ್ನಗಳು ಸೇರಿದಂತೆ ಇತರ ಉಪಕರಣಗಳ ಬೆಲೆಯಲ್ಲಿ ಹೆಚ್ಚಳದಿಂದ ಆಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.

ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಸಗಟು ಹಣದುಬ್ಬರ ಸೂಚ್ಯಂಕ ಋುಣಾತ್ಮಕವಾಗಿತ್ತು. ಆದರೆ ನವೆಂಬರ್‌ನಲ್ಲಿ ಮತ್ತೆ ಏರಿಕೆ ಹಾದಿ ಹಿಡಿದಿತ್ತು.

ಸೆನ್ಸೆಕ್ಸ್‌ 759 ಅಂಕ ಏರಿಕೆ, ಮೊದಲ ಬಾರಿ 73000 ಅಂಕಗಳ ಮೇಲೆ ಅಂತ್ಯ

ಮುಂಬೈ: ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ ಸೋಮವಾರ 759 ಅಂಕಗಳ ಭಾರೀ ಏರಿಕೆ ಕಂಡು 73327 ಅಂಕಗಳಲ್ಲಿ ಮುಕ್ತಾಯವಾಗಿದೆ. ಸೆನ್ಸೆಕ್ಸ್‌ 73000 ಅಂಕಗಳ ಮೇಲೆ ಮುಕ್ತಾಯವಾಗಿದ್ದು ಇದೇ ಮೊದಲು.

ಇದೇ ವೇಳೆ ನಿಫ್ಟಿ ಕೂಡಾ 203 ಅಂಕ ಏರಿಕೆಯೊಂದಿಗೆ 22115 ಅಂಕಗಳಲ್ಲಿ ಮುಕ್ತಾಯವಾಗಿದೆ. ಇದು ಕೂಡಾ ನಿಫ್ಟಿಯ ಗರಿಷ್ಠ ಮುಕ್ತಾಯ ಅಂಕವಾಗಿದೆ.

ಐಟಿ ವಲಯವು ಕಳೆದ ತ್ರೈಮಾಸಿಕದಲ್ಲಿ ನಿರೀಕ್ಷೆಗೆ ಮೀರಿ ಲಾಭ ಮಾಡಿರುವುದು, ಐಟಿ ಕಂಪನಿಗಳ ಷೇರು ಬೆಲೆ ಗಗನಕ್ಕೇರುವಂತೆ ಮಾಡಿದೆ. ಹೀಗಾಗಿ ಸೆನ್ಸೆಕ್ಸ್‌ ಮತ್ತು ನಿಫ್ಟಿ ಎರಡೂ ಸೂಚ್ಯಂಕಗಳು ಕೂಡಾ ಐಟಿ ಬಲದಲ್ಲಿ ಸೋಮವಾರ ಭಾರೀ ಏರಿಕೆ ಕಂಡವು.

ಕಳೆದ 5 ದಿನಗಳಲ್ಲಿ ಸೆನ್ಸೆಕ್ಸ್‌ ಒಟ್ಟಾರೆ 1972 ಅಂಕಗಳ ಏರಿಕೆ ಕಂಡಿದೆ. ಪರಿಣಾಮ ಹೂಡಿಕೆದಾರರ ಸಂಪತ್ತಿನಲ್ಲಿ 9.68 ಲಕ್ಷ ಕೋಟಿ ರು.ನಷ್ಟು ಹೆಚ್ಚಳವಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಶಬರಿಮಲೆ ಚಿನ್ನಕ್ಕೆ ಕನ್ನ: ದೇವಸ್ವಂ ಮಾಜಿ ಸದಸ್ಯ ಸೆರೆ
ಷೇರಿಗಿಂತ ಚಿನ್ನ ಬೆಳ್ಳಿ ಹೂಡಿಕೆಯೇ ಹೆಚ್ಚು ಲಾಭ