ನವದೆಹಲಿ: ಮಾತನಾಡುವುದಕ್ಕೆ ಮತ್ತು ಸೆಕ್ಸ್ ಮಾಡುವುದಕ್ಕೂ ಎಂದು ಪತ್ನಿ ಹಣ ಕೇಳುತ್ತಾಳೆ ಎಂಬ ಪತಿ ನೋವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಆತನಿಗೆ ಪತ್ನಿಯಿಂದ ಡೈವೋರ್ಸ್ ನೀಡಿದ ಘಟನೆ ತೈವಾನ್‌ನಲ್ಲಿ ನಡೆದಿದೆ.
2014 ರಲ್ಲಿ ಮದುವೆಯಾದ ಇವರಿಗೆ ಮಕ್ಕಳಿದ್ದಾರೆ. ಆರಂಭದಲ್ಲಿ ಚೆನ್ನಾಗಿದ್ದ ಇವರ ದಾಂಪತ್ಯ ಜೀವನ ಕಾಲ ಕಳೆದಂತೆ ಪತ್ನಿ ಪತಿಯೊಂದಿಗೆ ಮಾತನಾಡುವುದನ್ನೇ ಬಿಟ್ಟಿದ್ದಳು. ಲೈಂಗಿಕ ಕ್ರಿಯೆಯನ್ನು ತಿರಸ್ಕರಿಸುತ್ತಿದ್ದಳು. ಇವರಿಬ್ಬರ ನಡುವೆ ನೇರ ಸಂಭಾಷಣೆಗಿಂದ ಸಂದೇಶ ಕಳುಹಿಸುವ ಅಪ್ಲಿಕೇಷನ್‌ಗಳಲ್ಲೇ ಹೆಚ್ಚು ಸಂಭಾಷಣೆ ನಡೆಯುತ್ತಿತ್ತು.