ಸೇನಾ ಸಮವಸ್ತ್ರದಲ್ಲೇ ಪತಿ ನಮಾಂಶ್‌ಗೆ ಪತ್ನಿ ನಮನ

KannadaprabhaNewsNetwork |  
Published : Nov 24, 2025, 02:15 AM IST
Namansh Syal

ಸಾರಾಂಶ

 ತೇಜಸ್‌ ಯುದ್ಧವಿಮಾನ ಪತನವಾಗಿ ದುರಂತ ಸಾವಿಗೀಡಾದ ಪೈಲಟ್‌ ವಿಂಗ್ ಕಮಾಂಡರ್‌ ನಮಾಂಶ್‌ ಸ್ಯಾಲ್‌ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಹುಟ್ಟೂರು ಕಾಂಗ್ರಾದಲ್ಲಿ ನಡೆದಿದೆ. ಈ ವೇಳೆ ವಾಯುಪಡೆಯಲ್ಲಿ ಉದ್ಯೋಗದಲ್ಲಿರುವ ಸ್ಯಾಲ್‌ ಪತ್ನಿ ಸಮವಸ್ತ್ರದಲ್ಲೇ ಅಂತಿಮಕ್ರಿಯೆಯಲ್ಲಿ ಭಾಗಿಯಾದರು.

ಶಿಮ್ಲಾ: ದುಬೈ ವೈಮಾನಿಕ ಪ್ರದರ್ಶನದ ವೇಳೆ ತೇಜಸ್‌ ಯುದ್ಧವಿಮಾನ ಪತನವಾಗಿ ದುರಂತ ಸಾವಿಗೀಡಾದ ಪೈಲಟ್‌ ವಿಂಗ್ ಕಮಾಂಡರ್‌ ನಮಾಂಶ್‌ ಸ್ಯಾಲ್‌ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಹುಟ್ಟೂರು ಕಾಂಗ್ರಾದಲ್ಲಿ ನಡೆದಿದೆ. ಈ ವೇಳೆ ವಾಯುಪಡೆಯಲ್ಲಿ ಉದ್ಯೋಗದಲ್ಲಿರುವ ಸ್ಯಾಲ್‌ ಪತ್ನಿ ಸಮವಸ್ತ್ರದಲ್ಲೇ ಅಂತಿಮಕ್ರಿಯೆಯಲ್ಲಿ ಭಾಗಿಯಾದರು.

ದೇಶಭಕ್ತಿಯ ಘೋಷಣೆ

ನ.21ರಂದು ದುರ್ಮರಣ ಹೊಂದಿದ ನಮಾಂಶ್ ಪಾರ್ಥಿವ ಶರೀರವನ್ನು ಭಾನುವಾರ ಹುಟ್ಟೂರಿಗೆ ತರಲಾಯಿತು. ಈ ವೇಳೆ ದಾರಿಯುದ್ದಕ್ಕೂ ನೂರಾರು ಜನರು ಸಾಲುಗಟ್ಟಿ ನಿಂತು ದೇಶಭಕ್ತಿಯ ಘೋಷಣೆಗಳನ್ನು ಕೂಗಿ ಅಂತಿಮ ದರ್ಶನ ಪಡೆದರು. 

ನಮಾಂಶ್‌ ಮಡದಿ ಸೇನಾ ಸಮವಸ್ತ್ರದಲ್ಲೇ ಭಾಗಿ

ಈ ವೇಳೆ ಐಎಎಫ್‌ ಅಧಿಕಾರಿ ನಮಾಂಶ್‌ ಮಡದಿ ಸೇನಾ ಸಮವಸ್ತ್ರದಲ್ಲೇ ಭಾಗಿಯಾಗಿ 6 ವರ್ಷದ ಮಗಳ ಜತೆಗೆ ಪತಿಗೆ ಭಾವುಕ ವಿದಾಯ ಹೇಳಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಶೀಘ್ರದಲ್ಲೇ ಆಲ್ಕೋಹಾಲ್‌ನಿಂದ ಓಡಾಡಲಿವೆ ಭಾರತದ ಕಾರುಗಳು
ಪುರುಷರ ಕೋಣೆಗೆ ಹೋಗ್ದೆ ಸ್ತ್ರೀ ರಾಜಕಾರಣಿಗಳು ಯಶಸ್ವಿ ಆಗಲ್ಲ: ಪಪ್ಪು