ಗೂಗಲ್‌, ಮೈಕ್ರೋಸಾಫ್ಟ್‌ ನಮ್ಮ ಮುಂದಿನ ದಾಳಿ ಗುರಿ : ಇರಾನ್‌!

KannadaprabhaNewsNetwork |  
Published : Mar 12, 2026, 02:00 AM ISTUpdated : Mar 12, 2026, 04:46 AM IST
Google microsoft

ಸಾರಾಂಶ

ಸೇನಾನೆಲೆ, ತೈಲಾಗಾರ, ವಿಮಾನನಿಲ್ದಾಣಗಳಿಗೆ ಸೀಮಿತವಾಗಿದ್ದ ದಾಳಿ-ಪ್ರತಿದಾಳಿಗಳು ಇದೀಗ ಆರ್ಥಿಕತೆಗಳನ್ನೇ ನೇರ ಗುರಿಯಾಗಿಸಿಕೊಳ್ಳುವತ್ತ ತಿರುಗಿದೆ. ರಾಜಧಾನಿ ಟೆಹ್ರಾನ್‌ನಲ್ಲಿರುವ ಬ್ಯಾಂಕ್‌ ಒಂದರ ಮೇಲೆ ದಾಳಿ ನಡೆದ ಬೆನ್ನಲ್ಲೇ ಕುಪಿತವಾಗಿರುವ ಇರಾನ್‌, ಮಧ್ಯಪ್ರಾಚ್ಯದಲ್ಲಿರುವ ಬ್ಯಾಂಕ್‌ ಹಾಗೂ ಐಟಿ ಕಂಪನಿಗಳ ಮೇಲೆ ಆಕ್ರಮಣ ಮಾಡುವುದಾಗಿ ಘೋಷಿಸಿದೆ.

 ಟೆಹ್ರಾನ್: ಸೇನಾನೆಲೆ, ತೈಲಾಗಾರ, ವಿಮಾನನಿಲ್ದಾಣಗಳಿಗೆ ಸೀಮಿತವಾಗಿದ್ದ ದಾಳಿ-ಪ್ರತಿದಾಳಿಗಳು ಇದೀಗ ಆರ್ಥಿಕತೆಗಳನ್ನೇ ನೇರ ಗುರಿಯಾಗಿಸಿಕೊಳ್ಳುವತ್ತ ತಿರುಗಿದೆ. ರಾಜಧಾನಿ ಟೆಹ್ರಾನ್‌ನಲ್ಲಿರುವ ಬ್ಯಾಂಕ್‌ ಒಂದರ ಮೇಲೆ ದಾಳಿ ನಡೆದ ಬೆನ್ನಲ್ಲೇ ಕುಪಿತವಾಗಿರುವ ಇರಾನ್‌, ಮಧ್ಯಪ್ರಾಚ್ಯದಲ್ಲಿರುವ ಬ್ಯಾಂಕ್‌ ಹಾಗೂ ಐಟಿ ಕಂಪನಿಗಳ ಮೇಲೆ ಆಕ್ರಮಣ ಮಾಡುವುದಾಗಿ ಘೋಷಿಸಿದೆ.

ಅವರೇ ನಮಗೆ ಅವಕಾಶ ಮಾಡಿಕೊಟ್ಟಿದ್ದಾರೆ

ಐಆರ್‌ಜಿಸಿಯ ಖತಮ್ ಅಲ್-ಅನ್ಬಿಯಾ ಪ್ರಧಾನ ಕಚೇರಿಯ ವಕ್ತಾರ ಮಾತನಾಡಿ, ‘ಅಮೆರಿಕ ಮತ್ತು ಇಸ್ರೇಲ್‌ನ ಬ್ಯಾಂಕ್‌ ಸೇರಿ ಇತರೆ ಆರ್ಥಿಕ ಸಂಸ್ಥೆಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಅವರೇ ನಮಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಆದ್ದರಿಂದ ಮಧ್ಯಪ್ರಾಚ್ಯದಲ್ಲಿರುವ ಶತ್ರುರಾಷ್ಟ್ರಗಳಿಗೆ ಸೇರಿದ ಆರ್ಥಿಕ ಕೇಂದ್ರಗಳ ಮೇಲೆ ಆಕ್ರಮಣ ಮಾಡಲಿದ್ದೇವೆ. ನಾಗರಿಕರು ಅವುಗಳಿಂದ ದೂರವಿರಿ’ ಎಂದು ಎಚ್ಚರಿಕೆ ನೀಡಿದ್ದಾರೆ.

ಒಂದೊಮ್ಮೆ ಅತ್ಯಂತ ಶಾಂತ ಹಾಗೂ ಸುರಕ್ಷಿತ ನಗರವೆಂಬ ಹಣೆಪಟ್ಟಿ ಹೊಂದಿದ್ದ ಯುಎಇಯ ದುಬೈ ಮತ್ತು ಸೌದಿ ಅರೇಬಿಯಾವನ್ನು ಸಂಪೂರ್ಣ ಅಸ್ಥಿರಗೊಳಿಸುವ ಪಣ ತೊಟ್ಟಿರುವ ಇರಾನ್‌, ಅಲ್ಲಿನ ಬ್ಯಾಂಕ್‌ಗಳು ಸೇರಿದಂತೆ ಆರ್ಥಿಕ ಸಂಸ್ಥೆಗಳ ಮೇಲೆ ದಾಳಿ ಮಾಡುವುದಾಗಿ ಘೋಷಿಸಿದೆ.

ಐಟಿ ಕಂಪನಿಗಳೂ ಟಾರ್ಗೆಟ್‌:

ಈಗಾಗಲೇ ಕೆಲ ಗಲ್ಫ್‌ ರಾಷ್ಟ್ರಗಳಲ್ಲಿ ತಮ್ಮ ಕಾರ್ಯಾಚರಣೆಯನ್ನು ಭಾಗಶಃ ನಿಲ್ಲಿಸಿರುವ ಐಟಿ ಕಂಪನಿಗಳಿಗೂ ದುಃಸ್ಥಿತಿ ಒದಗಲಿದೆ ಎನ್ನಲಾಗಿದೆ. ಐಆರ್‌ಜಿಸಿಗೆ ಸಂಬಂಧಿಸಿದ ತನ್ಸಿಂ ಪತ್ರಿಕೆಯಲ್ಲಿ ಗೂಗಲ್‌, ಮೈಕ್ರೊಸಾಫ್ಟ್‌, ಒರಾಕಲ್‌, ಐಬಿಎಂ, ಎನ್ವಿಡಿಯಾ ಸೇರಿದಂತೆ ಅಮೆರಿಕದ ಐಟಿ ಕಂಪನಿಗಳ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಇವುಗಳು ಇಸ್ರೇಲ್‌ ಜತೆಗೆ ಸಂಬಂಧ ಹೊಂದಿ ಯುದ್ಧದಲ್ಲಿ ಸಹಕರಿಸುತ್ತಿವೆ ಎಂದು ಆರೋಪಿಸಲಾಗಿದೆ. ಜತೆಗೆ ಇದೇ ಕಾರಣಕ್ಕೆ ಅವುಗಳೇ ಇರಾನ್‌ನ ಹೊಸ ಗುರಿಗಳು ಎಂದು ಬರೆಯಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಲ್ಯಾಂಡಿಂಗ್‌ ವೇಳೆ ಕಳಚಿದ ವಿಮಾನದ ನೋಸ್‌ ವೀಲ್‌: ಅಪಾಯವಿಲ್ಲ
ಕೊಲ್ಲಿ ಯುದ್ಧದಿಂದ ಆತ್ಮನಿರ್ಭರತೆಯ ಪಾಠ: ಮೋದಿ