2024- 25ನೇ ಹಣಕಾಸು ವರ್ಷಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಈ ಮಧ್ಯಂತರ ಬಜೆಟ್‌ನಲ್ಲಿ 26,000 ಕೋಟಿ ರು. ಮೀಸಲಿಡಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಇದು ಕಳೆದ ಬಜೆಟ್‌ನಲ್ಲಿ ಇದೇ ಇಲಾಖೆಗೆ ಮೀಸಲಿಡಲಾಗಿದ್ದ 25,448.68 ಕೋಟಿ ರು. ಹಣಕ್ಕಿಂತ ಶೇ.2.52ರಷ್ಟು ಹೆಚ್ಚಳವಾಗಿದೆ.
ಈ ಪೈಕಿ ಚಿಕ್ಕ ಮಕ್ಕಳಿಗೆ ಹೆಚ್ಚಿನ ಪೌಷ್ಠಿಕಾಂಶ ವಿತರಣೆಗೆ ಸಕ್ಷಮ್ ಅಂಗನವಾಡಿ ಮತ್ತು ಪೋಷಣೆ 2.0 ಕಾರ್ಯಕ್ರಮಕ್ಕೆ ಅತಿ ಹೆಚ್ಚು, ಅಂದರೆ ಬರೋಬ್ಬರಿ 21,000 ಕೋಟಿ ರು.ಗಳನ್ನು ಮೀಸಲಿಡಲಾಗಿದೆ.
ಉಳಿದಂತೆ ಮಹಿಳಾ ಸುರಕ್ಷತೆ ಮತ್ತು ಸಬಲೀಕರಣಕ್ಕಾಗಿ ‘ಶಕ್ತಿ’ ಯೋಜನೆಗೆ 3,145 ಕೋಟಿ ರು. ಮತ್ತು ‘ವಾತ್ಸಲ್ಯ’ ಯೋಜನೆಗೆ 1,472 ಕೋಟಿ ರು. ಹಣ ಮೀಸಲಿಡಲಾಗಿದೆ.