ಯುಪಿಯಲ್ಲಿ ಪ್ರಕರಣ । ವಿದೇಶಿ ಜಾಲದ ನಂಟಿನ ಶಂಕೆಲಖನೌ: ಶ್ರೀಮಂತ ಕುಟುಂಬದ ಮಹಿಳೆಯರಿಗೆ ಉಚಿತ ತರಬೇತಿ ಹೆಸರಲ್ಲಿ ಜಿಮ್‌ಗೆ ಸೇರಿಸಿಕೊಂಡು ಬಳಿಕ ಅವರನ್ನು ಮತಾಂತರ ಮಾಡುವ ಮತ್ತು ಅವರೊಂದಿಗಿನ ಸಲುಗೆ ದೃಶ್ಯವನ್ನು ಹಣ ಸುಲಿಗೆ ಮಾಡಲು ಬಳಸುತ್ತಿದ್ದ ಜಾಲವೊಂದನ್ನು ಯುಪಿ ಪೊಲೀಸರು ಬಯಲಿಗೆಳೆದಿದ್ದಾರೆ. ಜೊತೆಗೆ ಈ ಜಾಲಕ್ಕೆ ವಿದೇಶಿ ನಂಟಿನ ಶಂಕೆಯೂ ವ್ಯಕ್ತವಾಗಿದೆ.
==
ಸಹಪಾಠಿ ಮತಾಂತರಕ್ಕೆ 5 ಅಪ್ರಾಪ್ತ ಮುಸಲ್ಮಾನ ಹುಡುಗೀರ ಯತ್ನ: ಕೇಸ್ಮುರಾದಾಬಾದ್: ಸಹಪಾಠಿಗೆ ಬುರ್ಖಾ ಧರಿಸುವಂತೆ ಮತ್ತು ಮತಾಂತರಗೊಳ್ಳುವಂತೆ 5 ಅಪ್ರಾಪ್ತ ಮುಸಲ್ಮಾನ ಬಾಲಕಿಯರು ಒತ್ತಾಯಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಸಂತ್ರಸ್ತೆಯ ಸಹೋದರ ನೀಡಿದ ದೂರಿನ ಆಧಾರದಲ್ಲಿ ಮತಾಂತರ ವಿರೋಧಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಕಳೆದ ಡಿ.12ರಂದು ಸೆರೆಯಾದ ವಿಡಿಯೋದಲ್ಲಿ ಹಿಂದೂ ಹುಡುಗಿಯೊಬ್ಬಳು ಬುರ್ಖಾ ಧರಿಸಿದ್ದು, 5 ಮುಸಲ್ಮಾನ ಹುಡುಗಿಯರು ಅದನ್ನು ಸರಿಪಡಿಸುತ್ತಿರುವುದನ್ನು ಕಾಣಬಹುದು. ಇದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ಬೆನ್ನಲ್ಲೇ, ‘ನನ್ನ ಸಹೋದರಿಯ ಸಹಪಾಠಿಗಳಾದ ಆ ಐವರು ಆಕೆಯ ಮತಾಂತರ ಮಾಡಲು ಯತ್ನಿಸುತ್ತಿದ್ದರು’ ಎಂದು ದಕ್ಷ್ ಚೌಧರಿ ಆರೋಪಿಸಿದ್ದರು. 2021ರ ಅಕ್ರಮ ಮತಾಂತರ ತಡೆ ಕಾಯ್ದೆಯ ಸೆಕ್ಷನ್ 3 ಮತ್ತು 5(ಎ) ಅಡಿಯಲ್ಲಿ ದೂರು ದಾಖಲಿಸಿಕೊಂಡ ಪೊಲೀಸರು, ‘ಅವರೆಲ್ಲ ಹೊಟೆಲ್‌ಗೆ ಹೊರಟಿದ್ದು, ತನ್ನಣ್ಣ ನೋಡದಿರಲಿ ಎಂದು ಆಕೆ ಬುರ್ಖಾ ಧರಿಸಿದ್ದಿರಬಹುದು’ ಎಂಬ ಅನುಮಾನ ವ್ಯಕ್ತಪಡಿಸಿದ್ದು, ತನಿಖೆ ಆರಂಭಿಸಿದ್ದಾರೆ.