ಭಾರತದ ಜಿಡಿಪಿ ಅಭಿವೃದ್ಧಿ ನಿರೀಕ್ಷೆ ಭರ್ಜರಿ ಜಿಗಿತ!

KannadaprabhaNewsNetwork |  
Published : Apr 04, 2024, 01:10 AM ISTUpdated : Apr 04, 2024, 05:40 AM IST
ಜಿಡಿಪಿ | Kannada Prabha

ಸಾರಾಂಶ

ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಆರ್ಥಿಕತೆ ಎಂಬ ಹಿರಿಮೆಯನ್ನು ತನ್ನದಾಗಿಸಿಕೊಂಡಿರುವ ಭಾರತ 2024ನೇ ಹಣಕಾಸು ವರ್ಷದಲ್ಲಿ ಭಾರತ ಶೇ.7.5ರಷ್ಟು ಆರ್ಥಿಕ ಪ್ರಗತಿ ಸಾಧಿಸಲಿದೆ ಎಂದು ವಿಶ್ವಬ್ಯಾಂಕ್‌ ಅಂದಾಜಿಸಿದೆ.

ವಾಷಿಂಗ್ಟನ್‌: ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಆರ್ಥಿಕತೆ ಎಂಬ ಹಿರಿಮೆಯನ್ನು ತನ್ನದಾಗಿಸಿಕೊಂಡಿರುವ ಭಾರತ 2024ನೇ ಹಣಕಾಸು ವರ್ಷದಲ್ಲಿ ಭಾರತ ಶೇ.7.5ರಷ್ಟು ಆರ್ಥಿಕ ಪ್ರಗತಿ ಸಾಧಿಸಲಿದೆ ಎಂದು ವಿಶ್ವಬ್ಯಾಂಕ್‌ ಅಂದಾಜಿಸಿದೆ.ವಿಶೇಷವೆಂದರೆ ವಿಶ್ವಬ್ಯಾಂಕ್‌ ಕೆಲ ತಿಂಗಳ ಹಿಂದೆ ಪ್ರಕಟಿಸಿದ ತನ್ನ ವರದಿಯಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಶೇ.6.3ರಷ್ಟು ಇರಬಹುದು ಎಂದು ಹೇಳಿತ್ತು. ಅದಕ್ಕೆ ಹೋಲಿಸಿದರೆ ಇದೀಗ ಪ್ರಗತಿ ದರ ಭಾರೀ ಏರಿಕೆಯ ಸುಳಿವನ್ನು ಅದು ನೀಡಿದೆ. ಅಂದರೆ ಶೇ.1.2ರಷ್ಟು ಹೆಚ್ಚಳ ಮಾಡಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಇಡೀ ದಕ್ಷಿಣ ಏಷ್ಯಾ ವಲಯ ಶೇ.6.0ರಷ್ಟು ಜಿಡಿಪಿ ಪ್ರಗತಿ ಸಾಧಿಸಲಿದೆ. ಇದಕ್ಕೆ ಮುಖ್ಯವಾಗಿ ಭಾರತದಲ್ಲಿ ಉತ್ತಮ ಆರ್ಥಿಕ ಪ್ರಗತಿ, ಪಾಕಿಸ್ತಾನ ಮತ್ತು ಶ್ರೀಲಂಕಾ ದೇಶಗಳಲ್ಲಿ ಆರ್ಥಿಕತೆ ಮತ್ತೆ ಹಳಿಗೆ ಮರಳಿರುವುದು ಕಾರಣ ಎಂದು ದಕ್ಷಿಣ ಏಷ್ಯಾ ಕುರಿತಾದ ತನ್ನ ವರದಿಯಲ್ಲಿ ವಿಶ್ವಬ್ಯಾಂಕ್‌ ಹೇಳಿದೆ.

2023-24ನೇ ಸಾಲಿನ ತ್ರೈಮಾಸಿಕದಲ್ಲಿ ಭಾರತ ಅತ್ಯುತ್ತಮ ಪ್ರಗತಿ ಸಾಧಿಸಿದೆ. ಈ ಬೆಳವಣಿಗೆ ದರ 2024ನೇ ಹಣಕಾಸು ವರ್ಷದಲ್ಲೂ ಮುಂದುವರೆದು ಶೇ.7.5ರಷ್ಟು ಆರ್ಥಿಕ ಪ್ರಗತಿ ದಾಖಲಾಗಲಿದೆ. ಆದರೆ 2025ನೇ ಸಾಲಿನಲ್ಲಿ ಈ ಪ್ರಮಾಣ ಶೇ.6.6ರಷ್ಟು ಇರಲಿದೆ. ಆದರೆ ನಂತರದ ವರ್ಷಗಳಲ್ಲಿ ಅದು ಮತ್ತೆ ಏರುಗತಿಯಲ್ಲಿ ಸಾಗಲಿದೆ ಎಂದು ವರದಿ ಹೇಳಿದೆ.

ಈ ಬೆಳವಣಿಗೆಗಳಿಗೆ ಪೂರಕವಾಗಿ ಸದ್ಯ ಭಾರತದಲ್ಲಿ ಹಣದುಬ್ಬರ ಪ್ರಮಾಣ ಆರ್‌ಬಿಐನ ಗುರಿಯಾದ ಶೇ.2 ಹಾಗೂ ಶೇ.6ರ ಮಿತಿಯಲ್ಲೇ ಇದೆ. 2023ರ ಫೆಬ್ರುವರಿಯಿಂದ ಬಡ್ಡಿದರದಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ. ದೇಶದಲ್ಲಿ ವಾಣಿಜ್ಯ ವಲಯಕ್ಕೆ ಸಾಲ ವಿತರಣೆ ಪ್ರಮಾಣ ಶೇ.14ರಷ್ಟು ಏರಿಕೆ ಕಂಡಿದೆ. ಇದು ಕಳೆದ 10 ವರ್ಷಗಳಲ್ಲೇ ಅತ್ಯಧಿಕ ಏರಿಕೆ. ಬ್ಯಾಂಕ್‌ಗಳ ಅನುತ್ಪಾದಕ ಆಸ್ತಿ ಪ್ರಮಾಣವೂ ನಿಗದಿತ ಮಿತಿಯಲ್ಲೇ ಇದೆ. ವಿದೇಶಿ ಹೂಡಿಕೆದಾರರ ಪ್ರಮಾಣ ನಿರಂತರ ಏರುಗತಿಯಲ್ಲೇ ಇದೆ. ದೇಶದ ವಿನಿಮಯ ಸಂಗ್ರಹವೂ ದಾಖಲೆ ಮಟ್ಟ ತಲುಪಿದೆ. ಇದು ದೇಶದ 11 ತಿಂಗಳ ಆಮದು ನಿರ್ವಹಿಸುವಷ್ಟು ಇದೆ ಎಂದು ವಿಶ್ವಬ್ಯಾಂಕ್‌ ವರದಿ ಹೇಳಿದೆ.

ಅನುಕೂಲಕರ ಸಂಗತಿಗಳಿವು

- ಹಣದುಬ್ಬರ ಶೇ.6ಕ್ಕಿಂತ ಕಡಿಮೆ ಇದೆ

- 2023ರ ಫೆಬ್ರವರಿಯಿಂದ ಬಡ್ಡಿದರ ಏರಿಕೆ ಇಲ್ಲ

- ವಾಣಿಜ್ಯ ಸಾಲ ವಿತರಣೆ ಶೇ.14ರಷ್ಟು ಏರಿಕೆ

- ನಿಗದಿತ ಮಿತಿಯಲ್ಲಿ ಬ್ಯಾಂಕ್‌ಗಳ ಸುಸ್ತಿಸಾಲ

- ವಿದೇಶಿ ಹೂಡಿಕೆ ಪ್ರಮಾಣ ನಿರಂತರ ಏರಿಕೆ

- ದೇಶದ ವಿದೇಶಿ ವಿನಿಮಯ ಭಾರೀ ಹೆಚ್ಚಳ

PREV

Recommended Stories

ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳ ವಿರುದ್ಧ ಕೇಂದ್ರಕ್ಕೆ ಮಹಾ ದೂರು
ಸನಾತನ ಧರ್ಮದ ಕೊಂಡಿ ಕಳಚಲು ಶಿಕ್ಷಣದಿಂದ ಮಾತ್ರ ಸಾಧ್ಯ : ಕಮಲ್‌