ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಶೇ.74 ರಷ್ಟು ಮತದಾನ

ಉರಿ ಬಿಸಿಲಿನ ಕಾರಣಕ್ಕೆ ಬೆಳಗ್ಗೆ ಕೆಲಕಾಲ ಮಂದಗತಿಯಲ್ಲಿ ಮತದಾನ ಸಾಗಿದ್ದು ಬಿಟ್ಟರೆ ಮಧ್ಯಾಹ್ನ ಬಳಿಕ ಮತಗಟ್ಟೆಗಳಿಗೆ ಮತದಾರರು ಹರಿದು ಬಂದು ಬಿರುಸಿನ ಮತದಾನ ನಡೆಸಿ ಉತ್ಸಾಹ ತೋರಿದ ದೃಶ್ಯಗಳು ಕಂಡು ಬಂದವು.

KannadaprabhaNewsNetwork | Published : Apr 26, 2024 7:51 PM IST

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಲೋಕಸಭಾ ಚುನಾವಣೆಗೆ ಶುಕ್ರವಾರ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ನಡೆದ ಮತದಾನದ ವೇಳೆ ಶೇ.74 ರಷ್ಟು ಮತದಾನ ದಾಖಲಾಗಿದೆ.

ಉರಿ ಬಿಸಿಲಿನ ಕಾರಣಕ್ಕೆ ಬೆಳಗ್ಗೆ ಕೆಲಕಾಲ ಮಂದಗತಿಯಲ್ಲಿ ಮತದಾನ ಸಾಗಿದ್ದು ಬಿಟ್ಟರೆ ಮಧ್ಯಾಹ್ನ ಬಳಿಕ ಮತಗಟ್ಟೆಗಳಿಗೆ ಮತದಾರರು ಹರಿದು ಬಂದು ಬಿರುಸಿನ ಮತದಾನ ನಡೆಸಿ ಉತ್ಸಾಹ ತೋರಿದ ದೃಶ್ಯಗಳು ಕಂಡು ಬಂದವು. ವಿವಿಧ ಕ್ಷೇತ್ರಗಳಲ್ಲಿ ಮತದಾನ

ಲೋಕಸಭಾ ಕ್ಷೇತ್ರದಲ್ಲಿ ಒಟ್ಟಾರೆ ಸರಾಸರಿ ಶೇ.74 ರಷ್ಟು ಮತದಾನ ದಾಖಲಾಗಿದ್ದು ಆ ಪೈಕಿ ಬಾಗೇಪಲ್ಲಿ ಕ್ಷೇತ್ರದಲ್ಲಿ ಶೇ.74, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಶೇ.79,25, ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.70.63, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶೇ.74.50, ಗೌರಿಬಿದನೂರಲ್ಲಿ ಶೇ.73.31 ಹಾಗೂ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಶೇ.81.02 ರಷ್ಟು ಹಾಗೂ ನೆಲಮಂಗಲದಲ್ಲಿ ಶೇ.73.23 ರಷ್ಟು ಮತದಾನ ದಾಖಲುಗೊಂಡಿದೆ.ಬೆಳಗ್ಗೆ ಮಂದಗತಿ, ಸಂಜೆಗೆ ಬಿರುಸು ಜಿಲ್ಲಾದ್ಯಂತ ಬಿಸಲಿನ ಕಾರಣಕ್ಕೆ ಬೆಳಗ್ಗೆಯಿಂದ ಮನೆಯಲ್ಲಿ ಠಿಕಾಣಿ ಹಾಕಿದ್ದ ಮತದಾರರು ಮಧ್ಯಾಹ್ನದ ನಂತರ ಮತಗಟ್ಟೆಗಳತ್ತ ಬರಲು ಆರಂಭಿಸಿದರು. ಹೀಗಾಗಿ ಬೆಳಗ್ಗೆ ಮತದಾನ ಕೆಲಕಾಲ ಮಂದಗತಿಯಲ್ಲಿ ಸಾಗಿತ್ತು. ತೀವ್ರ ಬೇಸಿಗೆಯ ಪರಿಣಾಮ ಮತದಾರರು ಬೆಳಗ್ಗೆ ಮತಗಟ್ಟೆಗಳಿಗೆ ಬರಲಿಲ್ಲ. ಮಧ್ಯಾಹ್ನದವರೆಗೂ ಕೇವಲ ಶೇ.40 ರಷ್ಟು ಮತದಾನ ಕೂಡ ದಾಖಲಾಗಿರಲಿಲ್ಲ. ಬೆಳಗ್ಗೆ 9 ಗಂಟೆ ವೇಳೆಗೆ ಶೇ.8.74 ಹಾಗೂ 11 ಗಂಟೆ ವೇಳೆಗೆ ಶೇ.21.92 ಹಾಗೂ ಮಧ್ಯಾಹ್ನ 1 ಗಂಟೆಗೆ ವೇಳೆ ಶೇ.39.85 ರಷ್ಟು ಪ್ರಮಾಣದಲ್ಲಿ ದಾಖಲಾಗಿತ್ತು. ಗ್ರಾಮಸ್ಥರ ಮನವೊಲಿಕೆ

ಇನ್ನೂ ಚುನಾವಣ ಅಖಾಡದಲ್ಲಿ ಕೊನೆ ಕ್ಷಣದವರೆಗೂ ಮತದಾರರ ಓಲೈಕೆಗೆ ರಾಜಕೀಯ ಪಕ್ಷಗಳ ಕರಸತ್ತು. ಮುಂದುವರೆದಿತ್ತು. ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸಿಲ್ಲ ಎಂದು ಆರೋಪಿಸಿ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ದೇವಿಕುಂಟೆಯಲ್ಲಿ ಗ್ರಾಮಸ್ಥರು ಬೆಳಗ್ಗೆ ಮತದಾನ ಬಹಿಷ್ಕಾರ ಮಾಡಿದರು. ವಿಷಯ ತಿಳಿದ ಕೂಡಲೇ ಗ್ರಾಮಕ್ಕೆ ತಹಶೀಲ್ದಾರ್ ಸಂತೋಷ್ ಪಾಟೀಲ್ ಬೇಟಿ ಗ್ರಾಮಸ್ಥರ ಮನವೊಲಿಸಿದ ನಂತರ ಮತದಾನದಲ್ಲಿ ಗ್ರಾಮಸ್ಥರು ಪಾಲ್ಗೊಂಡರು. ಇನ್ನೂ ಮತದಾರರ ಪಟ್ಟಿಯಲ್ಲಿನ ಗೊಂದಲಕ್ಕೆ ಅಲಲ್ಲಿ ಮಾತಿನ ಚಕಮಕಿ, ಮತಗಟ್ಟೆಗಳ ಹೊರಗೆ ಮತದಾರರಿಗೆ ಭರಪೂರ ಅಸೆ, ಮತದಾನಕ್ಕೆ ಯುವ ಮತದಾರರು ಉತ್ಸಾಹ ತೋರಿದರು.

Share this article