.ಜಮಖಂಡಿಯಲ್ಲಿ ವಿನಾಕನಿಗೆ ಅದ್ಧೂರಿ ವಿದಾಯ

KannadaprabhaNewsNetwork |  
Published : Sep 04, 2025, 02:00 AM IST
ಜಮಖಂಡಿ ಸಾರ್ವಜನಿಕ ಗಣೇಶ ವಿಸರ್ಜನಾ ಕಾರ್ಯಕ್ರಮದ ದೃಶ್ಯ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಜಮಖಂಡಿ ಸಡಗರ ಸಂಭ್ರಮ ದಿಂದ ನಗರದಾದ್ಯಂತ ಗಣೇಶ ವಿಸರ್ಜನೆ ಕಾರ್ಯಕ್ರಮ ನಡೆಯಿತು, ಮಂಗಳವಾರ ಸಂಜೆಯಿಂದ ಪ್ರಾರಂಭವಾದ ಗಣೇಶ ವಿಸರ್ಜನೆಯಲ್ಲಿ ನೂರಾರು ಜನ ಭಕ್ತರು ಭಾಗವಹಿಸಿದ್ದರು. ನೂರಕ್ಕೂ ಹೆಚ್ಚು ಗಣೇಶ ವಿಗ್ರಹಗಳನ್ನು ವಾದ್ಯಮೇಳ, ಡಿಜೆಗಳ ಸಂಗೀತದೊಂದಿಗೆ ಕುಣಿದು ಕುಪ್ಪಳಿಸಿ ಮೆರವಣಿಗೆಯ ಮೂಲಕ ಕೊಂಡೊಯ್ದು ವಿಸರ್ಜಿಸಲಾಯಿತು.

ಕನ್ನಡಪ್ರಭ ವಾರ್ತೆ ಜಮಖಂಡಿ

ಸಡಗರ ಸಂಭ್ರಮ ದಿಂದ ನಗರದಾದ್ಯಂತ ಗಣೇಶ ವಿಸರ್ಜನೆ ಕಾರ್ಯಕ್ರಮ ನಡೆಯಿತು, ಮಂಗಳವಾರ ಸಂಜೆಯಿಂದ ಪ್ರಾರಂಭವಾದ ಗಣೇಶ ವಿಸರ್ಜನೆಯಲ್ಲಿ ನೂರಾರು ಜನ ಭಕ್ತರು ಭಾಗವಹಿಸಿದ್ದರು. ನೂರಕ್ಕೂ ಹೆಚ್ಚು ಗಣೇಶ ವಿಗ್ರಹಗಳನ್ನು ವಾದ್ಯಮೇಳ, ಡಿಜೆಗಳ ಸಂಗೀತದೊಂದಿಗೆ ಕುಣಿದು ಕುಪ್ಪಳಿಸಿ ಮೆರವಣಿಗೆಯ ಮೂಲಕ ಕೊಂಡೊಯ್ದು ವಿಸರ್ಜಿಸಲಾಯಿತು. ನಗರದ ಹನುಮಾನ ಚೌಕದಲ್ಲಿ ಗಜಾನನ ಮಹಾ ಮಂಡಳದ ವೇದಿಕೆಯಲ್ಲಿ ಬಹುಮಾನ ವಿತರಣೆ, ವಿಜೇತ ಮಂಡಳಿಗಳ ಅಧ್ಯಕ್ಷರಿಗೆ ಗಣ್ಯರಿಂದ ಸನ್ಮಾನ ಕಾರ್ಯಕ್ರಮ ನಡೆದವು. ಸಮಾರೋಪ ಸಮಾರಂಭದಲ್ಲಿ ಮುತ್ತಿನಕಂತಿ ಮಠದ ಶಿವಲಿಂಗ ಪಂಡಿತರಾಧ್ಯ ಶಿವಾಚಾರ್ಯ ಶ್ರೀಗಳು, ರುದ್ರಾವಧೂತ ಮಠದ ಕೃಷ್ಣಾನಂದ ಅವಧೂತರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ಶಾಸಕ ಜಗದೀಶ ಗುಡಗುಂಟಿ, ನಗರಸಭೆ ಅಧ್ಯಕ್ಷ ಈಶ್ವರ ವಾಳೇನ್ನವರ, ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಹುಲ ಕಲೂತಿ, ತಹಸೀಲ್ದಾರ ಅನೀಲ ಬಡಿಗೇರ, ನಗರಸಭೆ ಪೌರಾಯುಕ್ತ ಜೋತಿ ಗಿರೀಶ, ಸಿಪಿಐ ಮಲ್ಲಪ್ಪ ಮಡ್ಡಿ, ನಗರಸಭೆ ಸದಸ್ಯ ಕುಶಾಲ ವಾಘಮೊರೆ, ಮಹಾ ಮಂಡಳ ಅಧ್ಯಕ್ಷ ಸಚೀನ ಪಟ್ಟಣಶೆಟ್ಟಿ, ಪ್ರಭು ಜನವಾಡ, ಅನೀಲ ಸಿಂಧೂರ, ಪ್ರದೀಪ ಮಾಹಾಲಿಂಗಪುರಮಠ, ಗಣೇಶ ಶಿರಗನ್ನವರ ಸೇರಿ ಅನೇಕರು ಉಪಸ್ಥಿತರಿದ್ದರು.

ನಗರದ ಸಾವಿರಾರು ಗಣಪತಿಯ ಭವ್ಯವಾದ ಮೆರವಣಿಗೆ ಮೂಲಕ ಡಿಜೆ. ಡೊಳ್ಳು, ಬ್ಯಾಂಜೋಗಳ ಮುಖಾಂತರ ಯುವಕರು ಹಾಗೂ ಮಹಿಳೆಯರು ಕುಣಿದು ಕುಪ್ಪಳಿಸಿ ಗಣಪತಿ ಮೂರ್ತಿಗಳನ್ನು ವಿಸರ್ಜನೆ ಮಾಡಿದರು.

ಬಹುಮಾನ ವಿಜೇತ ಮಂಡಳಿಗಳು;

ಸುಂದರ ಮೂರ್ತಿ ವಿಭಾಗದಲ್ಲಿ ವೀರ ಸಾವರ್ಕರ ಗಜಾನನ ಮಿತ್ರ ಮಂಡಳಿ ಕುಂಬಾರಗಲ್ಲಿ ಪ್ರಥಮ, ಬ್ಲ್ಯೂ ಬಾಯ್ಸ್ ಮಿತ್ರ ಮಂಡಳಿ ಮಾಲಿಂಗೇಶ್ವರ ಕಾಲೋನಿ ದ್ವಿತೀಯ, ರಾಮದೇವ ಗಲ್ಲಿ ಜಮಖಂಡಿ ತೃತೀಯ ಬಹುಮಾನ. ಸುಂದರ ಅಲಂಕಾರ ವಿಭಾಗದಲ್ಲಿ ಸೀಮಿ ಲಕ್ಕವ್ವ ಗಜಾನನ ಮಿತ್ರ ಮಂಡಳಿ ಲಕ್ಷ್ಮೀ ನಗರ ಪ್ರಥಮ, ಗಜಾನನ ಮಿತ್ರ ಮಂಡಳಿ ಗಿರೀಶ ನಗರ ದ್ವಿತೀಯ, ಬಡಿಗೇರ ಗಲ್ಲಿ ತೃತೀಯ.

ಸಾಂಸ್ಕೃತಿಕ ವಿಭಾಗ: ಪ್ರಥಮ ಬಹುಮಾನ ಇಬ್ಬರ ಪಾಲಾಗಿದ್ದು, ಮೊರೆ ಫ್ಲಾಟ್‌ ಗಜಾನನ ಮಿತ್ರ ಮಂಡಳಿ ಹಾಗೂ ದಾನಮ್ಮ ದೇವಿ ಗಜಾನನ ಉತ್ಸವ ಸಮಿತಿ, ಗಜಾನನ ಮಿತ್ರ ಮಂಡಳಿ ರಾಮೇಶ್ವರ ಕಾಲೋನಿ ದ್ವಿತೀಯ ಬಹುಮಾನ, ತೃತೀಯ ಬಹುಮಾನ ಇಬ್ಬರ ಪಾಲಾಗಿದೆ. ಸ್ನೇಹಲೋಕ ಗಜಾನನ ಮಿತ್ರ ಮಂಡಳಿ ಡಾಲರ್ಸ್ ಕಾಲೋನಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಗಜಾನನ ಮಿತ್ರ ಮಂಡಳಿ ಶಾಸ್ತ್ರಿ ನಗರ ಪಡೆದವು.

ಮನೆ ಮನೆ ಗಣಪತಿ ಅಲಂಕಾರ ಸ್ಪರ್ಧೆ ವಿಭಾಗದಲ್ಲಿ ಪ್ರಥಮ ಬಹುಮಾನ ಮನಿಶ ಮೋಟೆಕರ, ದ್ವಿತೀಯ ಸಂದೀಪ ಕುಡುವೆ ಹಾಗೂ ಪ್ರಿಯಾ ಚಿಮ್ಮಡ ಪಾಲಾಗಿದ್ದು, ಅಶೋಕ ಬೋವಿ ಅವರಿಗೆ ತೃತೀಯ ಬಹುಮಾನ ದೊರೆತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!