ಹನುಮ ರಥಯಾತ್ರೆಗೆ ಅದ್ಧೂರಿ ಸ್ವಾಗತ

KannadaprabhaNewsNetwork | Published : Jan 6, 2024 2:00 AM

ಸಾರಾಂಶ

ಬರೋಬ್ಬರಿ 500 ವರ್ಷಗಳ ನಂತರ ನಮ್ಮೆಲ್ಲರ ಆರಾಧ್ಯ ದೈವ ಶ್ರೀರಾಮ ಅಯೋಧ್ಯೆಯ ಭವ್ಯ ಮಂದಿರದಲ್ಲಿ ಮತ್ತೆ ವಿರಾಜಮಾನವಾಗುವ ಕಾಲ ಸನ್ನಿಹಿತವಾಗಿದೆ.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಕರ್ನಾಟಕದ ತುಂಬೆಲ್ಲ ನಮೋ ಬ್ರಿಗೇಡ್ ವತಿಯಿಂದ ಶ್ರೀರಾಮನ ಎಲ್ಲ ಮಾಹಿತಿಯನ್ನು ಇಡೀ ಕರ್ನಾಟಕಕ್ಕೆ ಪ್ರಸಾರ ಮಾಡುತ್ತಿರುವ ಹನುಮ ರಥಯಾತ್ರೆಯನ್ನು ಶುಕ್ರವಾರ ಪಟ್ಟಣದ ಆರಾಧ್ಯ ದೈವ ಮಡ್ಡಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹಿಂದು ಮುಖಂಡರು ಆರತಿ ಮಾಡುವುದರ ಮೂಲಕ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಜಿ.ಎಸ್.ಗೊಬಿ ಮಾತನಾಡಿ, ಬರೋಬ್ಬರಿ 500 ವರ್ಷಗಳ ನಂತರ ನಮ್ಮೆಲ್ಲರ ಆರಾಧ್ಯ ದೈವ ಶ್ರೀರಾಮ ಅಯೋಧ್ಯೆಯ ಭವ್ಯ ಮಂದಿರದಲ್ಲಿ ಮತ್ತೆ ವಿರಾಜಮಾನವಾಗುವ ಕಾಲ ಸನ್ನಿಹಿತವಾಗಿದೆ. ಕೋಟ್ಯಂತರ ಭಕ್ತರ ಹಲವು ಶತಮಾನಗಳ ಕನಸು ಈಡೇರುವ ಗಳಿಗೆಗೆ ಮುಹೂರ್ತ ನಿಗದಿಯಾಗಿದೆ ಎಂದರು.

ರಾಮನ ಅಸ್ತಿತ್ವವೇ ಸುಳ್ಳು ಎಂದು ಹಿಂದಿನ ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿತ್ತು. ಮಾತ್ರವಲ್ಲದೇ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ವಿರುದ್ಧ ಕಾಂಗ್ರೆಸ್ ಪಕ್ಷ 24 ಲಾಯರ್‌ಗಳನ್ನೂ ನೇಮಿಸಿತ್ತು. ಸುದೈವದಿಂದ ಈಗ ರಾಮನ ಮೇಲೆ ಶ್ರದ್ಧೆ ಇರುವ ಸರ್ಕಾರ ಆಡಳಿತದಲ್ಲಿದೆ. ನನಸಾಗಿದ್ದ ಭವ್ಯ ರಾಮ ಮಂದಿರ ನಮ್ಮ ಕಾಲದಲ್ಲೇ ನಿರ್ಮಾಣವಾಗುತ್ತಿದೆ. ಇಂತಹ ಸಮಯದಲ್ಲಿ ಬನ್ನಿ ಸನಾತನವನ್ನು ಸಂಭ್ರಮಿಸೋಣ ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ್, ಗಣ್ಯರಾದ ಮಹಾಲಿಂಗಪ್ಪ ಕೊಳ್ಳುಳಿ, ಮಹಾಲಿಂಗ ಕಂಕನವಾಡಿ, ಮನೋಹರ ಶಿರೋಳ, ಶಂಭುಲಿಂಗ ಬಡಿಗೇರ್, ಪ್ರಲ್ಹಾದ ಸಣ್ಣಕ್ಕಿ, ರವಿ ಜವಳಗಿ, ರಾಜು ಚಮಕೇರಿ, ವಿಜಯ ಸಬಕಾಳೆ, ಚೆನ್ನಪ್ಪ ರಾಮೋಜ್ಜಿ , ಶಿವುಕುಮಾರ ಪಾಟೀಲ, ರಮೇಶ ಕೆಸರಾಗೊಪ್ಪ, ಶಿವಾನಂದ ಅಂಗಡಿ, ಗುರುಪಾದ ಅಂಬಿ, ಗಿರಿಮಲ್ಲಪ್ಪ ಬರಗಿ ಪ್ರವೀಣ ಕಟ್ಟಿ, ಹರೀಶ ನಾಯಕ, ಯಲ್ಲಪ್ಪ ಹೆಬ್ಬಾಳ, ಸುವರ್ಣ ಆಸಂಗಿ, ರಾಜು ತಾಳಿಕೋಟಿ, ನಂದೇಶ ಲಾತುರ, ಸಚಿನ್ ಕಲಮಡಿ, ಅಭಿ ಲಮಾಣಿ, ಶೇಖರ ಮಗದುಮ, ಬಸವರಾಜ ಗಿರಿಸಾಗರ, ಚೇತನ್ ಬಂಡಿವಡ್ಡರ, ವಿನಾಯಕ ಗುಂಜಗಾಂವಿ, ರಾಕೇಶ ಕೆಸರಗೊಪ್ಪ, ಗಜಾನನ ನುಚ್ಚಿ, ರಾಜೇಂದ್ರ ನಾವಿ, ರಾಘು ಮಾಳಗಿ, ರಾಘು ಗರಘಟಗಿ, ಮಹಾಲಿಂಗ ಕಲಾಲ, ಬೈರೇಶ ಆದ್ದೆಪ್ಪನ್ನವರ್, ಸಂತೋಷ ಹಜಾರೆ, ಚನ್ನಪ್ಪ ಆರೆಗಾರ, ಸಂದೀಪ್ ಸೋರಗೊಂಡ, ಮಹಾಲಿಂಗ ಪಂಚಕಟ್ಟಿಮಠ, ದತ್ತ ಯರಗಟ್ಟಿಕರ, ಅಭಿಶೇಕ ಸೊನ್ನದ, ಮಂಜು ಸಿಂಪಿ, ಮಂಜು ಗೊಂಬಿ, ಸಾಗರ ಪರಿಟ್, ಕಿರಣ್ ದಲಾಲ, ರಾಘವೇಂದ್ರ ಶಿರೋಳ, ತಮ್ಮಣ್ಣಿ ಆದ್ದೆಪ್ಪಣ್ಣವರ್,ಬಸವರಾಜ ದಲಾಲ, ನರಸಿಂಮ್ಮ ದಮಾಮಿ, ಸಂತೋಷ ಬಂಡಿವಡ್ಡರ,ಶಶಿಕಾಂತ ಸೇರಿದಂತೆ ನೂರಾರು ಹಿಂದೂ ಸಂಘಟನೆಯ ಕಾರ್ಯಕರ್ತರು ಭಾಗಿಯಾಗಿದ್ದರು.

Share this article