ಕನ್ನಡಪ್ರಭ ವಾರ್ತೆ ಕಾಗವಾಡ ದೇಶಕ್ಕೆ ರಾಷ್ಟ್ರಸಂತ ವಿದ್ಯಾನಂದ ಮುನಿ ಮಹಾರಾಜರನ್ನು ನೀಡಿದ ಕೀರ್ತಿ ಕಾಗವಾಡ ತಾಲೂಕಿ ಶೇಡಬಾಳ ಪಟ್ಟಣಕ್ಕೆ ಸಲ್ಲುತ್ತದೆ. ಇಂಥ ಸತ್ಪುರುಷರು ಜನ್ಮ ನೀಡಿದ ಸ್ಥಾನ ಶೇಡಬಾಳ. ಇಲ್ಲಿಯ ಸನ್ಮತಿ ಶಿಕ್ಷಣ ಸಂಸ್ಥೆಯು ಗ್ರಾಮೀಣ ಭಾಗದ ಮಕ್ಕಳಿಗೆ ಮೌಲ್ಯ ಶಿಕ್ಷಣ ನೀಡುವುದರ ಜೊತೆಗೆ ಗುರು, ಹಿರಿಯರನ್ನು, ಶಿಕ್ಷಕರನ್ನು ಗೌರವಿಸುವ ಉತ್ತಮ ಸಂಸ್ಕಾರ ನೀಡಿ, ದೇಶಕ್ಕೆ ಉತ್ತಮ ನಾಗರಿಕರನ್ನು ಈ ಸಂಸ್ಥೆ ನೀಡುತ್ತಿದೆ ಎಂದು ಶಾಸಕ ರಾಜು ಹೇಳಿದರು. ಅವರು ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ ಸನ್ಮತಿ ವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸತ್ಮಾರ ಸಮಾರಂಭದ ಅಧ್ಯಕ್ಷತೆ ವಹಿಸಿ, ಮಾತನಾಡಿ, ಇಂದು ಮಕ್ಕಳು ಗುರು - ಹಿರಿಯರಿಗೆ ಗೌರವಿಸುವುದನ್ನು ಮರೆಯುತ್ತಿದ್ದಾರೆ. ಆದರೆ, ಸನ್ಮತಿ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಪಡೆದ ಅನೇಕ ವಿದ್ಯಾರ್ಥಿಗಳು ದೇಶ-ವಿದೇಶದಲ್ಲಿ ಉನ್ನತ ಹೆದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದರೂ ಸಹ, ತಾವು ಹುಟ್ಟಿದ ಊರು, ತಮ್ಮ ಗುರು-ಹಿರಿಯರು, ತಂದೆ-ತಾಯಿ ಮತ್ತು ತಾವು ಕಲಿತಿರುವ ಶಾಲೆ ಮರೆತಿಲ್ಲವೆಂಬು ಸಂತೋಷದ ಸಂಗತಿ. ಇಲ್ಲಿ ಶಿಕ್ಷಣ ಮುಗಿಸಿರುವ ಡಾ. ರಮೇಶ ಐನಾಪೂರೆ ಅವರು ಈ ವಿದ್ಯಾಲಯಕ್ಕೆ ₹3 ಲಕ್ಷ ದೇಣಿಗೆ ನೀಡಿರುವುದೇ ಇದಕ್ಕೆ ಸಾಕ್ಷಿ ಎಂದರು.ಈ ವೇಳೆ ಶಾಲೆಗೆ ₹3 ಲಕ್ಷ ದೇಣಿಗೆ ನೀಡಿದ ಪ್ರಕಾಶ ಐನಾಪೂರೆ, ಡಾ. ರಮೇಶ ಐನಾಪೂರೆ ಹಾಗೂ ಶಾಲೆಯ ಆದರ್ಶ ಶಿಕ್ಷಕ ಪ್ರಸಸ್ತಿಗೆ ಪುರಸ್ಕೃತ ಶಿಕ್ಷಕರನ್ನು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಮತ್ತು ಗಣ್ಯರನ್ನು ಸತ್ಕರಿಸಲಾಯಿತು.ಮುಖ್ಯ ಅತಿಥಿಗಳಾಗಿ ಶಾಲೆಯ ಹಳೆಯ ವಿದ್ಯಾರ್ಥಿ ಮತ್ತು ಖ್ಯಾತ ವೈದ್ಯರಾಗಿರುವ ಡಾ. ರಮೇಶ ಐನಾಪೂರೆ, ಖ್ಯಾತ ಸ್ತ್ರೀ ರೋಗ ತಜ್ಞ ಡಾ. ಅಮುಲ್ಯಾ ಐನಾಪೂರೆ, ರಾಯಬಾಗದ ಖ್ಯಾತ ಉದ್ಯಮಿ ಕೈಲಾಸ ಪುರಮವಾರ ಮತ್ತು ಸನ್ಮತಿ ಶಿಕ್ಷಣ ಸಹಕಾರಿ ಸಂಸ್ಥೆ ಅಧ್ಯಕ್ಷ ವಿನೋದ ಬರಗಾಲೆ ವೇದಿಕೆ ಮೇಲೆ ಇದ್ದರು.ಈ ವೇಳೆ ಶೇಡಬಾಳ ಸನ್ಮತಿ ವಿದ್ಯಾಲಯದ ಚೇರಮನ್ ಸನ್ಮತಿ ಪಾಟೀಲ, ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯ ಉಪಾಧ್ಯಕ್ಷ ಅಜೀತ ನಾಂದ್ರೆ, ನಿರ್ದೇಶಕಿ ಎಲ್.ವಿ. ಸಂಗೊರಾಮ, ಆರ್.ವಿ. ಸಂಗೋರಾಮ, ಎಸ್.ಎಂ. ಕುಸನಾಳೆ, ಅಶೋಕ ಪಾಟೀಲ, ಮಹಾವೀರ ಪಾಟೀಲ, ಅಶ್ವತಕುಮಾರ ಪಾಟೀಲ, ಕುಮಾರ ಮಾಲಗಾಂವೆ, ರಾಹುಲ ಸವದತ್ತಿ, ಸಾವಿತ್ರಿ ದೊಡ್ಡನ್ನವರ, ಅಕ್ಕಾತಾಯಿ ಮುಜಾವರ, ಸುನೀತಾ ಮಾಕನ್ನವರ, ನೇಮಗೌಡಾ ಘೇನಪ್ಪಗೋಳ, ಮುಖ್ಯಾದ್ಯಾಪಕಿ ಎಂ.ಎನ್. ಕಾಳೆನಟ್ಟಿ, ಶಿಕ್ಷಕ ಎ.ಕೆ. ಪಾಟೀಲ, ಎಚ್.ಪಿ. ನಾಯಿಕ, ಎಂ.ಎಸ್. ಸಪ್ತಸಾಗರೆ, ಎಸ್.ಆರ್. ಪೂಜಾರಿ, ಎಂ.ಕೆ. ಕಾಂಬಳೆ, ಎಸ್.ಬಿ. ಇರಾಜ, ಎಸ್.ಡಿ. ಮುತಾಲಿಕ, ಜಿ.ಎನ್. ಹೆಬ್ಬಾಳೆ, ಎಸ್.ಎಸ್. ಭಂಡಾರೆ, ಎಂ.ಎಸ್. ಮುತವಲ್ಲಿ ಸೇರಿದಂತೆ ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ಪಾಲಕರು ಮತ್ತು ಗಣ್ಯರು ಇದ್ದರು.