ಅರಸು ಈ ರಾಜ್ಯ ಕಂಡ ಮಹಾನ್‌ ಧೀಮಂತ ನಾಯಕ

KannadaprabhaNewsNetwork |  
Published : Aug 21, 2024, 12:30 AM IST
ಫೋಟೋ 20ಪಿವಿಡಿ1ಪಾವಗಡ,ತಾಲೂಕು ಹಿಂದೂಳಿದ ವರ್ಗದ ಕಲ್ಯಾಣ ಇಲಾಖೆ ವತಿಯಿಂದ ತಹಸೀಲ್ದಾರ್‌ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಾಜಿ ಸಿಎಂ ದೇವರಾಜ್‌ ಅರಸು ಜಯಂತ್ಯೊತ್ಸವ ಸಮಾರಂಭದ ಉದ್ಘಾಟನೆಯನ್ನು ಶಾಸಕ ಎಚ್‌.ವಿ.ವೆಂಕಟೇಶ್‌ ನೆರೆವೇರಿಸಿದರು.ಪಾವಗಡ,ತಾಲೂಕು ಹಿಂದೂಳಿದ ವರ್ಗದ ಕಲ್ಯಾಣ ಇಲಾಖೆ ವತಿಯಿಂದ ತಹಸೀಲ್ದಾರ್‌ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಾಜಿ ಸಿಎಂ ದೇವರಾಜ್‌ ಅರಸು ಜಯಂತ್ಯೊತ್ಸವ ಸಮಾರಂಭದ ಉದ್ಘಾಟನೆಯನ್ನು ಶಾಸಕ ಎಚ್‌.ವಿ.ವೆಂಕಟೇಶ್‌ ನೆರೆವೇರಿಸಿದರು. | Kannada Prabha

ಸಾರಾಂಶ

ಅರಸು ಈ ರಾಜ್ಯ ಕಂಡ ಮಹಾನ್‌ ಧೀಮಂತ ನಾಯಕ

ಪಾವಗಡ: ಶೋಷಿತ ಸಮುದಾಯದ ಧ್ವನಿ. ಉಳುವವನೇ ಭೂಮಿಯ ಒಡೆಯ ಎಂಬ ಯೋಜನೆ ಜಾರಿಗೆ ತಂದ ಧೀಮಂತ ನಾಯಕ, ಕರ್ನಾಟಕ ರಾಜ್ಯ ಕಂಡ ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಅವರನ್ನು ಎಂದೂ ಮರೆಯಲು ಸಾಧ್ಯವಿಲ್ಲ ಎಂದು ಶಾಸಕ ಎಚ್‌.ವಿ.ವೆಂಕಟೇಶ್ ಹೇಳಿದರು.

ತಾಲೂಕು ಹಿಂದೂಳಿದ ವರ್ಗದ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆಡಳಿತ ವತಿಯಿಂದ ಮಂಗಳವಾರ ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ದೇವರಾಜ ಅರಸು ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ತಮ್ಮ ಆಡಳಿತ ಅವಧಿಯಲ್ಲಿ ರೈತ ಹಾಗೂ ಜನಪರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಮಾಜಿ ಸಿಎಂ ದೇವರಾಜ ಅರಸು ಅವರಿಗೆ ಸಲ್ಲಬೇಕಿದೆ. ಅವರ ಆಡಳಿತಾವಧಿಯ ಜನಪರ ಸೇವೆ ಹಾಗೂ ಬಡವರ ಕಲ್ಯಾಣ ಯೋಜನೆಗಳು ಮಾದರಿಯಾಗಿದ್ದವು. ಅವರು ಜಾರಿಗೆ ತಂದ ಉಳ್ಳುವವನೇ ಭೂ ಒಡೆಯ ಯೋಜನೆ ರಾಜ್ಯದ ಸಾವಿರಾರು ಬಡವರ್ಗದವರಿಗೆ ಹೆಚ್ಚು ಅನುಕೂಲವಾಗಿದೆ ಎಂದು ತಿಳಿಸಿ, ಪ್ರತಿಯೊಬ್ಬರಿಗೂ ದೇವರಾಜು ಆರಸು ಜಯಂತ್ಯುತ್ಸವದ ಶುಭಾಶಯ ಕೋರಿದರು.

ತಹಸೀಲ್ದಾರ್ ವರದರಾಜು ಮಾತನಾಡಿ, ದೇವರಾಜ ಅರಸು ಶೋಷಿತರ, ದೀನ ದಲಿತರ, ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಮಹಾನ್‌ ನಾಯಕ ಎಂದರು.

ಮಾಜಿ ಜಿಪಂ ಸದಸ್ಯ ಎಂ.ನಾಗೇಂದ್ರಪ್ಪ, ಚನ್ನಮಲ್ಲಪ್ಪ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಇಂದಿರಾಣಮ್ಮ,ಪುರಸಭೆ ಮುಖ್ಯ ಅಧಿಕಾರಿ ಜಾಫರ್ ಷರೀಫ್, ಬಿಸಿಎಂ ಇಲಾಖೆ ಸಹಾಯಕ ವಿಸ್ತಾರಣಾಧಿಕಾರಿ ಗೋಪಾಲ್, ಕಂದಾಯ ಇಲಾಖೆಯ ನಿರೀಕ್ಷಕ ರಾಜಗೋಪಾಲ್, ಬಿಸಿಎಂ ಇಲಾಖೆಯ ನಿಲಯಪಾಲಕರಾದ ಮಂಜುನಾಥ್‌, ಶ್ರೀನಪ್ಪ ಹಾಗೂ ದೇವಲಕರೆ ಲೋಕೇಶ್, ಕರವೇ ಲಕ್ಷ್ಮೀನಾರಾಯಣ, ನರಸಿಂಹ ಕೃಷ್ಣ, ದೇವರಾಜ್ ಅರಸು ಹಾಗೂ ಇಲ್ಲಿನ ಬಿಸಿಎಂ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಇತರೆ ಅಧಿಕಾರಿ ವರ್ಗ ಉಪಸ್ಥಿತರಿದ್ದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ