ಕನ್ನಡಪ್ರಭ ವಾರ್ತೆ ಕೆಜಿಎಫ್ಇದು ಡಿಜಿಟಲ್ ಯುಗ, ಈ ಆಧುನಿಕ ಜಮಾನದಲ್ಲಿ ಸೈಬರ್ ಕ್ರೈಂಗಳೂ ನಡೆಯುತ್ತಿವೆ. ಸೈಬರ್ ಕ್ರಿಮಿನಲ್‌ಗಳು ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುವ ಪ್ರಕರಣಗಳು ಹೆಚ್ಚುತ್ತಿವೆ ಜನತೆ ಎಚ್ಚರ ವಹಿಸಬೇಕು ಎಂದು ಎಸ್ಪಿ ಕೆ.ಎಂ.ಶಾಂತರಾಜು ತಿಳಿಸಿದರು. ಶ್ರೀ ಮಹಾವೀರ್ ಜೈನ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ನೂತನ ಪದಾಕಾರಿಗಳಿಗೆ ಅಭಿನಂದನಾ ಸಮಾರಂಭ ಹಾಗೂ ಅಂತರಾಷ್ಟೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿ, ಸೈಬರ್ ವಂಚಕರು ವೈಯುಕ್ತಿಕ ವಿವರಗಳಿಗೆ ಕನ್ನ ಹಾಕಿ ಸಂಕಷ್ಟಕ್ಕೆ ತಳ್ಳುತ್ತಾರೆ, ಹೀಗಾಗಿ ಇಂತಹ ಅಕ್ರಮಗಳ ಬಗೆಗೆ ಬಲು ಎಚ್ಚರಿಕೆಯಿಂದ ವ್ಯವಹರಿಸಬೇಕು ಎಂದರು.
ದೌರ್ಜನ್ಯದ ವಿರುದ್ಧ ಪ್ರತಿಭಟಿಸಿಸರಕಾರಿ ಮಹಿಳಾ ಕಾಲೇಜಿನ ಸಂಪ್ಮೂನಲ ಉಪನ್ಯಾಸಕಿ ಡಾ.ಕೆ.ಪ್ರಸನ್ನಕುಮಾರಿ ಮಾತನಾಡಿ, ಮಹಿಳೆಯನ್ನು ಕೇವಲ ಮನೆಯ ಕೆಲಸದಾಕೆ ಎಂದು ಪುರುಷ ವರ್ಗ ತಿಳಿದುಕೊಂಡಿದೆ. ಮಹಿಳೆಯರು ಸಹ ನಾವು ಕೆಲಸಕ್ಕೆ ಹೋಗುತ್ತಿಲ್ಲ ಮನೆಯಲ್ಲಿ ಹೌಸ್ ವೈಫ್ ಎಂದು ಹೇಳುತ್ತಿರಿ. ಮನೆಯಲ್ಲಿನ ಪ್ರತಿಯೊಂದು ಕೆಲಸ ಮಾಡುವುದು ಸಹ ಒಂದು ಕೆಲಸವೆಂದು ಮೋದಲು ಮಹಿಳೆಯರು ತಿಳಿಯಬೇಕು. ದೌರ್ಜನ್ಯದ ವಿರುದ್ಧ ಪ್ರತಿಭಟಿಸಬೇಕು ಎಂದರು.
ಮಹಿಳೆಯ ಸಾಧನೆ ಗುರುತಿಸಿತಹಸೀಲ್ದಾರ್ ನಾಗವೇಣಿ ಮಾತನಾಡಿ, ಮಹಿಳೆಯರ ಏನೇ ಸಮಸ್ಯೆಗಳು ಇದ್ದರೂ ಮುಕ್ತವಾಗಿ ತಮ್ಮ ಬಳಿ ಹೇಳಿಕೊಳ್ಳಬಹುದು. ನಾಲ್ಕು ಗೋಡೆಗೆ ಸೀಮಿತವಾಗಿದ್ದ ಹೆಣ್ಣು ಇಂದು ಕೈಯಾಡಿಸದ ಕ್ಷೇತ್ರವಿಲ್ಲ, ವಿವಿಧ ಕ್ಷೇಗಳಲ್ಲಿ ಮಹಿಳೆಯರ ಸಾಧನೆಗಳನ್ನು ಗುರುತಿಸಬೇಕೆಂದು ತಿಳಿಸಿದರು.ಸಭೆಯಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ನರಸಿಂಹ ಮೂರ್ತಿ, ನಗರಸಭೆ ಅಧ್ಯಕ್ಷೆ ಇಂದಿರಗಾಂಧಿ, ನಗರಾಭಿವೃದ್ದಿ ಪ್ರಾಕಾರದ ಆಯುಕ್ತರಾದ ಧರ್ಮೇಂದ್ರ, ಸಾರ್ವಜನಿಕ ಆಸ್ಪತ್ರೆಯ ಡಿ.ಎಸ್. ಸುರೇಶ್, ಸೈದಾಬಿ ನಿವೃತ್ತ ಪ್ರಾಂಶುಪಾಲರಾದ ಮುನಿರತ್ನಂ ಮತ್ತಿತರರು ಇದ್ದರು.