ಜಾತಿ ವಿಕೇಂದ್ರೀಕರಣದಿಂದ ಭವಿಷ್ಯದಲ್ಲಿ ಧರ್ಮಕ್ಕೆ ಆಪತ್ತು

KannadaprabhaNewsNetwork |  
Published : Feb 19, 2025, 12:46 AM IST
17ಎಚ್ಎಸ್ಎನ್7 : ತಾಲ್ಲೂಕಿನ ಪಡುವಳಲು ಗ್ರಾಮದ ನೂತನ ಶ್ರೀ ಬಸವೇಶ್ವರ ದೇಗುಲ ಲೋಕಾರ್ಪಣೆ ಧಾರ್ಮಿಕ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.. | Kannada Prabha

ಸಾರಾಂಶ

ಜಾತಿ ವಿಕೇಂದ್ರಿಕರಣದಿಂದ ಧರ್ಮಕ್ಕೆ ಭವಿಷ್ಯದಲ್ಲಿ ಆಪತ್ತು ಉಂಟಾಗುವ ಹಿನ್ನೆಲೆಯಲ್ಲಿ ಸರ್ವರು ಧರ್ಮ ಜಾಗೃತಿಯನ್ನು ಹೊಂದಬೇಕಿದೆ ಎಂದು ರೇಣುಕಾ ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ಮಲೆನಾಡು ಪ್ರದೇಶದಲ್ಲಿ ಕಳೆದ ಎರಡು ವರ್ಷದಿಂದ ನಿರಂತರ ಕಾಡಾನೆ ದಾಳಿಯಿಂದ ಇಲ್ಲಿನ ಕೃಷಿಕರು ತತ್ತರಿಸಿದ್ದಾರೆ. ನಾನು ಕೂಡ ವಿಧಾನಸಭೆಯಲ್ಲಿ ಹಾಗೂ ಸಂಬಂಧ ಪಟ್ಟ ಇಲಾಖೆ ತಿಳಿಸಿದ್ದು ಯಾವ ಪ್ರಯೋಜವಾಗುತ್ತಿಲ್ಲ, ಪೂಜ್ಯರ ಪರಮಾಶೀರ್ವಾದಿಂದ ಕಾಡಾನೆಯಿಂದ ಮುಕ್ತವಾಗಲಿ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ಜಾತಿ ವಿಕೇಂದ್ರಿಕರಣದಿಂದ ಧರ್ಮಕ್ಕೆ ಭವಿಷ್ಯದಲ್ಲಿ ಆಪತ್ತು ಉಂಟಾಗುವ ಹಿನ್ನೆಲೆಯಲ್ಲಿ ಸರ್ವರು ಧರ್ಮ ಜಾಗೃತಿಯನ್ನು ಹೊಂದಬೇಕಿದೆ ಎಂದು ರೇಣುಕಾ ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಬಿಕ್ಕೋಡು ಹೋಬಳಿ ಪಡುವಳಲು ಗ್ರಾಮದ ಶ್ರೀ ಬಸವೇಶ್ವರ ದೇಗುಲ ಲೋಕಾರ್ಪಣೆ ಮತ್ತು ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಮತ್ತು ಧರ್ಮಜಾಗೃತಿ ಸಮಾರಂಭದಲ್ಲಿ ಮಾತನಾಡಿದ ಅವರು, ಉನ್ನತ ಗುರಿ ಮತ್ತು ಧ್ಯೇಯ ವ್ಯಕ್ತಿತ್ವ ವಿಕಾಸಕ್ಕೆ ಆಶಾ ಕಿರಣ ಧರ್ಮಾಚರಣೆ ಇಲ್ಲದ ವ್ಯಕ್ತಿತ್ವಕ್ಕೆ ಬೆಲೆ ನೆಲೆ ಸಿಗುವುದಿಲ್ಲ, ಯೋಗ್ಯ ಸಂಸ್ಕಾರ ದೊರೆತೆರೆ ಬೆಲೆಯುಳ್ಳ ಬದುಕು ಸಾರ್ಥಕಗೊಳ್ಳುತ್ತದೆ. ಸೌಹಾರ್ದಯುತ ಸಹಬಾಳ್ವೆ ಜೀವನದ ಪರಮ ಗುರಿಯಾಗಬೇಕು. ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಮೂಲ ಸಂಸ್ಕೃತಿ ಮರೆಯಬಾರದು, ಮೂಲ ಮರೆತರೆ ಬದುಕಿನಲ್ಲಿ ಸೋಲು ನಿಶ್ಚಿತ. ಮನಸ್ಸು ಪರಿಶುದ್ಧವಾಗಿದ್ದರೆ ಸಂತೋಷ ನೆರಳಿನಂತೆ ಹಿಂಬಾಲಿಸುತ್ತದೆ ಎಂದರು.

ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ತಾಲೂಕಿನ ಪಡುವಳಲು ಗ್ರಾಮ ಅರೆಮಲೆನಾಡು ಪ್ರದೇಶಕ್ಕೆ ಸೇರಿದೆ, ಸದ್ಯ ಯಗಚಿ, ವಾಟೇಹೊಳೆ ನದಿ ಆಶ್ರಯದಿಂದ ಇಲ್ಲಿನ ಸುತ್ತಮತ್ತಲ ಗ್ರಾಮಸ್ಥರು ಸಮೃದ್ಧಿಯಾಗಿದ್ದಾರೆ. ಆದರೆ ಮಲೆನಾಡು ಪ್ರದೇಶದಲ್ಲಿ ಕಳೆದ ಎರಡು ವರ್ಷದಿಂದ ನಿರಂತರ ಕಾಡಾನೆ ದಾಳಿಯಿಂದ ಇಲ್ಲಿನ ಕೃಷಿಕರು ತತ್ತರಿಸಿದ್ದಾರೆ. ನಾನು ಕೂಡ ವಿಧಾನಸಭೆಯಲ್ಲಿ ಹಾಗೂ ಸಂಬಂಧ ಪಟ್ಟ ಇಲಾಖೆ ತಿಳಿಸಿದ್ದು ಯಾವ ಪ್ರಯೋಜವಾಗುತ್ತಿಲ್ಲ, ಪೂಜ್ಯರ ಪರಮಾಶೀರ್ವಾದಿಂದ ಕಾಡಾನೆಯಿಂದ ಮುಕ್ತವಾಗಲಿ ಎಂದರು.

ಉದ್ಯಮಿ ಗ್ರಾನೈಟ್ ರಾಜಶೇಖರ್ ಮಾತನಾಡಿ, ರಂಭಾಪುರಿ ಜಗದ್ಗುರುಗಳು ಪ್ರತಿನಿತ್ಯ ನಡೆದಾಡುವ ದೇವರ ರೀತಿಯಲ್ಲಿ ನಾಡಿನಲ್ಲಿ ಸಂಚರಿಸುತ್ತಾ ಧರ್ಮ ಪ್ರಚಾರ ಮಾಡುತ್ತಿದ್ದಾರೆ, ಅವರ ಧರ್ಮ ಪ್ರಚಾರವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ. ಇತ್ತೀಚಿನ ದಿನದಲ್ಲಿ ವೀರಶೈವ ಮತ್ತು ಲಿಂಗಾಯಿತ ಎಂಬ ಭೇದವನ್ನು ತರುವ ಮೂಲಕ ರಾಜಕಾರಣಕ್ಕೆ ಮುಂದಾಗುತ್ತಿದ್ದಾರೆ. ಇದು ನಮ್ಮ ಧರ್ಮಕ್ಕೆ ದೊಡ್ಡ ಪೆಟ್ಟು ನೀಡಿದೆ. ಮುಂದಿನದಲ್ಲಿ ವಿದೇಶದಲ್ಲಿ ಹುಟ್ಟಿದ ಧರ್ಮಗಳಿಂದ ಆಪತ್ತು ಕಾದಿದೆ ಎಂದು ಎಚ್ಚರಿಕೆ ನೀಡಿದರು.

ಕಾರ್ಯಕ್ರಮದಲ್ಲಿ ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯ ಸ್ವಾಮೀಜಿ, ತೆಂಕಲಗೂಡು ಬೃಹನ್ಮಠದ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಬೇರುಗುಂಡಿ ಬೃಹನ್ಮಠದ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ಬಿಜೆಪಿ ಮುಖಂಡ ಕೊರಟಿಕೆರೆ ಪ್ರಕಾಶ್, ಹಾಸನ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ ನಾಗೇಂದ್ರ, ತಹಸೀಲ್ದಾರ್ ಎಂ.ಮಮತ, ಗ್ರಾಮಸ್ಥರಾದ ಹರೀಶ್, ಸುನೀಲ್,ಚಂದ್ರು ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದ ಕಾರ್ಯಕ್ರಮ ನಿರೂಪಣೆಯನ್ನು ಲೀಲಾವತಿ ಮತ್ತು ಹೇಮಾವತಿ ನಡೆಸಿಕೊಟ್ಟರು.ಪೋಟೋ:

ಬೇಲೂರು ತಾಲೂಕಿನ ಪಡುವಳಲು ಗ್ರಾಮದ ನೂತನ ಶ್ರೀ ಬಸವೇಶ್ವರ ದೇಗುಲ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ