ಶಾಂತಿ, ಸೌಹಾರ್ದತೆಗೆ ಧಕ್ಕೆ ಬಾರದಂತೆ ಹಬ್ಬ ಆಚರಿಸಿ

KannadaprabhaNewsNetwork |  
Published : Aug 20, 2025, 01:30 AM IST

ಸಾರಾಂಶ

ಕೋಮು ಗಲಭೆ ಉಂಟು ಮಾಡುವ ಹಾಗೂ ಶಾಂತಿ ಕದಡುವ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದು ಹಾಗೂ ಸುಳ್ಳು ಸುದ್ದಿ ಹರಡುವವರ ಮೇಲೂ ಸಹ ಪೊಲೀಸ್ ತಂಡ ನಡುವೆ ನಿಗಾ ವಹಿಸುತ್ತಿದೆ. ಪ್ರಕರಣಗಳು ಕಂಡು ಬಂದಲ್ಲಿ ನಿರ್ಧಾಕ್ಷಿಣ್ಯ ಕಾನೂನು ಕ್ರಮ ವಹಿಸಲಾಗುವುದು.

ಕನ್ನಡಪ್ರಭ ವಾರ್ತೆ ಮಾಲೂರು

ನಗರ ಸೇರಿದಂತೆ ತಾಲೂಕಿನಲ್ಲಿ ಸರ್ಕಾರಿ ಆದೇಶ ಕಾನೂನು ಪರಿಪಾಲನೆ ಮಾಡುವ ಮೂಲಕ ಶಾಂತಿ ಮತ್ತು ಸೌಹಾರ್ದತೆಯಿಂದ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬ ಆಚರಿಸಲು ನಾಗರೀಕರು ಕೈ ಜೋಡಿಸುವಂತೆ ಜಿಲ್ಲಾ ಅಪರ ಪೊಲೀಸ್ ಅಧಿಕ್ಷಕರು ಜಗದೀಶ್ ಕರೆ ನೀಡಿದರು.ನಗರದ ಪೊಲೀಸ್ ಠಾಣೆ ಆವರಣದಲ್ಲಿ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಅಂಗವಾಗಿ ಕೋಲಾರ ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಂಡಿದ್ದ ಶಾಂತಿ ಸಾಮರಸ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗದಂತೆ ಕಾನೂನಿನ ಚೌಕಟ್ಟಿನಲ್ಲಿ ಗಣೇಶ ಹಬ್ಬವನ್ನು ಆಚರಿಸುವಂತೆ ಮನವಿ ಮಾಡಿದರು.

ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ

ಗಣಪತಿ ಪ್ರತಿಷ್ಠಾಪಿಸಲು ಅನುಮತಿ ಕಡ್ಡಾಯ ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಪ್ರತಿಷ್ಠಾಪಿಸುವವರು ಪೊಲೀಸ್ ಠಾಣಾ ಆವರಣದಲ್ಲಿ ಬುಧವಾರದಿಂದ ತೆರೆಯಲಾಗುವ ಏಕಗವಾಕ್ಷಿ ಕೇಂದ್ರದಲ್ಲಿ ಮನವಿ ಸಲ್ಲಿಸಿ ಅನುಮತಿ ಪಡೆಯುವುದು ಕಡ್ಡಾಯ. ಅನುಮತಿ ಪಡೆಯುವ ಸಂದರ್ಭದಲ್ಲಿ ಗಣಪತಿ ಪ್ರತಿಷ್ಠಾಪಿಸುವ ದಿನಾಂಕ, ಅವಧಿ, ವಿಸರ್ಜನೆ ಮಾಡುವ ದಿನಾಂಕ ಮತ್ತು ಸ್ಥಳ, ಮೆರವಣಿಗೆಯ ರೂಟ್ ಮ್ಯಾಪ್‌ಗಳನ್ನು ನಮೂದಿಸಬೇಕು. ಇದರಿಂದ ಪೊಲೀಸ್ ಬಂದೋಬಸ್ತ್, ಸಿ.ಸಿ.ಟಿ ವಿ ಅಳವಡಿಕೆ ಬ್ಯಾರಿಕ್ಯಾಟ್ ಅಳವಡಿಕೆ, ಬೆಸ್ಕಾಂ ಹಾಗೂ ಆಗ್ನಿ ಶಾಮಕ ಇಲಾಖೆಯಿಂದ ಅಗತ್ಯ ಸಿದ್ಧತೆಯನ್ನು ವ್ಯವಸ್ಥಿತವಾಗಿ ಮಾಡಿಕೊಳ್ಳಬಹುದು ಎಂದರು.

ಕೋಮು ಗಲಭೆ ಉಂಟು ಮಾಡುವ ಹಾಗೂ ಶಾಂತಿ ಕದಡುವ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದು ಹಾಗೂ ಸುಳ್ಳು ಸುದ್ದಿ ಹರಡುವವರ ಮೇಲೂ ಸಹ ಪೊಲೀಸ್ ತಂಡ ನಡುವೆ ನಿಗಾ ವಹಿಸುತ್ತಿದೆ. ಪ್ರಕರಣಗಳು ಕಂಡು ಬಂದಲ್ಲಿ ನಿರ್ಧಾಕ್ಷಿಣ್ಯ ಕಾನೂನು ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ತಹಶೀಲ್ದಾರ್ ಎಂ ವಿ ರೂಪ , ಸಿಪಿಐ ವಸಂತ್‌ ಕುಮಾರ್‌ ಮಾತನಾಡಿದರು. ಸಭೆಯಲ್ಲಿ ನಗರಸಭೆಯ ಅಧ್ಯಕ್ಷೆ ವಿಜಯಲಕ್ಷ್ಮಿ, ಉಪಾಧ್ಯಕ್ಷ ವಿಜಯಲಕ್ಷ್ಮಿ ತಾ.ಪಂ ಎನ್‌ಆರ್‌ಇಜಿ ಸಹಾಯಕ ನಿರ್ದೇಶಕ ಗೋವಿಂದೇಗೌಡ, ನಗರಸಭಾ ಸದಸ್ಯರಾದ ಎಂ.ವಿ.ವೇಮನ, ಪರಮೇಶ್, ಇಂತಿಯಾಜ್ ಖಾನ್, ಅನಿತಾ ನಾಗರಾಜ್, ಮಾಜಿ ಸದಸ್ಯ ಆಲು ಮಂಜು, ಆಗ್ನಿ ಶಾಮಕ ದಳದ ರಮೇಶ್, ಕನ್ನಡ ಪರ ಸಂಘಟನೆಗಳ ಎಂ.ಎಸ್ ಶ್ರೀನಿವಾಸ್, ವಿ.ಪ್ರಸನ್ನ ಕುಮಾರ್, ಮಾದನಹಟ್ಟಿ ರವಿಕುಮಾರ್, ನವೀನ್, ನವರಂಗ್ ಮಂಜು, ಮುಸ್ಲಿಂ ಸಮುದಾಯದ ಸೈಯದ್ ಅಜ್ಗರ್, ಎಂ.ಎ. ತನ್ವೀರ್ ಅಹ್ಮದ್, ಮಡಿವಾಳ ಚಂದ್ರಶೇಖರ್, ಎಂ.ಪಿ.ವಿ.ಮಂಜು, ಪೈಲ್ವಾನ್ ಮಂಜು, ರವಿ, ನಗರಸಭೆ ಅಭಿಯಂತರ ಶ್ರೀನಿವಾಸ್, ಬೆಸ್ಕಾಂ ವೆಂಕಟೇಶ್, ಬ್ಯಾನರ್ ಅಂಗಡಿ ಮಾಲೀಕರಾದ ಸಾಯಿ ಅಶೋಕ್, ಆರಾಧನಾ ಕಿರಣ್ ಇನ್ನಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!