ಸುತ್ತೂರು ಜಾತ್ರೆಗೆ ಒಂದು ಸಾರಿ ಬಂದು ಅನಂದಿಸಿ

KannadaprabhaNewsNetwork |  
Published : Jan 26, 2025, 01:30 AM IST
25ಎಚ್ಎಸ್ಎನ್12  : ಹಾಸನ ಜಿಲ್ಲೆಯ ರಾಮನಾಥಪುರಲ್ಲಿ ಸುತ್ತೂರು ಜಾತ್ರಾ ಮಹೋತ್ಸವ ಆಹ್ವಾನ ಪತ್ರಿಕೆಯನ್ನು  ಶರಣರಿಗೆ ನೀಡುತ್ತಿರುವುದು. | Kannada Prabha

ಸಾರಾಂಶ

ಮೈಸೂರು ಜಿಲ್ಲೆ ಶ್ರೀ ಸುತ್ತೂರಿನಲ್ಲಿ ಜನವರಿ 26ರಿಂದ 31ರವರೆಗೆ 6 ದಿವಸಗಳ ಕಾಲ ಶ್ರೀಕ್ಷೇತ್ರದ ಶ್ರೀ ವೀರ ಸಿಂಹಾಸನ ಮಹಾ ಸಂಸ್ಥಾನದ ಪರಮಪೂಜ್ಯ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರ ಸಾನಿಧ್ಯದಲ್ಲಿ ನಡೆಯುತ್ತಿದ್ದು, ರಾಜ್ಯ ಹಾಗೂ ಹಾಸನ ಜಿಲ್ಲೆಯ ಎಲ್ಲಾ ಸಮಾಜದವರು ಸುತ್ತೂರು ಜಾತ್ರಾ ಮಹೋತ್ಸದ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಸಂಚಾಲಕರು ಕೋಟವಾಳು ವಿರೂಪಾಕ್ಷ ಮುಂತಾದವರು ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ರಾಮನಾಥಪುರ

ಮೈಸೂರು ಜಿಲ್ಲೆ ಶ್ರೀ ಸುತ್ತೂರಿನಲ್ಲಿ ಜನವರಿ 26ರಿಂದ 31ರವರೆಗೆ 6 ದಿವಸಗಳ ಕಾಲ ಶ್ರೀಕ್ಷೇತ್ರದ ಶ್ರೀ ವೀರ ಸಿಂಹಾಸನ ಮಹಾ ಸಂಸ್ಥಾನದ ಪರಮಪೂಜ್ಯ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರ ಸಾನಿಧ್ಯದಲ್ಲಿ ನಡೆಯುತ್ತಿದ್ದು, ರಾಜ್ಯ ಹಾಗೂ ಹಾಸನ ಜಿಲ್ಲೆಯ ಎಲ್ಲಾ ಸಮಾಜದವರು ಸುತ್ತೂರು ಜಾತ್ರಾ ಮಹೋತ್ಸದ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಸಂಚಾಲಕರು ಕೋಟವಾಳು ವಿರೂಪಾಕ್ಷ ಮುಂತಾದವರು ಮನವಿ ಮಾಡಿದರು.

ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ವಿವಿಧ ಸಮಾಜದ ಮುಖಂಡರುಗಳಿಗೆ ಸುತ್ತೂರು ಜಾತ್ರಾ ಮಹೋತ್ಸವದ ಆಹ್ವಾನ ಪತ್ರಿಕೆ ನೀಡಿದ ನಂತರ ಮಾತನಾಡಿದ ಅವರು, ಶ್ರೀಕ್ಷೇತ್ರದ ಶ್ರೀಮತ್ಸುತ್ತೂರು ಜಗದ್ಗುರು ಶ್ರೀ ವೀರಸಂಹಾಸನ ಮಹಾಸಂಸ್ಥಾನ ಸಂಸ್ಥಾಪನಾಚಾರ್ಯ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಈ ಕಾರ್ಯಕ್ರಮದಲ್ಲಿ ರಾಜ್ಯದ ಹರಗುರು ಚರಮೂರ್ತಿಗಳು, ರಾಜಕಾರಣಿಗಳು, ಶರಣ ಶರಣೆಯರು ಭಾಗವಹಿಸುತ್ತಿದ್ದಾರೆ.

ಸುತ್ತೂರು ಜಾತ್ರಾ ಮಹೋತ್ಸವದಲ್ಲಿ 6 ದಿವಸಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಮತ್ತು ಪೂಜಾ ಕೈಂಕರ್ಯ, ಸೇವಾರ್ಥದಾರರು, ಭಕ್ತಾದಿಗಳು, ಸಂಘ ಸಂಸ್ಥೆಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಸಾರ್ವಜನಿಕರ ಸಹಾಯ ಸಹಕಾರದಿಂದ ವಸ್ತು ಪ್ರದರ್ಶನ, ಕೃಷಿ ಮೇಳ, ಸಾಂಸ್ಕೃತಿಕ ಮೇಳ, ಆರೋಗ್ಯ ತಪಾಸಣಾ ಶಿಬಿರ ದೋಣಿ ವಿಹಾರ, ರಾಜ್ಯ ಮಟ್ಟದ ಭಜನಾ ಮೇಳ, ದನಗಳ ಜಾತ್ರೆ, ಕುಸ್ತಿ ಪಂದ್ಯಾವಳಿ, ರಥೋತ್ಸವ, ಶಿವದೀಕ್ಷೆ, ಅನ್ನದಾಸೋಹ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿವೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮ ಯಶಸ್ಸಿಗೊಳಿಸಲು ಶರಣ ವಿರೂಪಾಕ್ಷ ಮುಂತಾದವರು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಶರಣ, ಎಂ.ಎನ್. ಕುಮಾರಸ್ವಾಮಿ, ಪದಾಧಿಕಾರಿಗಳಾದ ದೊಡ್ಡಬೊಮ್ಮನಹಳ್ಳಿ ಮೋಷ, ಪಿ.ಎನ್.ಟಿ. ಶಿವಪ್ಪ, ಕೋಟವಾಳು ಪಂಚಾಕ್ಷರಿ ಬಸವರಾಜು ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಲಾರಮ್ಮ ಕೆರೆಗೆ ಸೇರುತ್ತಿರುವ ನಗರದ ಕೊಳಚೆ ನೀರು, ನಗರಸಭೆಯ ಆಡಳಿತ ವೈಫಲ್ಯಕ್ಕೆ ಸಾರ್ವಜನಿಕರ ಆಕ್ರೋಶ
ಮಂಗಳ ಜಲಾಶಯದಿಂದ 1 ಕ್ಯೂಸೆಕ್ಸ್‌ ನೀರು ಪೋಲು