ಗ್ಯಾರಂಟಿ ಯೋಜನೆ ಬಡವರಿಗೆ ವರದಾನ

KannadaprabhaNewsNetwork |  
Published : Apr 11, 2024, 12:49 AM IST
ಮಹಾಲಿಂಗಪುರ  | Kannada Prabha

ಸಾರಾಂಶ

ನನ್ನನ್ನು ನಿಮ್ಮ ಮನೆಯ ಮಗಳು ಎಂದು ತಿಳಿದು, ತಮ್ಮ ಅಮೂಲ್ಯ ಮತ ಕಾಂಗ್ರೆಸ್‌ಗೆ ನೀಡಿ, ನನ್ನನ್ನು ಗೆಲ್ಲಿಸಬೇಕು

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಸಿದ್ದರಾಮಯ್ಯನವರ ಜನಪರ ಆಡಳಿತವನ್ನು ಜನರು ಮೆಚ್ಚಿದ್ದಾರೆ. ಅದರಲ್ಲೂ ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳಿಗೆ ಜನ ಮನಸೋತಿದ್ದಾರೆ ಎಂದು ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಹೇಳಿದರು.

ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ನಿವಾಸದಲ್ಲಿ ಎಸ್‌ಡಿಪಿಐ ಕಾರ್ಯಕರ್ತರು ಕಾಂಗ್ರೆಸ್‌ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೃಹ ಲಕ್ಷ್ಮೀ, ಗೃಹಜ್ಯೋತಿ, ನಾರಿಶಕ್ತಿ, ಯೋಜನೆಗಳು ಬಡವರಿಗೆ ವರದಾನವಾಗಿವೆ. ಪ್ರಸ್ತುತ ಲೋಕಸಭೆ ಚುನಾವಣೆಗೆ ನಾನು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ನನ್ನನ್ನು ನಿಮ್ಮ ಮನೆಯ ಮಗಳು ಎಂದು ತಿಳಿದು, ತಮ್ಮ ಅಮೂಲ್ಯ ಮತ ಕಾಂಗ್ರೆಸ್‌ಗೆ ನೀಡಿ, ನನ್ನನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಜನರು ಕಾಂಗ್ರೆಸ್‌ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡೇ ನಮ್ಮ ಪಕ್ಷ ಸೇರುತ್ತಿದ್ದಾರೆ. ಕಾರಣ ಈ ಸಲ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಬಹುಮತದಿಂದ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೈ ಮುಖಂಡ ಸಿದ್ದು ಕೊಣ್ಣೂರ ಮಾತನಾಡಿ, ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಜನ ಬೇಸತ್ತಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ನೀಡುತ್ತಿರುವ ವಿವಿಧ ಯೋಜನೆಗಳಿಗೆ ಬಡವರು, ರೈತರು, ಮಹಿಳೆಯುರು ಸೇರಿದಂತೆ ಎಲ್ಲರೂ ಅವರ ಯೋಜನೆಗಳನ್ನು ಸದುಪಯೋಗ ಮಾಡಿಕೊಂಡವರೆ ಹೆಚ್ಚಾಗಿದ್ದಾರೆ. ಕಾರಣ ಬಡವರ, ರೈತರ, ನೇಕಾರರ ಪರ ಕೆಲಸ ಮಾಡುವ ಸರ್ಕಾರ ಎಂದರೆ ಅದು ಕಾಂಗ್ರೆಸ್‌ ಸರ್ಕಾರ ಮಾತ್ರ ಎಂದು ಹೇಳಿದರು.

ಈ ವೇಳೆ ಎಸ್‌ಡಿಪಿಐ ಪಕ್ಷದ ತೇರದಾಳ ಕ್ಷೇತ್ರದ ಅಧ್ಯಕ್ಷ ಪರುಶುರಾಮ ಮೇತ್ರಿ, ಜಿಲ್ಲಾ ಉಪಾಧ್ಯಕ್ಷ ಶೇಖರ ಮಾಂಗ, ಸಿ.ಎಸ್.ಎಸ್ ಅಲ್ಪಸಂಖ್ಯಾತರ ಅಧ್ಯಕ್ಷ ಹುಸೇನ ಉಕಲಿ ಮತ್ತು ಶಾನೂರ ಕುಳ್ಳೋಳ್ಳಿ, ಅಬ್ಬಾಸಲಿ ಕರೋಶಿ, ಆದಮ ಅತ್ತಾರ, ಮಹೇಶ ಕಾಳಾ, ಎಸ್‌ಡಿಪಿಐ ತೇರದಾಳ ಉಪಾಧ್ಯಕ್ಷ ಬಾಬು ಮಾಂಗ ಸೇರಿದಂತೆ ಹಲವರನ್ನು ಸಂಯುಕ್ತಾ ಪಾಟೀಲ ಅವರು ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಸ್ವಾಗತಿಸಿದರು.

ತೇರದಾಳ ಮತಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಪ್ಪಾ ಸಿಂಗಾಡಿ, ಮುಖಂಡರಾದ ಯಲ್ಲಣ್ಣಗೌಡ ಪಾಟೀಲ್, ಬಲವಂತಗೌಡ ಪಾಟೀಲ್, ಅರವಿಂದ ಮಾಲಬಸರಿ, ಸುನೀಲಗೌಡ ಪಾಟೀಲ್, ಬಸವರಾಜ ಕರೆಹೊನ್ನ, ಬಸವರಾಜ ರಾಯರ, ಅರ್ಜುನ ದೊಡ್ಡಮನಿ, ವಿನೋದ ಸಿಂಪಿ, ನಾನಾ ಜೋಶಿ, ಲಕ್ಷ್ಮಣ ಮಾಂಗ, ಅಶೋಕ ಅಂಗಡಿ, ಉಸ್ಮಾನ ಪೆಂಡಾರಿ, ರಾಜು ಬಗನಾಳ, ವಿಠಲ ಸಂಶಿ, ಬುಡ್ಡಾ ಪೆಂಡಾರಿ ಮಹಾಲಿಂಗ ಮಾಳಿ ಸೇರಿ ಹಲವರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ