ಕನ್ನಡಪ್ರಭ ವಾರ್ತೆ ಚಿಂತಾಮಣಿ
ನಗರದಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ಭವನಕ್ಕೆ ಭೇಟಿ ನೀಡಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಈ ಹಿಂದೆ ಅಂಬೇಡ್ಕರ್ ಭವನಕ್ಕೆ ಜಾಗ ಕೊಡಲು ಸಾಕಷ್ಟು ಕಷ್ಟಪಟ್ಟಿದ್ದೇನೆ. ಈಗಲಾದರೂ ನನಗೆ ಆಪ್ತ ಸಹಾಯಕರು ಇದ್ದಾರೆ. ಹಿಂದೆ ಶಾಸಕನೂ ನಾನೇ ಆಪ್ತಸಹಾಯಕನೂ ನಾನೇ ಆಗಿದ್ದು, ಫೈಲ್ ಹಿಡಿದುಕೊಂಡು ವಿಧಾನಸೌಧ ಸುತ್ತಿ ಸುತ್ತಿ ಜಾಗ ಮಂಜೂರು ಮಾಡಿಸಿದ್ದೆ ಎಂದು ಹಿಂದಿನ ಕೆಲಸಗಳ ಬಗ್ಗೆ ಮೆಲುಕು ಹಾಕಿದರು.
ಅಂಬೇಡ್ಕರ್ ಭವನಕ್ಕೆ ₹3 ಕೋಟಿಈಗಾಗಲೇ ೩ಕೋಟಿ ರೂ ವೆಚ್ಚದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಭವನದ ಕಟ್ಟಡ ನಿರ್ಮಾಣವಾಗಿದ್ದು, ಈ ಕಟ್ಟಡಕ್ಕೆ ಮತ್ತಷ್ಟು ರೂಪುರೇಷಗಳನ್ನು ನೀಡಿ ಭವನದ ಉದ್ದ, ಆಗಲ ವಿಸ್ತರಣೆ ಮಾಡಿ ರಾಜ್ಯದಲ್ಲಿಯೇ ಮಾದರಿಯಾದ ಸುಸಜ್ಜಿತ ಅಂಬೇಡ್ಕರ್ ಭವನವನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.
ಡಾ.ಅಂಬೇಡ್ಕರ್ ವಿಶ್ವ ಮಾನವ
ಸಮಾಜ ಕಲ್ಯಾಣ ಸಚಿವ ಎಚ್.ಮಹದೇವಪ್ಪರ ಸಹಕಾರದಿಂದ ಅಂಬೇಡ್ಕರ್ ಭವನಕ್ಕೆ ೯ ಕೋಟಿ ರೂ ಮಂಜೂರಾಗಿದ್ದು ೨ ವರ್ಷಗಳ ಒಳಗಾಗಿ ಅಂಬೇಡ್ಕರ್ ಭವನದ ಕಾಮಗಾರಿಯನ್ನು ಪೂರ್ಣಗೊಳಿಸಿ ರಾಜ್ಯದ ಹಿರಿಯರನ್ನು ಆಮಂತ್ರಿಸಿ ಎರಡು ದಿನಗಳ ಕಾಲ ಅದ್ದೂರಿಯಾಗಿ ಉದ್ಘಾಟನೆ ನೆರವೇರಿಸುವುದಾಗಿ ತಿಳಿಸಿದರು.
ವಾಲ್ಮೀಕಿ ಭವನಕ್ಕೆ ಒಂದು ಎಕರೆ ಜಮೀನು ಮಂಜೂರು ಮಾಡಿಸಿದ್ದು, ಭವನದಲ್ಲಿ ಕಡಿಮೆ ಆಸನಗಳಿಂದ ಹೆಚ್ಚವರಿ ಆಸನಗಳ ಕಟ್ಟಡಕ್ಕೆ ಹೆಚ್ಚವರಿ ಹಣ ಮಂಜೂರು ಮಾಡಿಸಿದ್ದು ಸದ್ಯದಲ್ಲಿಯೇ ಕಾಮಗಾರಿ ಕೆಲಸ ಪುನರಾರಂಭ ಮಾಡಲಾಗುವುದು. ವಾಲ್ಮೀಕಿ ವಿದ್ಯಾರ್ಥಿ ನಿಲಯದ ಕಟ್ಟಡದ ಕಾಮಗಾರಿಗೆ ವಾಲ್ಮೀಕಿ ಜಯಂತಿ ದಿನದಂದು ಶಂಕುಸ್ಥಾಪನೆ ಮಾಡಲಾಗುವುದೆಂದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜಾನಂದರೆಡ್ಡಿ, ಸಹಾಯಕ ನಿರ್ದೇಶಕ ಶ್ರೀನಿವಾಸ್ ನಾಯಕ್, ತಾ.ಪಂ. ಇಒ ಎಸ್.ಆನಂದ್, ಪೌರಾಯುಕ್ತ ಚಲಪತಿ, ನಗರಸಭಾ ಅದ್ಯಕ್ಷ ಜಗನ್ನಾಥ್, ಉಪಾದ್ಯಕ್ಷೆ ರಾಣಿಯಮ್ಮ, ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಮತ್ತಿತರರು ಉಪಸ್ಥಿತರಿದ್ದರು.