ಅರಣ್ಯ ಉಳಿಸಿ ಬೆಳೆಸುವುದು ಪವಿತ್ರ ಕಾರ್ಯ

KannadaprabhaNewsNetwork |  
Published : Jan 29, 2024, 01:37 AM IST
 ಫೋಟೋ ಶೀರ್ಷಿಕೆ : ಅಥಣಿ ತಾಲೂಕಿನ ರೆಡ್ಡರಹಟ್ಟಿ ಗ್ರಾಮದಲ್ಲಿ  ಶ್ರೀ ಬಸವೇಶ್ವರ ದೈವಿವನದ  ಅಡಿಗಲು ಸಮಾರಂಭವನ್ನು ಶಾಸಕ ಲಕ್ಷ್ಮಣ ಸವದಿ ನೆರವೇರಿಸಿದರು. ನಂತರ ಅಧಿಕಾರಿಗಳು ಮತ್ತು ಗ್ರಾಮದ ಹಿರಿಯರು ಶಾಸಕರನ್ನು ಸನ್ಮಾನಿಸಿದರು. (28ಅಥಣಿ 03)  | Kannada Prabha

ಸಾರಾಂಶ

ಜನರ ಅಸಹಕಾರದಿಂದ ಅರಣ್ಯ ಸಂಪತ್ತು ಹಾಳಾಗುತ್ತಿದೆ. ಅರಣ್ಯ ಸಂಪತ್ತಿನ ಬಗ್ಗೆ ಕಾಳಜಿ ಮೂಡಿಸುವ ಕೆಲಸ ಎಲ್ಲರೂ ಮಾಡಬೇಕಿದೆ.

ಕನ್ನಡಪ್ರಭ ವಾರ್ತೆ ಅಥಣಿಅರಣ್ಯ ಉಳಿಸಿ ಬೆಳೆಸುವುದು ಅತ್ಯಂತ ಪವಿತ್ರ ಕರ್ತವ್ಯ. ಮನುಷ್ಯ ಆಮ್ಲಜಕನ‌ ಇಲ್ಲದೆ ಬದುಕಲು ಅಸಾಧ್ಯ, ಕೊರೋನಾ‌ ಸಂದರ್ಭದಲ್ಲಿ ಆಮ್ಲಜನಕದ ಕೊರತೆಯಿಂದ ಅನೇಕ‌ ಜನ ಸಾವನ್ನಪ್ಪಿದ್ದು ನಮಗೆ ತಿಳಿದಿದೆ. ಆಮ್ಲಜನಕ ಉತ್ಪಾದಿಸುವುದು ಅಸಾಧ್ಯ. ಹಾಗಾಗಿ ಸ್ವಚ್ಛ ಸುಂದರ ವಾತಾವರಣಕ್ಕಾಗಿ ಅರಣ್ಯ ಬೆಳೆಸಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ರಡ್ಡೇರಹಟ್ಟಿ ಗ್ರಾಮದಲ್ಲಿ ಪ್ರಾದೇಶಿಕ ಅರಣ್ಯ ವಲಯ ವತಿಯಿಂದ ₹73 ಲಕ್ಷ ಅನುದಾನದಲ್ಲಿ ಶ್ರೀ ಬಸವೇಶ್ವರ ದೈವಿವನ ಅಡಿಗಲ್ಲು ಸಮಾರಂಭ ಹಾಗೂ ಪಶುಚಿಕಿತ್ಸಾಲಯ ಕಟ್ಟಡ ಉದ್ಘಾಟನೆಗೊಳಿಸಿ ಮಾತನಾಡಿ, ಅರಣ್ಯ ಸಂಪತ್ತು ನಶಿಸುತ್ತಿರುವುದರಿಂದ ಮಳೆಯ ಕೊರತೆ ಉಂಟಾಗುತ್ತಿದೆ. ಜನರ ಅಸಹಕಾರದಿಂದ ಅರಣ್ಯ ಸಂಪತ್ತು ಹಾಳಾಗುತ್ತಿದೆ. ಅರಣ್ಯ ಸಂಪತ್ತಿನ ಬಗ್ಗೆ ಕಾಳಜಿ ಮೂಡಿಸುವ ಕೆಲಸ ಎಲ್ಲರೂ ಮಾಡಬೇಕಿದೆ. ಅರಣ್ಯ ಇಲಾಖೆಯವರ ಜೊತೆ ಸಾರ್ವಜನಿಕರು ಸಹಕರಿಸಿದರೆ ಮಾತ್ರ ಅರಣ್ಯ ಉಳಿಯಲು ಸಾಧ್ಯ, ಅರಣ್ಯ ಸಂಪತ್ತು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಗೋಕಾಕ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ನಾಯಿಕವಾಡಿ ಅವರು ದೈವಿವನದ ಮಾಹಿತಿ ನೀಡಿದರು. ಸ್ಥಳೀಯ ಮುಖಂಡ ಮಾದೇವ ನಾಯಿಕ ಮಾತನಾಡಿ ಊರಿಗೆ ಅವಶ್ಯಕವಾದ ದೈವಿವನ ನಿರ್ಮಾಣಕ್ಕೆ ಕಾಳಜಿ ವಹಿಸಿದ ಶಾಸಕರಿಗೆ ಹಾಗೂ ಅರಣ್ಯ ಅಧಿಕಾರಿಗಳಿಗೆ ಅಭಿನಂದನೆ ತಿಳಿಸಿದರು.

ಈ ವೇಳೆ ರಾಯಭಾಗ ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನೀತಾ ನಿಂಬರಗಿ, ಅಥಣಿ ವಲಯದ ಪ್ರಾದೇಶಿಕ ಅರಣ್ಯ ಅಧಿಕಾರಿ ಪ್ರಶಾಂತ ಗಾಣಿಗೇರ, ಗ್ರಾಮದ ಹಿರಿಯ ಬಸಪ್ಪ ಖೋತ, ಪಾಂಡು ಭೋಸಲೆ, ಮಾದೇವ ಗಲಗಲಿ, ಗುತ್ತಿಗೆದಾರ ಸಂಗಮೇಶ ಜೈನ್, ಗ್ರಾಪಂ ಅಧ್ಯಕ್ಷೆ ಸುವರ್ಣಾ ಮಡಿವಾಳ, ಅರಣ್ಯ ಇಲಾಖೆ ಎಸ್.ಎಂ. ಮುಂಜೆ, ಅಶೋಕ ದನವಾಡೆ, ಎಂ.ವಿ ಪಾಟೀಲ, ಎಂ.ಎ ಬಡಿಗೇರ, ಸುರೇಶ ಬಾಗಿ, ಶಿವಾನಂದ ಮೇತ್ರಿ, ಮಾಂತೇಶ ಚೌಗಲಾ, ರಮೇಶ ಹೊಸಪೆಟೆ, ದಲಾಯತ್, ಮಾಂತೇಶ ಚನವೀರ, ಬಾಬು ಹುಲ್ಯಾಳ, ಅದೃಶ್ಯಪ್ಪ ಬೆಳ್ಳಂಕಿ, ನಿಂಗಪ್ಪ ಖೋತ, ಶ್ರೀಶೈಲ ಹಾವರಡ್ಡಿ ಸೇರಿದಂತೆ ಅನೇಕರು ಇದ್ದರು. ಬಾಬಣ್ಣ ಸಾರವಾಡ ಸ್ವಾಗತಿಸಿದರು, ಡಾ.ಎಮ್ ಎ ಚನ್ನಾಪೂರ ನಿರೂಪಿಸಿ ವಂದಿಸಿದರು.

PREV

Recommended Stories

ಮಗುವಿಗೆ ಗಂಟೆಯೊಳಗಾಗಿ ತಾಯಿಯ ಎದೆ ಹಾಲು ನೀಡಿ
ಸರ್ಕಾರಿ ಶಾಲೆಗಳ ಉಳಿವು, ಪರಿಸರ ಬಗ್ಗೆ ಜಾಗೃತಿ ಮೂಡಿಸಲು ಸೈಕಲ್​ ಮೂಲಕ ರಾಜ್ಯ ಪರ್ಯಟನೆ