ಸಾರಾಂಶ
ಟನೆ ಕುರಿತಂತೆ ಬುಧವಾರ ತಹಸೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಲಾಗುವುದು ಎಂದು ಪ್ರತಿಭಟನಾಕಾರರ ತಿಳಿಸಿದರು.
ಶಿರಹಟ್ಟಿ: ತಾಲೂಕಿನ ಬೆಳ್ಳಟ್ಟಿ ಗ್ರಾಮದ ಹೊರವಲಯದ ಚರ್ಚ್‌ನಲ್ಲಿ ನಡೆದಿರುವುದು ಆತ್ಮಹತ್ಯೆಯಲ್ಲ. ಸಾವಿಗೀಡಾದ ವ್ಯಕ್ತಿಗೆ ಮತಾಂತರಕ್ಕೆ ಒತ್ತಾಯಿಸಿ ಹಣದ ಆಮಿಷ ಒಡ್ಡಿದ್ದು, ಅದಕ್ಕೆ ಒಪ್ಪದೇ ಇರುವುದರಿಂದ ಆತನನ್ನು ಕೊಲೆ ಮಾಡಿ ಆತ್ಮಹತ್ಯೆ ಎಂಬ ಕಥೆ ಹೆಣೆದಿದ್ದಾರೆ ಎಂದು ಶ್ರೀರಾಮಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಖಾನಪ್ಪನವರ ಗಂಭೀರ ಆರೋಪ ಮಾಡಿದರು.ಮಂಗಳವಾರ ಘಟನೆ ನಡೆದ ಚರ್ಚ್ ಬಳಿ ಹಿಂದೂಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಿ ನಂತರ ಮಾತನಾಡಿದರು.
ತಿಪ್ಪಣ್ಣ ಚಂದ್ರಪ್ಪ ವಡ್ಡರ ಸಾವಿಗೀಡಾದ ವ್ಯಕ್ತಿ ಸ್ಥಿತಿ ನೋಡಿದರೆ ಇದೊಂದು ಕೊಲೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ವಿನಯ, ಭಾರತಿ ಹಾಗೂ ಸಾವಿಗೀಡಾದವನ ಪತ್ನಿ ಗಿರಿಜವ್ವ ಅಲ್ಲದೇ ಇನ್ನೂ ಅನೇಕರು ಈತನಿಗೆ ಮತಾಂತರಕ್ಕೆ ಪ್ರಚೋದನೆ ನೀಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.ಹೆಚ್ಚಿನ ಸಂಖ್ಯೆಯಲ್ಲಿ ಭೋವಿ, ವಡ್ಡರ ಸಮಾಜದವರೇ ಮತಾಂತರಕ್ಕೆ ಒಳಗಾಗುತ್ತಿದ್ದಾರೆ. ಪೊಲೀಸರು ತಿಳಿಸಿದಂತೆ ಡೆತ್‌ನೋಟ್ ಕೂಡ ಸಾವಿಗೀಡಾದ ವ್ಯಕ್ತಿ ಬರೆದಿದ್ದಲ್ಲ ಎನ್ನುವ ಸಂಶಯ ವ್ಯಕ್ತವಾಗುತ್ತಿದೆ. ಈ ಎಲ್ಲ ಸತ್ಯಾಸತ್ಯತೆ ಹೊರಬರಬೇಕಾದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ಸೂಕ್ತ ತನಿಖೆ ನಡೆಸಬೇಕು ಎಂದರು.ಘಟನೆ ಕುರಿತಂತೆ ಬುಧವಾರ ತಹಸೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಲಾಗುವುದು ಎಂದರು.ಈ ವೇಳೆ ಮುಖಂಡ ಸಂತೋಷ ಕುರಿ, ಶಶಿ ಪೂಜಾರ, ವಿಠಲ ಬಿಡವೆ, ವೀರಣ್ಣ ಅಂಗಡಿ, ಆನಂದ ಸತ್ಯಮ್ಮನವರ, ಪ್ರವೀಣಗೌಡ ಪಾಟೀಲ, ಬಸನಗೌಡ ಪಾಟೀಲ, ವಿಜಯ ಸಜ್ಜನ, ಸಂತೋಷ ರಾಠೋಡ, ಸುನೀಲ ಲಮಾಣಿ ಸೇರಿ ಅನೇಕರು ಇದ್ದರು.;Resize=(128,128))
;Resize=(128,128))
;Resize=(128,128))