ಕನ್ನಡಪ್ರಭ ವಾರ್ತೆ ಮುಧೋಳ
ರಾಜ್ಯದಲ್ಲಿ ಲವ್-ಜಿಹಾದ್‌ಗೆ ಮತ್ತೊಬ್ಬ ಹಿಂದು ಯುವತಿ ಬಲಿಯಾಗಿದ್ದಾಳೆ. ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಪ್ರೀತಿಸಲು ನಿರಾಕರಿಸಿದ ನೇಹಾ ಹಿರೇಮಠಳನ್ನು ಹಾಡಹಗಲೇ, ಸಾರ್ವಜನಿಕವಾಗಿಯೇ 9 ಸಲ ಇರಿದು ಬರ್ಬರ ಹತ್ಯೆ ಮಾಡಿ ಮತಾಂಧ ಫಯಾಜ್ ಲವ್ ಹೆಸರಿನಲ್ಲಿ ಜಿಹಾದ್ ಕೃತ್ಯ ಎಸಗಿದ್ದಾನೆ. ಇಂತಹ ಕೃತ್ಯ ಮತ್ತೆ ಮರುಕಳಿಸದಂತೆ ತಕ್ಷಣವೇ ನ್ಯಾಯಾಲಯ ಶಿಕ್ಷೆ ವಿಧಿಸಬೇಕೆಂದು ಗುರುಪಾದ ಕುಳಲಿ ಸೇರಿದಂತೆ ಹಲವಾರು ಹಿಂದೂ ಪರ ಮುಖಂಡರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹಿಂದು ಜಾಗರಣ ವೇದಿಕೆ ಕರ್ನಾಟಕ ಪ್ರಾಂತ ಪ್ರಮುಖರಾದ ವೆಂಕಣ್ಣ ಕಳ್ಳಿಗುದ್ದಿ, ಶಂಕರ ಯಡಹಳ್ಳಿ, ಗುರುಪಾದ ಕುಳಲಿ, ಕೃಷ್ಣಾ ಸುಲಾಖೆ, ಪುಂಡಲೀಕ ಮೋಹಿತೆ, ಬಸು ಮಾನೆ, ಕಲ್ಮೇಶ್ ಗೋಸಾರ, ಕರಬಸಯ್ಯ ಹಿರೇಮಠ, ಸೋನಾಪೆ ಕುಲಕರ್ಣಿ, ಮೋಹನ್ ರಿಸ್ಪೋಡ್, ಪ್ರಕಾಶ್ ರಾಮತೀರ್ಥ , ಶಿವರಾಜ ನ್ಯಾಮನ್ನವರ, ಮಹಾದೇವ ಲದ್ದಿ, ಗುರುಪಾದ ಕುಳಲಿ, ರಾಜು ಟಂಕಸಾಲಿ, ಹಾಗೂ ಹಿಂದುಪರ ಸಂಘಟನೆಗಳ ಪ್ರಮುಖರು ಕಾರ್ಯಕರ್ತರು ಇದ್ದರು.