ತಾಳಿಕೋಟೆ: ಪಟ್ಟಣದಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಏಳನೇ ದಿನದಂದು ವಿವಿಧ ವಾದ್ಯ ಮೇಳಗಳೊಂದಿಗೆ ವೈಭವಯುತ ಮೆರವಣಿಗೆ ಮೂಲಕ ಶುಕ್ರವಾರ ಅದ್ಧೂರಿಯಾಗಿ ವಿಸರ್ಜಿಸಲಾಯಿತು. ಪಟ್ಟಣದಲ್ಲಿ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಗಳನ್ನು ಮೆರವಣಿಗೆಯ ಮೂಲಕ ರಾಜವಾಡೆಗೆ ಆಗಮಿಸಿದವು. ನಂತರ ರಾಜವಾಡೆಯಲ್ಲಿ ಸಾಮೂಹಿಕ ಪೂಜಾ ಕಾರ್ಯಕ್ರಮ ನೇರವೇರಿಸಿ ವಿಸರ್ಜನಾ ಮೇರವಣಿಗೆಗೆ ಚಾಲನೆ ನೀಡಲಾಯಿತು.
--------
ಗಣಪತಿಯ ಭವ್ಯ ಶೋಭಾಯಾತ್ರೆಪಟ್ಟಣದ ತಿಲಕ ರಸ್ತೆಯಲ್ಲಿ ಹಿಂದೂ ಮಹಾ ಗಣಪತಿ ಮಹಾ ಮಂಡಳಿಯಿಂದ ಪ್ರತಿಷ್ಠಾಪಿಸಲಾಗಿರುವ ಬೃಹತ್ ಗಣೇಶ ಮೂರ್ತಿಯ ಭವ್ಯ ಶೋಭಾಯಾತ್ರೆಯೊಂದಿಗೆ ವಿಸರ್ಜನಾ ಮೆರವಣಿಗೆ ಭಾನುವಾರ ಬೆಳಗ್ಗೆ ೧೦ ಗಂಟೆಗೆ ಜರುಗಲಿದೆ. ಈ ಮೆರವಣಿಗೆಗೆ ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಕೆಸರಟ್ಟಿ ಶಂಕರಲಿಂಗ ಗುರುಪೀಠದ ಶ್ರೀ ಸೋಮಲಿಂಗ ಮಹಾಸ್ವಾಮಿಗಳು, ವೇ.ಸಂತೋಷಭಟ್ ಜೋಶಿ ಅಲ್ಲದೇ ವಿವಿಧ ರಾಜಕೀಯ ನಾಯಕರು ಚಾಲನೆ ನೀಡಲಿದ್ದಾರೆ.----------