‘ದ್ವಮ್ದ್ವ’ ಕನ್ನಡದ ಕ್ವೀರ್ ಫಿಲ್ಮ್ ಯೂಟ್ಯೂಬ್‌ಗೆ ಬಿಡುಗಡೆ

KannadaprabhaNewsNetwork |  
Published : Jan 11, 2025, 12:48 AM IST
10ದ್ವಮ್ದ್ವ | Kannada Prabha

ಸಾರಾಂಶ

ಯಕ್ಷಗಾನ ರಂಗದಲ್ಲಿ ಸ್ತ್ರೀ ಪಾತ್ರ ನಿರ್ವಹಿಸುವ ಯುವಕನೊಬ್ಬನ ಗಂಡು ದೇಹದೊಳಗಿನ ಹೆಣ್ಣು ಮನಸ್ಸಿನ ಆಸೆ - ನಿರಾಸೆಗಳ ಕಥಾಹಂದರ ಹೊಂದಿರುವ, ಅನೇಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ - ಮೆಚ್ಚುಗೆ ಪಡೆದಿರುವ ‘ದ್ವಮ್ದ್ವ’ ಕನ್ನಡ ಚಲನಚಿತ್ರವನ್ನು ಶುಕ್ರವಾರ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಯಕ್ಷಗಾನ ರಂಗದಲ್ಲಿ ಸ್ತ್ರೀ ಪಾತ್ರ ನಿರ್ವಹಿಸುವ ಯುವಕನೊಬ್ಬನ ಗಂಡು ದೇಹದೊಳಗಿನ ಹೆಣ್ಣು ಮನಸ್ಸಿನ ಆಸೆ - ನಿರಾಸೆಗಳ ಕಥಾಹಂದರ ಹೊಂದಿರುವ, ಅನೇಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ - ಮೆಚ್ಚುಗೆ ಪಡೆದಿರುವ ‘ದ್ವಮ್ದ್ವ’ ಕನ್ನಡ ಚಲನಚಿತ್ರವನ್ನು ಶುಕ್ರವಾರ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭ ಪತ್ರಕರ್ತರಿಗೆ ವಿಶೇಷ ಪ್ರದರ್ಶನ ಮತ್ತು ಚಿತ್ರತಂಡದೊಂದಿಗೆ ಸಂವಾದವನ್ನು ಆಯೋಜಿಸಲಾಗಿತ್ತು.ಯುವ ಸಿನಿಮಾ ನಿರ್ದೇಶಕ ಪೃಥ್ವಿ ಕೋಣನೂರು ‘ದ್ವಮ್ದ್ವ’ ಚಲನಚಿತ್ರವನ್ನು ತಮ್ಮ ಕೋಣನೂರು ಪ್ರೊಡಕ್ಷನ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭ ಮಣಿಪಾಲ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸ್‌ನ ನಿರ್ದೇಶಕ ಪ್ರೊ.ವರದೇಶ ಹಿರೇಗಂಗೆ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು. ‘ದ್ವಮ್ದ್ವ’ ಚಿತ್ರದ ನಿರ್ದೇಶಕ ಕ್ಲಿಂಗ್ ಜಾನ್ಸನ್ ಮಾತನಾಡಿ, ಸುಮಾರು 24 ಲಕ್ಷ ರು.ಗಳ ಕ್ಲೌಡ್‌ ಫಂಡಿಂಗ್‌ ಸಹಾಯದಿಂದ ನಿರ್ಮಿಸಲಾದ ಈ ಕ್ವೀರ್ (ಸಲಿಂಗ) ಸಿನಿಮಾ ಅನೇಕ ಚಲನಚಿತ್ರೋತ್ಸವಗಳಲ್ಲಿ ಮೆಚ್ಚುಗೆ ಪಡೆದಿದೆ. ಕರಾವಳಿಯ ವಿಶಿಷ್ಟ ಕಲೆಯಾದ ಯಕ್ಷಗಾನದ ರಂಗಸ್ಥಳದಲ್ಲಿ ಅದ್ಭುತವಾಗಿ ಸ್ತ್ರೀ ವೇಷದಿಂದ ಅಭಿಮಾನಿಗಳನ್ನು ಪಡೆದುಕೊಂಡ ಯುವಕ ರಂಗಸ್ಥಳದ ಹೊರಗೆ ನಿಜಜೀವದಲ್ಲಿ ನಡೆಸುವ ಮಾನಸಿಕ ಹೋರಾಟದ ಸೂಕ್ಷ್ಮವಾದ ಎಳೆಯನ್ನು ಚಿತ್ರೀಕರಿಸುವ ಪ್ರಯತ್ನ ಮಾಡಲಾಗಿದೆ ಎಂದರು.ಈ ಸಂದರ್ಭ ಸಿನಿಮಾದ ಪ್ರಮುಖ ಪಾತ್ರಧಾರಿ ರಾಜೇಂದ್ರ ನಾಯಕ್ ಮತ್ತು ಭಾಸ್ಕರ್ ಮಣಿಪಾಲ, ಪ್ರಭಾಕರ ಕುಂದರ್, ಬೆನ್ಸು ಪೀಟರ್, ಭಾರತಿ ಟಿ.ಕೆ., ಸಂದೀಪ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ