ಪ್ರತಿಯೊಬ್ಬರೂ ಗೋವಿನ ರಕ್ಷಣೆಗಾಗಿ ಮುಂದಾಗಿ

KannadaprabhaNewsNetwork |  
Published : Sep 09, 2025, 01:00 AM IST
ರಾಸಾಯನಿಕ ಮುಕ್ತ ಕೃಷಿ ಮಾಡುತ್ತಿರುವ ಪ್ರೋತ್ಸಾಹಿತ 3 ರೈತರಿಗೆ ಹಾಗೂ ತಾಲೂಕಿನಲ್ಲಿ ಹೆಚ್ಚು ಗೋವುಗಳನ್ನು ಸಲಹುತ್ತಿರುವ 6 ರೈತರಿಗೆ ಬಹುಮಾನ ವಿತರಣೆ ಮಾಡಲಾಯಿತು | Kannada Prabha

ಸಾರಾಂಶ

ಕಸ್ತೂರಬಾ ಗೋಶಾಲೆಯಲ್ಲಿ ನಡೆದ 9ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಗೋವಿನ ರಕ್ಷಣೆಗಾಗಿ ಮುಂದಾಗಬೇಕು. ಗೋವುಗಳು ನಮ್ಮ ಸಂಸ್ಕೃತಿಯ, ಕೃಷಿಯ, ಆಧ್ಯಾತ್ಮದ ಮೂಲ ಭಾಗವಾಗಿವೆ. ಅವುಗಳನ್ನು ಕೇವಲ ಧಾರ್ಮಿಕ ದೃಷ್ಟಿಕೋಣದಿಂದ ಮಾತ್ರವಲ್ಲ, ಪರಿಸರ ಹಾಗೂ ಆರ್ಥಿಕ ಸ್ಥಿತಿಗತಿಯಲ್ಲೂ ಅವುಗಳ ಪಾತ್ರ ಮಹತ್ತರ ಎಂದರು. ಗೋವುಗಳನ್ನು ಉಳಿಸುವುದರಿಂದ ನಾವು ಕೇವಲ ಪಶುಪಾಲನೆಯನ್ನಷ್ಟೇ ನಡೆಸುವುದಿಲ್ಲ, ಮಾನವೀಯತೆ, ದಯೆ ಮತ್ತು ಧರ್ಮವನ್ನು ಜೀವಂತವಾಗಿರಿಸುತ್ತೇವೆ. ಇಂತಹ ಕಾರ್ಯಗಳಿಂದ ನಾವು ಅನೇಕ ಪುಣ್ಯ ಗಳಿಸಬಹುದುಎಂದು ಹೇಳಿದರು.

ಅರಸೀಕೆರೆ: ಪ್ರಾಚೀನ ಭಾರತೀಯ ಜೀವನಶೈಲಿಯಲ್ಲಿ ಗೋವು ಅಂತಃಕರ್ಮಗಳಿಂದ ಆಚರಣೆಗಳವರೆಗೆ ಎಲ್ಲೆಲ್ಲೂ ಪಾತ್ರವಹಿಸಿದೆ. ಗೀತೆಯಲ್ಲಿಯೂ ಕೃಷ್ಣನು ಗೋಚಾರಣೆಯಲ್ಲಿ ತನ್ನ ಬಾಲ್ಯ ಕಳೆದಿದ್ದನ್ನು ನಾವು ಕಾಣುತ್ತೇವೆ ಎಂದು ಯಳನಾಡು ಮಹಾ ಸಂಸ್ಥಾನದ ಜ್ಞಾನಪ್ರಭು ಸಿದ್ದರಾಮ ದೇಶೀಕೇಂದ್ರದ ಸ್ವಾಮಿಗಳು ತಿಳಿಸಿದರು.

ತಾಲೂಕಿನ ಕಸ್ತೂರಬಾ ಗೋಶಾಲೆಯಲ್ಲಿ ನಡೆದ 9ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಗೋವಿನ ರಕ್ಷಣೆಗಾಗಿ ಮುಂದಾಗಬೇಕು. ಗೋವುಗಳು ನಮ್ಮ ಸಂಸ್ಕೃತಿಯ, ಕೃಷಿಯ, ಆಧ್ಯಾತ್ಮದ ಮೂಲ ಭಾಗವಾಗಿವೆ. ಅವುಗಳನ್ನು ಕೇವಲ ಧಾರ್ಮಿಕ ದೃಷ್ಟಿಕೋನದಿಂದ ಮಾತ್ರವಲ್ಲ, ಪರಿಸರ ಹಾಗೂ ಆರ್ಥಿಕ ಸ್ಥಿತಿಗತಿಯಲ್ಲೂ ಅವುಗಳ ಪಾತ್ರ ಮಹತ್ತರ ಎಂದರು. ಗೋವುಗಳನ್ನು ಉಳಿಸುವುದರಿಂದ ನಾವು ಕೇವಲ ಪಶುಪಾಲನೆಯನ್ನಷ್ಟೇ ನಡೆಸುವುದಿಲ್ಲ, ಮಾನವೀಯತೆ, ದಯೆ ಮತ್ತು ಧರ್ಮವನ್ನು ಜೀವಂತವಾಗಿರಿಸುತ್ತೇವೆ. ಇಂತಹ ಕಾರ್ಯಗಳಿಂದ ನಾವು ಅನೇಕ ಪುಣ್ಯ ಗಳಿಸಬಹುದುಎಂದು ಹೇಳಿದರು.ಕಾರ್ಯಕ್ರಮದಲ್ಲಿ ಹಾಸನ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕರಾದ ರಾಮೇಶ್ ಅವರು ಮಾತನಾಡಿ, ಗೋವುಗಳು ನಮ್ಮ ಕೃಷಿ ವ್ಯವಸ್ಥೆಯ ಮೂಲ ಅಂಶಗಳಾಗಿವೆ. ಇಂದು ಹೆಚ್ಚು ಕೃತಕ ವಿಧಾನಗಳು ಹಾಯ್ದು ಬಂದರೂ, ಗೊಬ್ಬರ, ಗೋಮೂತ್ರ, ಹಾಲು ಮತ್ತು ಇತರ ಉತ್ಪನ್ನಗಳು ಇನ್ನೂ ಸಹ ಆರೋಗ್ಯಕರ, ಪರಿಸರ ಸ್ನೇಹಿ ಹಾಗೂ ಆರ್ಥಿಕವಾಗಿ ಲಾಭದಾಯಕವಾಗಿವೆ ಎಂದು ಹೇಳಿದರು. ರಾಜ್ಯ ಸರ್ಕಾರದ "ಪುಣ್ಯಕೋಟಿ ದತ್ತು ಯೋಜನೆ " ಹಾಗೂ ಇತರೆ ಪಶುಸಂಗೋಪನಾ ಕಾರ್ಯಕ್ರಮಗಳ ಮಾಹಿತಿಯನ್ನು ನೀಡಿದರು. ಸಾರ್ವಜನಿಕರಿಗೆ ಗೋಶಾಲೆಗಳನ್ನು ದತ್ತು ತೆಗೆದುಕೊಳ್ಳುವ ಹಾಗೂ ಸೇವೆ ಮಾಡಲು ಪ್ರೋತ್ಸಾಹ ನೀಡಿದರು.ಈ ವಿಶೇಷ ದಿನದ ಅಂಗವಾಗಿ ಗೋಪೂಜೆ ಹಾಗೂ ಅಲಂಕಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು, ಗೋವುಗಳಿಗೆ ವಿವಿಧ ರೀತಿಯ ಅಲಂಕಾರ ಮಾಡಲಾಗಿದ್ದು, ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ರಾಸಾಯನಿಕ ಮುಕ್ತ ಕೃಷಿ ಮಾಡುತ್ತಿರುವ ಪ್ರೋತ್ಸಾಹಿತ 3 ರೈತರಿಗೆ ಹಾಗೂ ತಾಲೂಕಿನಲ್ಲಿ ಹೆಚ್ಚು ಗೋವುಗಳನ್ನು ಸಲಹುತ್ತಿರುವ 6 ರೈತರಿಗೆ ಬಹುಮಾನ ವಿತರಣೆ ಮಾಡಲಾಯಿತು. 60ಕ್ಕೂ ಹೆಚ್ಚು ಪುಟಾಣಿಗಳು ಶ್ರೀಕೃಷ್ಣ ಮತ್ತು ರಾಧೆಯ ವೇಷಭೂಷಣ ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಇವರಿಗೆ ವಿಶೇಷ ಬಹುಮಾನ ನೀಡಲಾಯಿತು. ಬಾಬು ಮಹಾರಾಜ್ ಅವರಿಂದ ಪೂರ್ಣರಾತ್ರಿ ಭಜನೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಗೋಶಾಲೆಯ ಅಧ್ಯಕ್ಷ ಜಯರಾಮ್, ಭಾರತೀಯ ಗೋಪರಿವಾರ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಪುಕ್ಕರಾಜ್ ಪಟೇಲ್,ಕಾರ್ಯದರ್ಶಿ ಪಾರಸ್, ಕಾರ್ಯಕರ್ತರಾದ ನಾರಾಯಣ್, ಜಿತೇಂದ್ರ ಜೈನ್, ಶಿವು, ರಾಜಶೇಖರ್, ಶಶಿಧರ್, ಮಂಜು, ಪವನ್ ಉಪಸ್ಥಿತರಿದ್ದರು..

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು