ಶಿಕ್ಷಣದ ಜತೆ ಕ್ರೀಡೆಗೂ ಆದ್ಯತೆ ನೀಡಿ

KannadaprabhaNewsNetwork |  
Published : Apr 17, 2025, 12:00 AM IST
೧೫ಕೆಎಲ್‌ಆರ್-೫ಕೋಲಾರದ ಕಠಾರಿಪಾಳ್ಯದ ಕನಕ ಬ್ಯಾಸ್ಕೆಟ್ ಬಾಲ್ ಕ್ರೀಡಾಂಗಣದಲ್ಲಿ ಬ್ಯಾಸ್ಕೆಟ್ ಬಾಲ್ ಕಲಿಕಾ ಬೇಸಿಗೆ ಶಿಬಿರದಲ್ಲಿ ಆರಂಭದ ಕಲಿಕೆಯಲ್ಲೇ ಉತ್ತಮ ಸಾಧನೆ ತೋರುತ್ತಿರುವ ಮಕ್ಕಳಿಗೆ  ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಬಹುಮಾನ ವಿತರಿಸಿದರು. | Kannada Prabha

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಪೋಷಕರು ಮಕ್ಕಳನ್ನು ಅಂಕ ಗಳಿಕೆ ಯಂತ್ರದಂತೆ ಕಾಣುತ್ತಿದ್ದು, ಇದು ಉತ್ತಮ ಬೆಳವಣಿಗೆಯಲ್ಲ, ಶಿಕ್ಷಣದೊಂದಿಗೆ ಕ್ರೀಡೆಯೂ ಅಗತ್ಯವಿದೆ ಎಂಬುದನ್ನು ಅರಿಯಬೇಕು. ದೊಡ್ಡ ನಗರಗಳಲ್ಲಿ ಇಂತಹ ಶಿಬಿರ ನಡೆಸಲು ಸಾವಿರಾರು ರು. ಪಡೆಯುತ್ತಾರೆ ಆದರೆ ಇಲ್ಲಿ ಉಚಿತವಾಗಿ ಉತ್ತಮ ತರಬೇತಿ ನೀಡಲಾಗುತ್ತಿದೆ

ಕನ್ನಡಪ್ರಭ ವಾರ್ತೆ ಕೋಲಾರಮಕ್ಕಳನ್ನು ಪಠ್ಯ, ಅಂಕ ಗಳಿಕೆಗೆ ಸೀಮಿತ ಮಾಡಬಾರದು. ಅವರಲ್ಲಿ ಕ್ರೀಡಾ ಮನೊಭಾವ ಬೆಳೆಸಬೇಕು, ವ್ಯಾಯಾಮ ಮಾಡಲು ಪ್ರೇರೇಪಿಸಿಬೇಕು.ಆಗ ಮಾತ್ರ ಉತ್ತಮ ಆರೋಗ್ಯ ಸಾಧ್ಯ ಎಂದು ಮಾಜಿ ಶಾಸಕ ಕೆ. ಶ್ರೀನಿವಾಸಗೌಡ ಹೇಳಿದರು.

ನಗರದ ಕಠಾರಿಪಾಳ್ಯದ ಕನಕ ಬ್ಯಾಸ್ಕೆಟ್ ಬಾಲ್ ಕ್ರೀಡಾಂಗಣದಲ್ಲಿ ಬಾಸ್ಕೆಟ್ ಬಾಲ್ ಕಲಿಕಾ ಬೇಸಿಗೆ ಶಿಬಿರದಲ್ಲಿ ಆರಂಭದ ಕಲಿಕೆಯಲ್ಲೇ ಉತ್ತಮ ಸಾಧನೆ ತೋರುತ್ತಿರುವ ಮಕ್ಕಳಿಗೆ ಪ್ರೋತ್ಸಾಹದಾಯಕ ಬಹುಮಾನ ವಿತರಿಸಿ ಮಾತನಾಡಿದರು.

ಶಿಕ್ಷಣ ಜತೆ ಕ್ರೀಡೆಗೂ ಆದ್ಯತೆ

ಇತ್ತೀಚಿನ ದಿನಗಳಲ್ಲಿ ಪೋಷಕರು ಮಕ್ಕಳನ್ನು ಅಂಕ ಗಳಿಕೆ ಯಂತ್ರದಂತೆ ಕಾಣುತ್ತಿದ್ದು, ಇದು ಉತ್ತಮ ಬೆಳವಣಿಗೆಯಲ್ಲ, ಶಿಕ್ಷಣದೊಂದಿಗೆ ಕ್ರೀಡೆಯೂ ಅಗತ್ಯವಿದೆ ಎಂಬುದನ್ನು ಅರಿಯಬೇಕು ಎಂದ ಅವರು ತಮ್ಮ ಅವಧಿಯಲ್ಲಿ ಕೋಲಾರ ಒಳಾಂಗಣ ಕ್ರೀಡಾಂಗಣ ನಿರ್ಮಿಸಿದ ಕುರಿತು ಸಂತಸ ವ್ಯಕ್ತಪಡಿಸಿದರು.ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ ಎಸ್. ಗಣೇಶ್ ಮಾತನಾಡಿ, ಮಕ್ಕಳು ಸಿಕ್ಕಿರುವ ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು, ಆಗ ಮಾತ್ರ ನೀವು ಸಾಧನೆಯ ಶಿಖರವೇರಲು ಸಾಧ್ಯ ಎಂಬುದನ್ನು ಅರಿತು ಕಲಿಕೆಯಲ್ಲಿ ತೊಡಗಿ ಎಂದು ಕಿವಿಮಾತು ಹೇಳಿದರು.ಕ್ರೀಡಾಪಟುಗಳಿಗೆ ತರಬೇತಿ

ಯಾವುದೇ ಶುಲ್ಕ ಪಡೆಯದೇ ಶಿಬಿರ ನಡೆಸಲಾಗುತ್ತಿದೆ, ದೊಡ್ಡ ನಗರಗಳಲ್ಲಿ ಇಂತಹ ಶಿಬಿರ ನಡೆಸಲು ಸಾವಿರಾರು ರು. ಪಡೆಯುತ್ತಾರೆ ಆದರೆ ಅಂಚೆ ಅಶ್ವಥ್ ಮತ್ತಿತರ ಹಿರಿಯ ಕ್ರೀಡಾಪಟುಗಳು ನಿಮಗೆ ಉತ್ತಮ ತರಬೇತಿ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.ಐಟಿಐ ಶಿವಕುಮಾರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಅಂಚೆ ಅಶ್ವಥ್, ಕೆಯುಡಿಎ ಮಾಜಿ ಅಧ್ಯಕ್ಷ ಅಬ್ದುಲ್ ಖಯ್ಯೂಂ, ಹಿರಿಯ ಕ್ರೀಡಾಪಟು ಹಾಬಿ ರಮೇಶ್, ಕೊಮುಲ್ ನಾಮ ನಿರ್ದೇಶಕ ಷರೀಫ್, ಪರ್ವತ್ ಸ್ಪೋರ್ಟ್ಸ್‌ನ ಆನಂದ್‌ರೆಡ್ಡಿ, ಕನಕ ಬ್ಯಾಸ್ಕೆಟ್‌ಬಾಲ್‌ನ ಖಜಾಂಚಿ ಮುದ್ದಣ್ಣ, ನಗರಸಭಾ ಸದಸ್ಯ ಚಿಟ್ಟಿ ರಘು, ಮಕ್ಕಳು, ಪೋಷಕರು ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ