ಚುನಾವಣಾ ವಾಹನಗಳಿಗೆ ಜಿಪಿಎಸ್

KannadaprabhaNewsNetwork |  
Published : Apr 19, 2024, 01:05 AM IST
(ಪೋಟೊ 17 ಬಿಕೆಟಿ 10, ವಿವಿಧ ತಂಡಗಳ ಕಾರ್ಯವೈಖರಿಗಳನ್ನು ನಿಯಂತ್ರಣ ಕೊಠಡಿಯಲ್ಲಿಯೇ ವಾಹನಗಳ ಚಲನವಲಗಳ ನೈಜ ಸ್ಥಿತಿಗಳನ್ನು ಪರಿಶೀಲಿಸಿ ಸಲಹೆ ಸೂಚನೆ ನೀಡುತ್ತಿರುವ ನೋಡಲ್ ಅಧಿಕಾರಿ ಅಮರೇಶ ನಾಯಕ) | Kannada Prabha

ಸಾರಾಂಶ

ಲೋಕಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪ್ಲೈಯಿಂಗ್ ಸ್ಕ್ವಾಡ್ ತಂಡ, ವಿಡಿಯೋ ಕಣ್ಗಾವಲು ತಂಡ, ಸೆಕ್ಟರ ಅಧಿಕಾರಿಗಳ ತಂಡಗಳಿಗೆ ಚುನಾವಣಾ ಮತಗಟ್ಟೆ ಕ್ಷೇತ್ರ ಪರಿಶೀಲನೆ, ಕ್ಷೇತ್ರ ಭೇಟಿಗಾಗಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ವಾಹನಗಳ ಮಾನಿಟರಿಂಗ್ ಮಾಡಲು ಜಿಪಿಎಸ್ ಉಪಕರಣ ಅಳವಡಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಸ್ಥಾಪಿಸಲಾಗಿರುವ ಜಿಲ್ಲಾ ನಿಯಂತ್ರಣ ಕೊಠಡಿಯಲ್ಲಿ ಚುನಾವಣಾ ಕಾರ್ಯಗಳಿಗೆ ನಿಯೋಜಿಸಲಾದ ವಾಹನಗಳಿಗೆ ಜಿಪಿಎಸ್ ಉಪಕರಣ ಅಳವಡಿಸಿ, ದಿನದ 24 ಗಂಟೆಗಳ ಕಾಲ ನಿಗಾ ವಹಿಸಲಾಗುತ್ತಿದೆ ಎಂದು ಜಿಲ್ಲಾ ನಿಯಂತ್ರಣ ಕೋಶದ ನೋಡಲ್ ಅಧಿಕಾರಿ ಅಮರೇಶ ನಾಯಕ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪ್ಲೈಯಿಂಗ್ ಸ್ಕ್ವಾಡ್ ತಂಡ, ವಿಡಿಯೋ ಕಣ್ಗಾವಲು ತಂಡ, ಸೆಕ್ಟರ ಅಧಿಕಾರಿಗಳ ತಂಡಗಳಿಗೆ ಚುನಾವಣಾ ಮತಗಟ್ಟೆ ಕ್ಷೇತ್ರ ಪರಿಶೀಲನೆ, ಕ್ಷೇತ್ರ ಭೇಟಿಗಾಗಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ವಾಹನಗಳ ಮಾನಿಟರಿಂಗ್ ಮಾಡಲು ಜಿಪಿಎಸ್ ಉಪಕರಣ ಅಳವಡಿಸಲಾಗಿದೆ. ವಿವಿಧ ತಂಡಗಳ ಕಾರ್ಯವೈಖರಿಗಳನ್ನು ನಿಯಂತ್ರಣ ಕೊಠಡಿಯಲ್ಲಿಯೇ ವಾಹನಗಳ ಚಲನವಲಗಳ ನೈಜ ಸ್ಥಿತಿಗಳನ್ನು ಪರಿಶೀಲಿಸಿ ಸಲಹೆ ಸೂಚನೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಚುನಾವಣೆ ಪ್ರಕ್ರಿಯೆಗೆ ಎಫ್‌ಎಸ್ಟಿ ತಂಡಗಳಿಗೆ 66 ವಾಹನ, ವಿಎಸ್ಟಿ ತಂಡಗಳಿಗೆ 7, ಸೆಕ್ಟರ ಅಧಿಕಾರಿಗಳಿಗೆ 15, ಪೊಲೀಸ್ ಅಧಿಕಾರಿಗಳಿಗೆ 36 ಹಾಗೂ ಎಸ್ಎಸ್ಟಿ ತಂಡಗಳಿಗೆ 2 ಸೇರಿ ಒಟ್ಟು 126 ವಾಹನಗಳಿಗೆ ಜಿಪಿಎಸ್ ಉಪಕರಣ ಅಳವಡಿಸಲಾಗಿದೆ. ಇದರಿಂದ ಪ್ರತಿಯೊಂದು ವಾಹನಗಳ ಚಲನವಲನ, ಮತಗಟ್ಟೆಗಳ ಕ್ಷೇತ್ರ ಪರಿಶೀಲನೆ ಕಾರ್ಯ ಚುರುಕುಗೊಂಡಿದ್ದು, ಸಾಕಷ್ಟು ಹಣ ಮುಟ್ಟುಗೋಲು ಹಾಕಲಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯ ಎಲ್ಲ ವಿಧಾನಸಭಾ ಮತಕ್ಷೇತ್ರಗಳು ಸೇರಿ ಒಟ್ಟು 26 ಕಡೆಗಳಲ್ಲಿ ಚೆಕ್‌ಪೊ ಕ್ಪೋಸ್ಟಗಳನ್ನು ಸ್ಥಾಪಿಸಲಾಗಿದ್ದು, ಮುಧೋಳ, ತೇರದಾಳ, ಜಮಖಂಡಿ, ಬೀಳಗಿ ಮತಕ್ಷೇತ್ರಗಳಲ್ಲಿ ತಲಾ 3 ಹಾಗೂ ಬಾದಾಮಿ, ಬಾಗಲಕೋಟೆ, ಹುನಗುಂದ ಮತಕ್ಷೇತ್ರಗಳಲ್ಲಿ ತಲಾ 4 ಚೆಕ್ಪೋಸ್ಟ ಹಾಗೂ ನರಗುಂದ ಮತಕ್ಷೇತ್ರದಲ್ಲಿ 2 ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ. ಪ್ರತಿ ಚೆಕ್‌ಪೋಸ್ಟ್‌ಗೆ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಅವುಗಳ ದೃಶ್ಯಾವಳಿಗಳ ಪ್ರಸಾರ ನಿಯಂತ್ರಣ ಕೊಠಡಿಯಲ್ಲಿ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ. ಚೆಕ್‌ಪೋಸ್ಟ್‌ ಮೂಲಕ ಹಾದು ಹೋಗುವ ಎಲ್ಲ ವಾಹನಗಳ ದೃಶ್ಯವನ್ನು ವೀಕ್ಷಿಸಬಹುದು. ಸಿಬ್ಬಂದಿ ಕಾರ್ಯವೈಖರಿ ಮೇಲೆ ಸಹ ನಿಗಾ ಇಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತೀಯರ ಕರೆತರಲು ವಿಶೇಷ ವಿಮಾನ ಮಾಡಿ: ಮೋದಿಗೆ ಸಿಎಂ ಸಿದ್ದು ಪತ್ರ
100ಕ್ಕೂ ಕನ್ನಡಿಗರ ಹೊತ್ತು ಬಂತು ಮೊದಲ ವಿಮಾನ