ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಪಟ್ಟಣದ ಜನರ ಬಹು ವರ್ಷಗಳ ಕನಸಾಗಿರುವ ಕನ್ನಡ ಭವನ ನಿರ್ಮಾಣಕ್ಕೆ ಯಾವುದೇ ಅಡೆತಡೆಯಿಲ್ಲದೆ ೨ಕೋಟಿ ರು.ಗಳ ವೆಚ್ಚದಲ್ಲಿ ಮುಂದಿನ ವರ್ಷ ಜನವರಿ ೧ರಂದು ಚಾಲನೆ ನೀಡಲಾಗುವುದು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಭರವಸೆ ನೀಡಿದರು.ಪಟ್ಟಣದ ಪುರಸಭೆ ಆವರಣದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ೬೯ನೇ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ತಾವು ಕೊಟ್ಟ ಮಾತಿನಂತೆ ಇದುವರೆಗೂ ನಡೆದುಕೊಂಡಿರುವ ಆದರೆ ಕನ್ನಡ ಭವನ ವಿಷಯದಲ್ಲಿ ಹಲವು ಬಾರಿ ಸುಳ್ಳು ಹೇಳಿರುವೆ. ಆದರೆ ಈ ಬಾರಿ ಮತ್ತೆ ಅದೇ ತಪ್ಪು ಮಾಡುವುದಿಲ್ಲ ಎಂದರು.ಜನವರಿಯಲ್ಲಿ ಗುದ್ದಲಿಪೂಜೆ
ಈ ಬಾರಿ ೨ಕೋಟಿ ವೆಚ್ಚದಲ್ಲಿ ಕನ್ನಡ ಭವನ ನಿರ್ಮಾಣ ಮಾಡಿಯೇ ತೀರುವೆ, ಮುಂದಿನ ವರ್ಷ ಜನವರಿ ೧ರಂದು ಗುದ್ದಲಿ ಪೂಜೆ ಮಾಡಿ ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಿ ಮುಂದಿನ ರಾಜ್ಯೋತ್ಸವವನ್ನು ಭವನದಲ್ಲಿ ಆಚರಣೆ ಮಾಡಲಾಗುವುದು.ಇದಲ್ಲದೆ ೧ ಕೋಟಿ ವೆಚ್ಚದಲ್ಲಿ ಪತ್ರಕರ್ತರ ಭವನ, ಲಯನ್ಸ್ ಭವನ ನಿರ್ಮಾಣಕ್ಕೂ ಜನವರಿ ೧ರಂದೇ ಭೂ ಪೂಜೆ ಮಾಡಿವೆ ಎಂದರು.ಮೂರು ಭಾಷೆಗಳ ಸಂಗಮ೨೫೦೦ ವರ್ಷಗಳ ಇತಿಹಾಸವನ್ನು ಹೊಂದಿರುವ ಕನ್ನಡ ಅತಿ ಹೆಚ್ಚು ಜ್ಙಾನಪೀಠ ಪ್ರಶಸ್ತಿಗಳನ್ನು ಪಡೆದ ಗೌರವಕ್ಕೆ ಪಾತ್ರವಾಗಿದೆ. ಇಂತಹ ಭಾಷೆಯನ್ನು ಉಳಿಸಿ ಬೆಳೆಸಲು ಹಲವು ಮಹಾನೀಯರ ತ್ಯಾಗ ಇದೆ. ಗಡಿ ಭಾಗದಲ್ಲಿ ಕನ್ನಡ ಭಾಷೆಯನ್ನು ಕಟ್ಟಿ ಬೆಳೆಸುವುದು ಸುಲಭದ ಮಾತಲ್ಲ, ಮೂರು ಭಾಷೆಗಳ ಸಂಗಮವಿರುವ ಬಂಗಾರಪೇಟೆಯಲ್ಲಿ ಭಾಷಾ ಸಮಸ್ಯೆಯಿಲ್ಲದಂತೆ ಎಲ್ಲರೂ ಕನ್ನಡ ಅಭಿವೃದ್ದಿಗೆ ಸಹಕಾರ ನೀಡುತ್ತಿರುವುದು ಹೆಮ್ಮೆಯ ವಿಷಯ. ಕನ್ನಡ ಬಳಸುವಂತೆ ಪ್ರಚಾರ ಮಾಡಿದರೆ ಸಾಲದು ಅದು ಜನರಲ್ಲಿ ಸ್ವಹಿಚ್ಚೆಯಿಂದ ಬರಬೇಕು ಎಂದರು.ತಹಸೀಲ್ದಾರ್ ವೆಂಕಟೇಶಪ್ಪ ಮಾತನಾಡಿ ನವೆಂಬರ್ ಬಂದರೆ ಎಲ್ಲರ ಹೃದಯದಲ್ಲಿ ಕನ್ನಡ ನಲಿದಾಡಿಯುವುದು,ಇದು ಬರೀ ನವೆಂಬರ್‌ಗೆ ಸೀಮಿತವಾಗದೆ ವರ್ಷ ವಿಡೀ ನಲಿಯಬೇಕು. ಸಾಹಿತ್ಯವನ್ನು ಕೊಲ್ಲುವುದೆಂದರೆ ಅದು ಕನ್ನಡವನ್ನು ಕೊಂದಂತೆ, ಭಾಷೆಗೆ ಧಕ್ಕೆ ಬಂದಾಗ ಕನ್ನಡಿಗರೆಲ್ಲರೂ ಒಂದಾಗಬೇಕಾದ ಅನಿವಾರ್ಯವಿದೆ ಎಂದರು.
ಗಮನಸೆಳೆಗ ಸ್ತಬ್ಧಚಿತ್ರ ಮೆರವಣಿಗೆಇದೇ ವೇಳೆ ಎಸ್‌ಎಸ್‌ಎಲ್‌ಸಿ,ಹಾಗೂ ದ್ವಿತೀಯ ಪಿಯುಸಿಯಲ್ಲಿ ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕಗಳಿಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಬಳಿಕ ವೈಭವದ ಸ್ತಬ್ಧಚಿತ್ರಗಳ ಮೆರವಣಿಗೆ ಎಲ್ಲರ ಗಮನಸೆಳೆಯಿತು.ಪುರಸಭೆ ಅಧ್ಯಕ್ಷ ಗೋವಿಂದ,ಉಪಾಧ್ಯಕ್ಷೆ ಚಂದ್ರವೇಣಿ,ತಾಪಂ ಇಒ ರವಿಕುಮಾರ್,ಪುರಸಭೆ ಸದಸ್ಯರಾದ ಕೆ.ಚಂದ್ರಾರೆಡ್ಡಿ,ಶಂಷುದ್ದಿಬ್ ಬಾಬು,ಬಿಇಒ ಗುರುಮೂರ್ತಿ,ಸಮಾಜ ಕಲ್ಯಾಣಾಧಿಕಾರಿ ಅಂಜಲಿ,ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ,ಕರವೇ ಅಧ್ಯಕ್ಷ ಕಣಿಂಬೆಲೆ ರಾಮಪ್ರಸಾದ್,ಕಾರಹಳ್ಳಿ ಚಿನ್ನಿ ವೆಂಕಟೇಶ್, ಪಾರ್ಥಸಾರಥಿ ಇದ್ದರು.ಕೆಬಿಪಿಟಿ.1.ಬಂಗಾರಪೇಟೆಯಲ್ಲಿ ನಡೆದ ರಾಜ್ಯೋತ್ಸವದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಾಸಕ ನಾರಾಯಣಸ್ವಾಮಿ ಇದ್ದಾರೆ.