ಅಕ್ರಮವಾಗಿ ನಡೆಸುತಿದ್ದ ಕ್ಲಿನಿಕ್‌ಗಳಿಗೆ ಬೀಗ

KannadaprabhaNewsNetwork |  
Published : May 17, 2025, 01:31 AM IST
16ಎಚ್ಎಸ್ಎನ್7:  | Kannada Prabha

ಸಾರಾಂಶ

ಜಿಲ್ಲಾ ಕೆಪಿಎಂಇ ನೋಡಲ್ ಅಧಿಕಾರಿ ಹಾಗೂ ತಾಲೂಕು ಆರೋಗ್ಯ ಅಧಿಕಾರಿ ಮತ್ತು ತಂಡ ಹಾಗೂ ಜಿಲ್ಲಾ ಆಯುಷ್ ಅಧಿಕಾರಿಗಳೊಂದಿಗೆ ಹಾಸನ ನಗರದ ಹೊಸ ಬಸ್ ನಿಲ್ದಾಣದ ಎದುರು ಇರುವ ಗಣಪತಿ ಕ್ಲಿನಿಕ್‌ಗೆ ಅನಿರೀಕ್ಷಿತ ಭೇಟಿ ನೀಡಿ ಈ ಕ್ಲಿನಿಕ್ ಕೆಪಿಎಂಇ ಅಡಿಯಲ್ಲಿ ನೋಂದಣಿ ಆಗದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುತ್ತಾರೆ. ಹಾಗೂ ಆಯುರ್ವೇದಿಕ್ ವೈದ್ಯರು ಆಲೋಪತಿ ಚಿಕಿತ್ಸೆಯನ್ನು ನೀಡುತ್ತಿರುವುದು ಗಮನಕ್ಕೆ ಬಂದು ಆ ಕ್ಲಿನಿಕ್ ಅನ್ನು ಪರಿಶೀಲಿಸಲಾಗಿ ಎಲ್ಲಾ ದಾಖಲಾತಿಗಳು ಒದಗಿದ್ದು ಹಾಗೂ ಕೆಪಿಎಂಸಿ ಕಾಯ್ದೆಗೆ ಸಂಬಂಧಿಸಿದ ಯಾವುದೇ ಕ್ರಮವನ್ನು ಅನುಸರಿಸದೇ ಅಕ್ರಮವಾಗಿ ಕ್ಲಿನಿಕ್ ನಡೆಸುತ್ತಿರುವುದು ಗಮನಕ್ಕೆ ಬಂದು ಕ್ಲಿನಿಕ್‌ಗೆ ನೋಟಿಸ್ ಜಾರಿ ಮಾಡಿ ಬೀಗ ಹಾಕಿ ಲಕೋಟೆಯಿಂದ ಸೀಜ್ ಮಾಡಲಾಗಿರುತ್ತದೆ.

ಕನ್ನಡಪ್ರಭ ವಾರ್ತೆ ಹಾಸನ

ಹಾಸನ ನಗರ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಕ್ಲಿನಿಕ್‌ಗಳಿಗೆ ದಿಢೀರ್‌ ಭೇಟಿ ಬೀಗ ಹಾಕಿಸಲಾಗಿದೆ.

ಜಿಲ್ಲಾ ಕೆಪಿಎಂಇ ನೋಡಲ್ ಅಧಿಕಾರಿ ಹಾಗೂ ತಾಲೂಕು ಆರೋಗ್ಯ ಅಧಿಕಾರಿ ಮತ್ತು ತಂಡ ಹಾಗೂ ಜಿಲ್ಲಾ ಆಯುಷ್ ಅಧಿಕಾರಿಗಳೊಂದಿಗೆ ಹಾಸನ ನಗರದ ಹೊಸ ಬಸ್ ನಿಲ್ದಾಣದ ಎದುರು ಇರುವ ಗಣಪತಿ ಕ್ಲಿನಿಕ್‌ಗೆ ಅನಿರೀಕ್ಷಿತ ಭೇಟಿ ನೀಡಿ ಈ ಕ್ಲಿನಿಕ್ ಕೆಪಿಎಂಇ ಅಡಿಯಲ್ಲಿ ನೋಂದಣಿ ಆಗದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುತ್ತಾರೆ. ಹಾಗೂ ಆಯುರ್ವೇದಿಕ್ ವೈದ್ಯರು ಆಲೋಪತಿ ಚಿಕಿತ್ಸೆಯನ್ನು ನೀಡುತ್ತಿರುವುದು ಗಮನಕ್ಕೆ ಬಂದು ಆ ಕ್ಲಿನಿಕ್ ಅನ್ನು ಪರಿಶೀಲಿಸಲಾಗಿ ಎಲ್ಲಾ ದಾಖಲಾತಿಗಳು ಒದಗಿದ್ದು ಹಾಗೂ ಕೆಪಿಎಂಸಿ ಕಾಯ್ದೆಗೆ ಸಂಬಂಧಿಸಿದ ಯಾವುದೇ ಕ್ರಮವನ್ನು ಅನುಸರಿಸದೇ ಅಕ್ರಮವಾಗಿ ಕ್ಲಿನಿಕ್ ನಡೆಸುತ್ತಿರುವುದು ಗಮನಕ್ಕೆ ಬಂದು ಕ್ಲಿನಿಕ್‌ಗೆ ನೋಟಿಸ್ ಜಾರಿ ಮಾಡಿ ಬೀಗ ಹಾಕಿ ಲಕೋಟೆಯಿಂದ ಸೀಜ್ ಮಾಡಲಾಗಿರುತ್ತದೆ.

ಇಂಡಸ್ಟ್ರಿಯಲ್ ಏರಿಯಾದ ಸಿದ್ದೇಶ್ವರ ಕ್ಲಿನಿಕ್ ಸಹ ಕೆಪಿಎಂಇ ನೋಂದಣಿಯಾಗದೆ ಅಕ್ರಮವಾಗಿ ಕ್ಲಿನಿಕ್ ನಡೆಸಿರುತ್ತಾರೆ ಹಾಗೂ ಕೆಪಿಎಂಇ ಕಾಯ್ದೆಗೆ ಸಂಬಂಧಿಸಿದಂತೆ ಯಾವುದೇ ಮಾನದಂಡಗಳನ್ನು ಅನುಸರಿಸಿರುವುದಿಲ್ಲ ಹಾಗೂ ಚನ್ನಪಟ್ಟಣದ ಹೇಮಂತ್ ಕ್ಲಿನಿಕ್, ದಕ್ಷಾ ಕ್ಲಿನಿಕ್ ಹಾಗೂ ಬೂವನಹಳ್ಳಿ ಗ್ರಾಮದಲ್ಲಿ ಇರುವ ವಿ.ಆರ್ ಕ್ಲಿನಿಕ್ ಈ ಮೂರು ಕ್ಲಿನಿಕ್‌ಗಳು ಕೆಪಿಎಂಇ ಅಡಿಯಲ್ಲಿ ಆಯುರ್ವೇದಿಕ್ ಪದ್ಧತಿಯಲ್ಲಿ ಲೈಸೆನ್ಸ್ ಪಡೆದುಕೊಂಡು ಅಲೋಪತಿ ಔಷಧೋಪಚಾರವನ್ನು ನಡೆಸುತ್ತಿರುತ್ತಾರೆ ಹಾಗೂ ಬಿಎಎಂಎಸ್ ವೈದ್ಯರು ಕ್ರಾಸ್ ಪ್ರಾಕ್ಟೀಸ್ ಮಾಡುತ್ತಿರುತ್ತಾರೆ ಹಾಗೂ ಜೈವಿಕ ನಿರ್ವಹಣೆಯಲ್ಲಿ ಕುಂಠಿತವಾಗಿರುತ್ತದೆ ಮತ್ತು ಕ್ಲಿನಿಕ್‌ನ ಒಳಭಾಗದಲ್ಲಿ ಡ್ರಿಪ್ ಸ್ಟ್ಯಾಂಡ್ ಲ್ಯಾಬ್ ಪರೀಕ್ಷೆ ಮಾಡುವ ಪರಿಕರಗಳು, ಇಂಜೆಕ್ಷನ್ ನೀಡಲ್‌ಗಳು ಹಾಗೂ ಆಲೋಪತಿ ಔಷಧಿಗಳು ದೊರೆತಿರುತ್ತವೆ. ಈ ಎಲ್ಲಾ ಮಾನದಂಡಗಳನ್ನು ಗಮನಿಸಿ ಈ ಮೂರು ಕ್ಲಿನಿಕ್ ಸೀಜ್ ಮಾಡಿ ನೋಟಿಸ್ ಜಾರಿ ಮಾಡಿ ಸಮಜಾಯಿಷಿ ಉತ್ತರ ನೀಡಲು ಆದೇಶಿಸಿರುತ್ತಾರೆ.

ಸಾರ್ವಜನಿಕರು ಹಾಸನ ಜಿಲ್ಲೆಯಲ್ಲಿ ಯಾವುದೇ ಅನಧಿಕೃತ ಕ್ಲಿನಿಕ್‌ಗಳು ಮತ್ತು ಕ್ರಾಸ್ ಪ್ರಾಕ್ಟೀಸ್ ಮಾಡುತ್ತಿರುವವರ ವಿವರವನ್ನು ಕಚೇರಿಗೆ ನೀಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ತಿಳಿಸಿರುತ್ತಾರೆ.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ