ಡಾ.ಎಚ್‌ಎಸ್‌ವಿಗೆ ಭಾವಗೀತೆ ಮೂಲಕ ಶ್ರದ್ಧಾಂಜಲಿ

KannadaprabhaNewsNetwork |  
Published : Jun 01, 2025, 11:47 PM IST
47 | Kannada Prabha

ಸಾರಾಂಶ

ಎಚ್ ಎಸ್ ವಿ ಅವರು ಅನುಭಾವದ ಉತ್ತುಂಗದಲ್ಲಿದ್ದ ಕವಿ, ಅವರೆಲ್ಲಾ ಗೀತೆಗಳಲ್ಲೂ ಸೂಕ್ಷ್ಮವಾದ ಅಧ್ಯಾತ್ಮಿಕ ಎಳೆಗಳಿರುವುದನ್ನು ಗಮನಿಸಬಹುದು,

ಕನ್ನಡಪ್ರಭ ವಾರ್ತೆ ಮೈಸೂರು

ಹಿರಿಯ ಕವಿ ಡಾ.ಎಚ್‌.ಎಸ್‌. ವೆಂಕಟೇಶಮೂರ್ತಿ ಅವರ ನಿಧನದ ಹಿನ್ನೆಲೆಯಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್‌ ಜಿಲ್ಲಾ ಶಾಖೆ ವತಿಯಿಂದ ಹೂಟಗಳ್ಳಿ ಕೆಎಚ್‌ಬಿ ಕಾಲೋನಿಯ ಶ್ರೀ ಅನಂತೇಶ್ವರ ಭವನದಲ್ಲಿ ಭಾನುವಾರ ಸಂಜೆ ನುಡಿನಮನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಕಲಾವಿದನೊಬ್ಬ ತನ್ನ ಕಲಾಕೃತಿಯಿಂದ ಕಾಲಾತೀತನಾದಂತೆಯೇ, ಕವಿಯೊಬ್ಬ ತನ್ನ ಕಾವ್ಯದಿಂದ ಕಾಲಾತೀತನಾಗುತ್ತಾನೆ, ಅಂತೆಯೇ ಎಚ್ ಎಸ್ ವಿ ಯವರು ತಮ್ಮ ಸಾವಿಲ್ಲದ ಸಾಹಿತ್ಯದಿಂದ ಅದರಲ್ಲೂ ಜೀವತೇವದಿಂದುದಿಸಿದ ಅವರ ಭಾವಗೀತೆಗಳಿಂದ ಅಂದರೆ ಕಾವ್ಯದ ಮೂಲಕ ಕಾಲಾತೀತರಾಗಿದ್ದು, ಕನ್ನಡ ಇರುವವರೆಗೂ ಅವರ ಅಮರ ಗೀತೆಗಳೊಂದಿಗೆ ಅವರೂ ಕೂಡಾ ಅಮರರಾಗಿರಲಿದ್ದಾರೆ, ಅವರಿಗೆಂದೂ ಸಾವಿಲ್ಲ, ಅವರ ಅಮೃತ ಸಾಹಿತ್ಯದೊಂದಿಗೆ ಅವರು ಅಕ್ಷರಶಃ ಅಮರರು ಎಂದು ಕವಿ ಜಯಪ್ಪ ಹೊನ್ನಾಳಿ ಅಭಿಪ್ರಾಯಪಟ್ಟರು.

ಎಚ್ಚೆಸ್ವಿ ನಮ್ಮ ಕಾಲದ ಕವಿಗಳ ಕವಿ, ಕವಿಕುಲಕ್ಕೆ ಪ್ರೀತಿಯ ಮೇಷ್ಟ್ರು, ಕಾಣದ ಕಡಲಿಗೆ ಹಂಬಲಿಸಿ, ಗಾನ ನಿಲ್ಲಿಸಿಬಿಟ್ಟರು,

ಅವರ " ಊರ ಸೇರಬಹುದೆ ನೀನು ದಾರಿ ಮುಗಿಯದೆ..!? " ಎಂಬ ಮಾತನ್ನಿಂದು ಅವರನ್ನೇ ನಾವು ಕೇಳಬೇಕಾಗಿದೆ ಎಂದರು.

ಸಮಾಜ ಸೇವಕ ಕೆ. ರಘುರಾಮ ವಾಜಪೇಯಿ ಮಾತನಾಡಿ, ಎಚ್ ಎಸ್ ವಿ ಅವರು ಅನುಭಾವದ ಉತ್ತುಂಗದಲ್ಲಿದ್ದ ಕವಿ, ಅವರೆಲ್ಲಾ ಗೀತೆಗಳಲ್ಲೂ ಸೂಕ್ಷ್ಮವಾದ ಅಧ್ಯಾತ್ಮಿಕ ಎಳೆಗಳಿರುವುದನ್ನು ಗಮನಿಸಬಹುದು, ಅವರ ಹಾಡುಗಳನ್ನು ಹಾಡುವ ಮೂಲಕ ಅವರಿಗಿಂದು ಶ್ರದ್ಧಾಂಜಲಿ ಸಲ್ಲಿಸುತ್ತಿರುವುದು ತುಂಬಾ ಅರ್ಥಪೂರ್ಣ, ಅವರಿಗೆ ಪರಮಾತ್ಮ ಚಿರಶಾಂತಿ ದಯಪಾಲಿಸಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸುಗಮ ಸಂಗೀತ ಪರಿಷತ್‌ ಜಿಲ್ಲಾಧ್ಯಕ್ಷ ನಾಗರಾಜ ವಿ. ಬೈರಿ ಮಾತನಾಡಿ, ಎಚ್ಚೆಸ್ವಿಯವರನ್ನು ನಾವು ನಮ್ಮ ಪರಿಷತ್ ನಿಂದ,

" ಕವಿಯ ನೋಡಿ, ಕವಿತೆ ಕೇಳಿ " ಸಮಾರಂಭಕ್ಕೆ ಕಳೆದ ವರ್ಷ ಕರೆಸಿದ್ದೆವು, ಅವರೊಂದಿಗೆ ಕವಿಗಳಾದ ಬಿ ಆರ್ ಲಕ್ಷ್ಮಣರಾವ್, ಜಯಪ್ಪ ಹೊನ್ನಾಳಿ ಅವರಿಗೂ ವೇದಿಕೆ ಕಲ್ಪಿಸಿದ್ದೆವು, ಈ ಮೂವರು ಕವಿಗಳ ಭಾವಗೀತೆಗಳನ್ನು ಪರಿಷತ್ತಿನ ಗಾಯಕ- ಗಾಯಕಿಯರಿಂದ ಬಹು ಚೆಂದವಾಗಿ ಹಾಡಿಸಿದ್ದನ್ನು ಕಂಡು, ಕಿಕ್ಕಿರಿದು ಸೇರಿದ್ದ ಜನರನ್ನು ಕಂಡು ತುಂಬಾ ಭಾವುಕರಾಗಿ ತಮಗೆ ಕೃತಜ್ಞತೆಗಳನ್ನು ಹೃದಯತುಂಬಿ ತಿಳಿಸಿದ್ದರು, ಅದೊಂದು ನಮ್ಮ ಪರಿಷತ್ತಿನ ಚರಿತ್ರೆಯಲ್ಲಿ ನಾವೆಂದಿಗೂ ಮರೆಯಲಾರದ ಸ್ಮೃತಿ ಮಧುರ ಸಮಾರಂಭ ಎಂದರು.

ನಂತರ ನಡೆದ ನುಡಿ ನಮನ ಕಾರ್ಯಕ್ರಮದಲ್ಲಿ ಅವರ ಜನಪ್ರಿಯ ಭಾವಗೀತೆಗಳನ್ನು ಸುಮಾರು ಇಪ್ಪತ್ತಕ್ಕೂ ಹೆಚ್ಚು ಜನ ಗಾಯಕ ಗಾಯಕಿಯರು ಹಾಡುವ ಮೂಲಕ ಗಾನ ನಮನ ಸಲ್ಲಿಸಿದರು.

''''''''ಬಯಸಿದೆ ನಿನ್ನನು " ರಾಜೇಶ್ ಪಡಿಯಾರ್ , ''''''''ಎಲ್ಲಿಗೆ ಹೋದನು'''''''' ಸುಗಂಧಮ್ಮ ಜಯಪ್ಪ, ''''''''ರೆಕ್ಕೆ ಇದ್ದರೆ ಸಾಕೇ '''''''' ಉಪಾಸನ, ''''''''ಇರಬೇಕು ಇರುವಂತೆ '''''''' ಡಾ.ಪೂರ್ಣಿಮಾ,

"ಅಮ್ಮಾ ನಾನು ದೇವರಾಣೆ " ಡೇವಿಡ್‌, ''''''''ಬಯಲಿನೊಳಗೆ ಯಾರೂ ಮರೆತ'''''''' ವೇದಶ್ರೀ, ''''''''ಎಲೆಗಳು ನೂರಾರು'''''''' ನರಸಿಂಹಮೂರ್ತಿ ಮುಂತಾದವರಿಂದ ಸಮೂಹ ಗಾಯನ, ''''''''ನಾಯಿ ತಲೆ ಮೇಲಿನ ಬುತ್ತಿ'''''''' ರವಿರಾಜ್ ಹಾಸು, ''''''''ಇಷ್ಟು ಕಾಲ ಒಟ್ಟಗಿದ್ದು'''''''' ಕವಿತಾ ಕಾಮತ್ ಹಾಡಿದರು.

ಇನ್ನೂ ಕೆಲಗೀತೆಗಳನ್ನ ಹಾಡಿ ನುಡಿನಮನ ಸಲ್ಲಿಸಲಾಯಿತು.

ಯೋಗ ಒಕ್ಕೂಟದ ಕಾರ್ಯಾಧ್ಯಕ್ಷ ಕೆ.ಜಿ. ದೇವರಾಜು, ಎನ್‌. ಬೆಟ್ಟೇಗೌಡ, ಗಂಗಾಧರಪ್ಪ, ಸಿರಿಬಾಲು, ನಿತ್ಯಾನಂದ ಕಾಮತ್, ಎಚ್ಚೆಸ್ವಿ ಒಡನಾಡಿ ಅಮರನಾಥ್ ಮುಂತಾದವರು ಉಪಸ್ಥಿತರಿದ್ದು ನುಡಿನಮನ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಜ್ಞಾನವನ್ನು ಓಡಿಸಿ ಜ್ಞಾನ ಬೆಳಗುವ ಗುರುವಿಗೆ ಗುಲಾಮರಾಗಿ: ಡಿ.ನಾರಾಯಣಪ್ಪ
ತೋಟಗಾರಿಕೆ ವಿವಿಯಲ್ಲಿ ರೈತ ಸಂಪರ್ಕ ಕೇಂದ್ರ ಸ್ಥಾಪಿಸಿ