ವಾಯು ಮಾಲಿನ್ಯ ತಡೆಗೆ ವಾಹನ ಸುಸ್ಥಿತಿಯಲ್ಲಿಡಿ

KannadaprabhaNewsNetwork |  
Published : Nov 07, 2025, 02:00 AM IST
6ಕೆಜಿಎಫ್‌1 | Kannada Prabha

ಸಾರಾಂಶ

ಪರಿಸರಕ್ಕೆ ಧಕ್ಕೆಯಾಗಿರುವ ವಾಯು ಮಾಲಿನ್ಯವನ್ನು ತಡೆಯಲು, ವಾಹನ ಮಾಲಿಕರು, ಚಾಲಕರು ಕಾಲ ಕಾಲಕ್ಕೆ ವಾಹನವನ್ನು ತಪಾಸಣೆ ಮಾಡಿಸಿ, ಹೆಚ್ಚು ಹೊಗೆ ಉಗುಳದಂತೆ ಕಾಳಜಿ ವಹಿಸಬೇಕು. ವಾಹನ ತರಬೇತಿ ಕೇಂದ್ರವರು ಸಹ ಈ ಬಗ್ಗೆ ಶಿಕ್ಷಣಾರ್ಥಿಗಳಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಬೇಕು.

ಕನ್ನಡಪ್ರಭ ವಾರ್ತೆ ಕೆಜಿಎಫ್ವಾಯುಮಾಲಿನ್ಯ ತಡೆಯಲು ವಾಹನಗಳನ್ನು ಸುಸ್ಥಿತಿಲ್ಲಿಡುವುದು ಎಲ್ಲರ ಆದ್ಯ ಕರ್ತವ್ಯ ಎಂದು ಕೆಜಿಎಫ್‌ನ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯ ಹಿರಿಯ ಸಾರಿಗೆ ಅಧಿಕಾರಿ ಗಜೇಂದ್ರಬಾಬು ಅಭಿಪ್ರಾಯಪಟ್ಟರು.ಕೆಜಿಎಫ್ ಜಿಲ್ಲಾ ಸಾರಿಗೆ ಇಲಾಖೆ ವತಿಯಿಂದ ಆಯೋಜಿ ಸಿದ್ದ ವಾಯುಮಾಲಿನ್ಯ ನಿಯಂತ್ರಣ ಮಾಸಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ದಿನೇ ದಿನೆ ಹೆಚ್ಚು ತ್ತಿರುವ ವಾಹನ ದಟ್ಟಣೆಯಿಂದ ವಾಯು ಮಾಲಿನ್ಯವೂ ಅಧಿಕಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ನಾವು ಬಳಸುವ ವಾಹನಗಳನ್ನು ಸುಸ್ಥಿತಿಯಲ್ಲಿಡುವುದರ ಮೂಲಕ ವಾಯು ಮಾಲಿನ್ಯ ತಡೆಯಬೇಕು ಎಂದರು.ವಾಹನಗಳನ್ನು ಸುಸ್ಥಿತಿಯಲ್ಲಿಡಿ

ಪರಿಸರಕ್ಕೆ ಧಕ್ಕೆಯಾಗಿರುವ ವಾಯು ಮಾಲಿನ್ಯವನ್ನು ತಡೆಯಲು, ವಾಹನ ಮಾಲಿಕರು, ಚಾಲಕರು ಕಾಲ ಕಾಲಕ್ಕೆ ವಾಹನವನ್ನು ತಪಾಸಣೆ ಮಾಡಿಸಿ, ಹೆಚ್ಚು ಹೊಗೆ ಉಗುಳದಂತೆ ಕಾಳಜಿ ವಹಿಸಬೇಕು. ವಾಹನ ತರಬೇತಿ ಕೇಂದ್ರವರು ಸಹ ಈ ಬಗ್ಗೆ ಶಿಕ್ಷಣಾರ್ಥಿಗಳಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಬೇಕೆಂದು ಸಲಹೆ ನೀಡಿದರು. ಸರಕಾರ ವಾಯು ಮಾಲಿನ್ಯ ತಡೆಯಲು ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದ್ದು, ಇದರಲ್ಲಿ ವಾಹನದ ಹೊಗೆಯ ಪ್ರಮಾಣ ನಿಗದಿತವಾಗಿರುವಂತೆ ನೋಡಿ ಕೊಳ್ಳಬೇಕು. ಇದಕ್ಕಾಗಿ ಸಂಬಂಧಿಸಿದ ಸಾರಿಗೆ ಇಲಾಖೆಯಿಂದ ಪ್ರಮಾಣ ಪತ್ರ ಪಡೆದುಕೊಳ್ಳಬೇಕೆಂದು ಮಾಹಿತಿ ನೀಡಿದರು.ಮೋಟಾರು ವಾಹನ ನೀರಿಕ್ಷ ಶ್ರೀನಿವಾಸ್ ಮಾತನಾಡಿ, ಸಾರ್ವಜನಿಕ ಸಾರಿಗೆ ಮತ್ತು ಕಾರ್‌ಪೂಲಿಂಗ್ ಬಳಕೆ - ಒಬ್ಬ ವ್ಯಕ್ತಿಯ ಸಾರಿಗೆ ಅಗತ್ಯಗಳಿಗಾಗಿ ದಹನವಾಗುವ ಇಂಧನದ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ, ವಾತಾವರಣಕ್ಕೆ ಬಿಡುಗಡೆಯಾಗುವ ಮಾಲಿನ್ಯಕಾರಕಗಳ ಪ್ರಮಾಣವನ್ನು ಕಡಿಮೆ ಮಾಡಬಹುದು, ಈ ಆಯ್ಕೆಗಳು ಆರ್ಥಿಕವಾಗಿಯೂ ಪರಿಣಾಮಕಾರಿಯಾಗುತ್ತವೆ ಮತ್ತು ಹಣವನ್ನು ಉಳಿಸಲು ಸಹಾಯ ಮಾಡಬಹುದೆಂದು ತಿಳಿಸಿದರು. ದೀಪ ಆಫ್ ಮಾಡಿ:

ನಮ್ಮ ಹೆಚ್ಚಿನ ವಿದ್ಯುತ್ ಪಳೆಯುಳಿಕೆ ಇಂಧನಗಳ ದಹನದಿಂದ ಉತ್ಪತ್ತಿಯಾಗುತ್ತದೆ, ಇದು ವಾಯು ಮಾಲಿನ್ಯಕ್ಕೆ ದೊಡ್ಡ ಕೊಡುಗೆ ನೀಡುತ್ತದೆ. ಆದ್ದರಿಂದ, ವಿದ್ಯುತ್ ಸಂರಕ್ಷಣೆಯು ವಾಯು ಮಾಲಿನ್ಯವನ್ನು ತಡೆಗಟ್ಟುವ ಪರಿಣಾಮಕಾರಿ ಮಾರ್ಗ. ಉತ್ಪನ್ನಗಳ ಮರುಬಳಕೆ ಮತ್ತು ಮರುಬಳಕೆ - ಉತ್ಪನ್ನಗಳನ್ನು ಮರುಬಳಕೆ ಮಾಡುವುದರಿಂದ ಉತ್ಪನ್ನವನ್ನು ತಯಾರಿಸಲು ಹೋಗುವ ಶಕ್ತಿಯ ಪ್ರಮಾಣವನ್ನು ಸಂರಕ್ಷಿಸಲಾಗುತ್ತದೆ. ಇದಲ್ಲದೆ, ಉತ್ಪನ್ನಗಳ ಮರುಬಳಕೆಯು ಹೊಸದನ್ನು ತಯಾರಿಸುವುದಕ್ಕಿಂತ ಹೆಚ್ಚು ಶಕ್ತಿ-ಸಮರ್ಥವಾಗಿರುತ್ತದೆ ಎಂದರು. ಈ ಸಂದರ್ಭದಲ್ಲಿ ಉಪ ವಾಹನ ಮೋಟಾರು ನೀರಿಕ್ಷಕರಾದ ಮುನಿಕೃಷ್ಣ, ಕಛೇರಿಯ ಅಧೀಕ್ಷಕರಾದ ಆನಂದ್‌ಕುಮಾರ್, ಸುಬ್ರಮಣಿ, ಪ್ರಕಾಶ್ ತಾಯಲೂರು ಸುಹೇಲ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

PREV

Recommended Stories

ಕಸದಿಂದ ಲಕ್ಷ ಮನೆಗೆ ವಿದ್ಯುತ್ ಪೂರೈಕೆ: ಕರಿಗೌಡ
‘ಶಕ್ತಿ’ಯಿಂದ ಮಹಿಳೆಯರ ಸಾರಿಗೆಯ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ