ಹಿಟ್ ಆಂಡ್ ರನ್ ಕಾಯ್ದೆ ಕೈಬಿಡಲು ಆಗ್ರಹ

KannadaprabhaNewsNetwork |  
Published : Jan 05, 2024, 01:45 AM IST
ಮಹಾಲಿಂಗಪುರ  | Kannada Prabha

ಸಾರಾಂಶ

ಈ ಕಾಯ್ದೆಯಿಂದ ಬಡ ವಾಹನ ಚಾಲಕರಿಗೆ ತುಂಬಾ ತೊಂದರೆಯಾಗುತ್ತದೆ. ಅಲ್ಲದೇ ಇವರುಗಳ ಸಂಬಳ ತೀರ ಕಡಿಮೆ ಇರುವುದಿರಂದ ಇವರ ನಿತ್ಯ ಬದುಕು ನಡೆಸುವುದಕ್ಕೆ ತುಂಬಾ ತೊಂದರೆ ಇದೆ. ಇನ್ನೂ ಅಕಸ್ಮಾತಾಗಿ ಆಗುವ ಏಕ್ಸಿಡೆಂಟ್‌ಗಳನ್ನು ಗಮನದಲ್ಲಿಟ್ಟು ಇಷ್ಟೊಂದು ವೆಚ್ಚ ಭರಿಸುವ ಕಾಯ್ದೆ ತರುವುದು ಯಾವ ನ್ಯಾಯ?

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಕೇಂದ್ರ ಸರ್ಕಾರರ ಹಿಟ್ ಆಂಡ್ ರನ್ ಕಾಯ್ದೆ ಮಾಡಿ ಲಾರಿ ಚಾಲಕರಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 7 ಲಕ್ಷ ರು. ದಂಡ ವಿಧಿಸುವ ಕಾನೂನನ್ನು ಕೂಡಲೇ ಕೈ ಬಿಡಬೇಕು ಎಂದು ವಾಹನ ಚಾಲಕರ ಸಂಘದ ನಬಿ ಯಕ್ಷಂಬಿ ಹೇಳಿದರು.ಸ್ಥಳೀಯ ಸರ್ಕಾರರಿ ಪ.ಪೂ ಕಾಲೇಜಿನ ಹತ್ತಿರದ ಅಂಗಡಿಯಲ್ಲಿ ಸ್ಥಳೀಯ ಆಟೋ ಚಾಲಕರು, ಕ್ಯಾಬ್, ಟ್ರಕ್, ಟ್ರ್ಯಾಕ್ಟರ್‌, ಟಾಟಾ ಎಎಸ್ ಸೇರಿದಂತೆ ಇನ್ನೂ ಹಲವಾರು ವಾಹನ ಚಾಲಕರು ಗುರುವಾರ ಬೆಳಿಗ್ಗೆ ಸಭೆ ನಡೆಸಿ ಕೇಂದ್ರ ಸರ್ಕಾರರದ ಹಿಟ್ ಆಂಡ್ ರನ್ ಕಾಯ್ದೆ ವಿರೋಧಿಸಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಈ ಕಾಯ್ದೆಯಿಂದ ಬಡ ವಾಹನ ಚಾಲಕರಿಗೆ ತುಂಬಾ ತೊಂದರೆಯಾಗುತ್ತದೆ. ಅಲ್ಲದೇ ಇವರುಗಳ ಸಂಬಳ ತೀರ ಕಡಿಮೆ ಇರುವುದಿರಂದ ಇವರ ನಿತ್ಯ ಬದುಕು ನಡೆಸುವುದಕ್ಕೆ ತುಂಬಾ ತೊಂದರೆ ಇದೆ. ಇನ್ನೂ ಅಕಸ್ಮಾತಾಗಿ ಆಗುವ ಏಕ್ಸಿಡೆಂಟ್‌ಗಳನ್ನು ಗಮನದಲ್ಲಿಟ್ಟು ಇಷ್ಟೊಂದು ವೆಚ್ಚ ಭರಿಸುವ ಕಾಯ್ದೆ ತರುವುದು ಯಾವ ನ್ಯಾಯ? ಎಷ್ಟೋ ವರ್ಷಗಳಿಂದ ಲಾರಿಗಳು ವಿವಿದ ವಾಹನಗಳು ಚಲಾಯಿಸುತ್ತಲೆ ಇವೆ. ಅಪಘಾತಗಳಿಂದ ತೊಂದರೆಯಾದವರಿಗೆ ವಿಮಾ ರಕ್ಷಣೆ ಮೂಲಕ ನ್ಯಾಯ ಒದಗಿಸಲಾಗುತ್ತಿದೆ. ಕಾರಣ ಇಂತಹ ಬಡತನದಲ್ಲಿ ಅತೀ ಕಡಿಮೆ ಸಂಬಳದಲ್ಲಿ ರಾತ್ರಿ ಹಗಲು ದುಡಿದರು ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ಪರದಾಡುತ್ತಿರುವ ವಾಹನ ಚಾಲಕರಿಗೆ ಈ ಕಾಯ್ದೆಯಿಂದ ತುಂಬಾ ತೊಂದರೆಯಾಗುತ್ತದೆ. ಕಾರಣ ಸರ್ಕಾರರ ಈ ಕಾಯ್ದೆಯನ್ನು ಕೂಡಲೇ ಕೈಬಿಡಬೇಕು ಎಂದರು. ನಂತರ ಮಾತನಾಡಿದ ಪುರಸಭೆ ಮಾಜಿ ಅಧ್ಯಕ್ಷ ಶೇಖರ ಅಂಗಡಿ ಮಾತನಾಡಿ, ಸರ್ಕಾರರದ ಯಾವುದೇ ಯೋಜನೆಗಳು ಕೂಡಾ ಸಾರ್ವಜನಿಕರಿಗೆ ಉಪಯೋಗವಾಗುವ ಮತ್ತು ಹೊರೆಯಾಗದ ರೀತಿಯಲ್ಲಿ ಕಾನೂನು ತಿದ್ದುಪಡಿ ಮಾಡುವುದು ಒಳ್ಳೆಯದು. ಬರೀ ಒಂದೇ ಉದ್ದೇಶ ಇಟ್ಟುಕೊಂಡ ಬಡ ವಾಹನ ಚಾಲಕರಿಗೆ ಇಷ್ಟೊಂದು ಭಾರೀ ದಂಡ ಮತ್ತು ಶಿಕ್ಷೆಕೊಡುವುದು ಯಾವ ನ್ಯಾಯ? ಆದ್ದರಿಂದ ಕೇಂದ್ರ ಸರ್ಕಾರರ ಈ ಕಾಯ್ದೆಯ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ ಬಡ ಚಾಲಕರಿಗೆ ತೊಂದರೆಯಾಗದ ರೀತಿಯಲ್ಲಿ ಕಾಯ್ದೆ ತಿದ್ದುಪಡಿ ಮಾಡಿ ವಾಹನ ಚಾಲಕರ ಬದುಕಿಗೆ ನೇರವಾಗಬೇಕು ಎಂದರು.

ಈ ಸಂದರ್ಭದಲ್ಲಿ ಎಲ್ಲ ವಾಹನ ಚಾಲಕರು ಸೇರಿ ಸಭೆ ನಡೆಸಿ ಬರುವ ಶನಿವಾರ ಮತ್ತೆ ಎಲ್ಲರೂ ಸೇರಿ ಸಭೆ ಕರೆದ್ದಿದ್ದಾರೆ. ಅಂದು ಮುಂದಿನ ಹೋರಾಟಗಳ ಬಗ್ಗೆ ತೀವ್ರ ಸ್ವರೂಪ ಕೊಡುವ ಬಗ್ಗೆ ಅಂದು ನಿರ್ಣಯ ತೆಗೆದುಕೊಂಡು ಮುಂದಿನ ನಡೆ ತಿಳಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಸಯ್ಯದ ಮೋಪಗಾರ, ಸೈಯದ ಬರಗಿ, ಮಲ್ಲು ಕಂಪು, ಯುವರಾಜ ನಂದೇಶ್ವರ, ಆಸ್ಕರ ಪಾಂಡು, ಪಾರೂಪ ಮಕಾನದಾರ, ಮಹಾದೇವ ಉತ್ನಾಳ, ಪ್ರದೀಪ, ಶಂಕರ ಚಂಡೋಲ, ರಾಘು ಅನೇಪ್ಪಗೋಳ, ಮಹಾಲಿಂಗ ಕಂದಗಲ್, ಹನಮಂತ ನಾವಿ, ಕರೆಪ್ಪ ಬಂಡಿ, ಸತೀಶ ಹ್ಯಾಗಾಡಿ, ರಿಯಾಜ ನದಾಫ, ಚಂದ್ರಶೇಖರ ಹಿರೇಮಠ, ಜುಬೇರ ಮಕಾನದಾರ, ರಫೀಕ ಬಿಸನಾಳ, ತಿಮ್ಮಣ್ಣ ಸನದಿ ಸೇರಿದಂತೆ ಹಲವರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ