ಪೌರ ಕಾರ್ಮಿಕರ ನಡುವೆ ತಾರತಮ್ಯ ಬೇಡ

KannadaprabhaNewsNetwork |  
Published : Jul 05, 2026, 01:30 AM IST
4ಎಚ್ಎಸ್ಎನ್18 :  | Kannada Prabha

ಸಾರಾಂಶ

ಹೊರಗುತ್ತಿಗೆ ಪೌರಕಾರ್ಮಿಕರಿಗೆ ಮತ್ತು ಖಾಯಂ ಪೌರಕಾರ್ಮಿಕರಿಗೆ ಅಧಿಕಾರಿಗಳು ತಾರತಮ್ಯ ಮಾಡದೇ ಸುರಕ್ಷತಾ ಪರಿಕರಗಳಾದ ಬೂಟು, ಗ್ಲೌವ್‌, ಎರೆಡು ಜೊತೆ ಸಮವಸ್ತ್ರ, ವರ್ಷಕ್ಕೆ ಮೂರು ಬಾರಿ ಆರೋಗ್ಯ ತಪಾಸಣೆಯನ್ನು ಕಡ್ಡಾಯವಾಗಿ ಮಾಡಿಸಬೇಕು ಹಾಗೂ ಉತ್ತಮವಾದ ಊಟ ತಿಂಡಿ ವ್ಯವಸ್ಥೆಯನ್ನು ನೀಡಬೇಕು ಎಂದು ತಿಳಿಸಿದರು. ಪೌರಕಾರ್ಮಿಕರು ಯಾವುದೇ ಭಯವಿಲ್ಲದೆ ಮುಕ್ತವಾಗಿ ತಮ್ಮ ಮೂಲಭೂತ ಸಮಸ್ಯೆಗಳನ್ನು ತಿಳಿಸಿದರೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಹಂತ ಹಂತವಾಗಿ ಪರಿಹಾರ ಒದಗಿಸಿಕೊಡುತ್ತೇವೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಮಳೆ ಚಳಿ, ಗಾಳಿಯನ್ನು ಲೆಕ್ಕಿಸದೆ ನಗರವನ್ನು ಸ್ವಚ್ಛಗೊಳಿಸಿ ಜಿಲ್ಲೆಯ ಜನರು ಆರೋಗ್ಯಕರ ಜೀವನ ನಡೆಸಲು ಕಾರಣರಾಗಿರುವ ಪೌರಕಾರ್ಮಿಕರು ಯಾವುದೇ ರೀತಿಯ ಶೋಷಣೆ ಅನುಭವಿಸಬಾರದು ಎಂದು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಪಿ. ರಘು ತಿಳಿಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ನಗರ ಸ್ಥಳೀಯ ಸಂಸ್ಥೆಗಳು ಹಾಸನ ಜಿಲ್ಲೆ ಇವರ ಸಹಯೋಗದೊಂದಿಗೆ ನಗರದ ಡಾ. ಬಿ. ಆರ್ ಅಂಬೇಡ್ಕರ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ಹಾಸನ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮೀಣ ಸಂಸ್ಥೆಗಳು ಮತ್ತು ಇತರೆ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸ್ವಚ್ಛತೆ ಕಾರ್ಮಿಕರು ಹಾಗೂ ಪೌರಕಾರ್ಮಿಕರಿಗೆ ಸಂಬಂಧಿಸಿದಂತೆ ನೇರ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪೌರಕಾರ್ಮಿಕರು ತಮ್ಮ ಸಮಸ್ಯೆಗಳು ತಿಳಿಸಿದರೆ ಆಯೋಗವು ತನ್ನಲ್ಲಿರುವ ಶಕ್ತಿಯನ್ನು ಉಪಯೋಗಿಸಿಕೊಂಡು ನ್ಯಾಯ ಕೊಡಿಸುವ ಪ್ರಯತ್ನ ಪಡುತ್ತದೆ ಎಂದು ತಿಳಿಸಿದರು.ನಗರದಲ್ಲಿ ಹೊರಗುತ್ತಿಗೆ ಪೌರಕಾರ್ಮಿಕರಿಗೆ ಮತ್ತು ಖಾಯಂ ಪೌರಕಾರ್ಮಿಕರಿಗೆ ಅಧಿಕಾರಿಗಳು ತಾರತಮ್ಯ ಮಾಡದೇ ಸುರಕ್ಷತಾ ಪರಿಕರಗಳಾದ ಬೂಟು, ಗ್ಲೌವ್‌, ಎರೆಡು ಜೊತೆ ಸಮವಸ್ತ್ರ, ವರ್ಷಕ್ಕೆ ಮೂರು ಬಾರಿ ಆರೋಗ್ಯ ತಪಾಸಣೆಯನ್ನು ಕಡ್ಡಾಯವಾಗಿ ಮಾಡಿಸಬೇಕು ಹಾಗೂ ಉತ್ತಮವಾದ ಊಟ ತಿಂಡಿ ವ್ಯವಸ್ಥೆಯನ್ನು ನೀಡಬೇಕು ಎಂದು ತಿಳಿಸಿದರು. ಪೌರಕಾರ್ಮಿಕರು ಯಾವುದೇ ಭಯವಿಲ್ಲದೆ ಮುಕ್ತವಾಗಿ ತಮ್ಮ ಮೂಲಭೂತ ಸಮಸ್ಯೆಗಳನ್ನು ತಿಳಿಸಿದರೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಹಂತ ಹಂತವಾಗಿ ಪರಿಹಾರ ಒದಗಿಸಿಕೊಡುತ್ತೇವೆ ಎಂದು ತಿಳಿಸಿದರು.ಪ್ರತಿ ತಿಂಗಳು ಸಂಬಳ ಆದ ನಂತರ ಸ್ಯಾಲರಿ ಸ್ಲಿಪ್‌ಗಳನ್ನು ಪ್ರತಿ ಪೌರಕಾರ್ಮಿಕರಿಗೂ ಕಡ್ಡಾಯವಾಗಿ ನೀಡಬೇಕು. ಜೊತೆಗೆ ಏಜೆನ್ಸಿ ಅವರು ಪೌರಕಾರ್ಮಿಕರ ಕ್ರಮದ ಬಗ್ಗೆ ಕಡ್ಡಾಯವಾಗಿ ದಾಖಲಾತಿಯನ್ನು ಆಯೋಗಕ್ಕೆ ನೀಡಬೇಕು ಎಂದು ತಿಳಿಸಿದರು. ಪೌರ ಕಾರ್ಮಿಕರಿಗೆ ಇ.ಎಸ್. ಐ. ಹಾಗೂ ಪಿ.ಎಫ್ ಹಣದ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಯಾವುದೇ ಹಣವನ್ನು ತಡೆ ಹಿಡಿಯದಂತೆ ನೇರವಾಗಿ ಖಾತೆಗೆ ಹಾಕಬೇಕು ಎಂದು ತಿಳಿಸಿದರು. ಹೊರಗುತ್ತಿಗೆ ನೌಕರರು ಹಾಗೂ ಖಾಯಂ ನೌಕರರು ಯಾವುದೇ ತೊಂದರೆ ಉಂಟಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ನೇರವಾಗಿ ಸಮಸ್ಯೆಯನ್ನು ತಿಳಿಸಿ ಪರಿಹಾರವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಪೌರ ಕಾರ್ಮಿಕರಿಗೆ ವಿಶ್ರಾಂತಿ ಕೊಠಡಿಯನ್ನು ನಿರ್ಮಿಸಬೇಕು ಹಾಗೂ ಮುಖ್ಯವಾಗಿ ಸ್ವಚ್ಛತೆ ಪರಿಕಾರಗಳಿಲ್ಲದೆ ಯಾವುದೇ ನೌಕರರು ಕೆಲಸವನ್ನು ಮಾಡಬಾರದು ಎಂದು ಜಾಗೃತಿ ಮೂಡಿಸಿದರು.ಸರ್ಕಾರದಿಂದ ವಸತಿಗಳನ್ನು ನೀಡಿದ್ದು ಯಾವ ಫಲಾನುಭವಿಗಳು ವಾಸವಿರುವುದಿಲ್ಲವೋ ಅಂತಹವರಿಗೆ ಮೂರು ಬಾರಿ ನೋಟಿಸ್ ನೀಡಿ ನಂತರ ಅರ್ಹ ಪೌರಕಾರ್ಮಿಕರಿಗೆ ಆ ಮನೆಗಳನ್ನು ನೀಡಬೇಕು ವಸತಿ ನೀಡುವುದರ ಜೊತೆಗೆ ಹಕ್ಕು ಪತ್ರ ನೀಡಬೇಕು ಪ್ರತಿಯೊಬ್ಬ ಪೌರಕಾರ್ಮಿಕರಿಗೂ ವಸತಿ ಗೃಹಗಳನ್ನು ನಿರ್ಮಿಸಿಕೊಳ್ಳುವಂತೆ ಭೂಮಿ ಹಾಗೂ ಹಣವನ್ನು ನೀಡಬೇಕು ಎಂದು ತಿಳಿಸಿದರು. ಅರಸೀಕೆರೆಯಲ್ಲಿನ ಪೌರಕಾರ್ಮಿಕರಿಗೆ ನೇರ ನೇಮಕಾತಿ ಮಾಡಿಕೊಳ್ಳಲು ಅವಕಾಶವಿದ್ದರೆ ಹೊರಗುತ್ತಿಗೆ ನೌಕರರನ್ನು ನೇರ ನೇಮಕಾತಿ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.ಯಾವುದೇ ಪೌರಕಾರ್ಮಿಕರು ತಮ್ಮ ಕುಂದು ಕೊರತೆಯನ್ನು ಹೇಳುಕೊಳ್ಳುವುದಕ್ಕೆ ಯಾವುದೇ ಅಡೆತಡೆಗಳು ಇರುವುದಿಲ್ಲ ಕಾರ್ಮಿಕರ ಕ?ವನ್ನು ತಿಳಿದು ಪರಿಹಾರ ನೀಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದ್ದು ಖಾಯಂ ಪೌರಕಾರ್ಮಿಕರಿಗೆ ಉತ್ತಮವಾದ ಗೃಹ ನಿರ್ಮಿಸಿಕೊಳ್ಳಲು ಹಣ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು. ಸಕಲೇಶಪುರ ಪೌರ ಕಾರ್ಮಿಕರಿಗೆ ತಮ್ಮ ಸಮುದಾಯಕ್ಕೆ ರುದ್ರ ಭೂಮಿಯನ್ನು ಕಲ್ಪಸುವುದಾಗಿ ಆಶ್ವಾಸನೆ ನೀಡಿದರು ಹಾಗೂ ಉತ್ತಮವಾದ ವಿಶ್ರಾಂತಿ ಕೊಠಡಿಗಳನ್ನು ನಿರ್ಮಾಣ ಮಾಡಿಕೊಳ್ಳುವಂತೆ ತಿಳಿಸಿದರು. ಪ್ರತಿಯೊಬ್ಬ ಪೌರ ಕಾರ್ಮಿಕ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಸ್ಕಾಲರ್ಶಿಪ್ ನೀಡುವ ಬಗ್ಗೆ ಪೋ?ಕರಿಗೆ ಅಧಿಕಾರಿಗಳು ಮಾಹಿತಿ ನೀಡಬೇಕು, ನೇರ ಪಾವತಿಯಲ್ಲಿ ಇದ್ದು ಮರಣ ಹೊಂದಿದ ಪೌರಕಾರ್ಮಿಕರಿಗೆ ಆ ಕುಟುಂಬದ ಇತರೆ ಅರ್ಹ ವ್ಯಕ್ತಿಗಳಿಗೆ ಉದ್ಯೋಗ ಅವಕಾಶ ನೀಡಬೇಕು ಎಂದು ತಿಳಿಸಿದರು. ಸಫಾಯಿ ಕರ್ಮಚಾರಿ ಆಯೋಗದ ಕಾರ್ಯದರ್ಶಿ ಸುನಾಯ , ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರಮುನಿ, ಅಪ್ತ ಕಾರ್ಯದರ್ಶಿ ರಘು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ದೂದ್‌ಪೀರ್‌ ಹಾಗೂ ತಹಸೀಲ್ದಾರ್‌ ಗೀತಾ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೌರಕಾರ್ಮಿಕರ ಸಮಸ್ಯೆ ಪರಿಹರಿಸಲು ಮುತುವರ್ಜಿ ವಹಿಸಿ
ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಚ್ಚರ ವಹಿಸಿ