ಕನ್ನಡಪ್ರಭ ವಾರ್ತೆ ಕೋಲಾರಮಹಿಳಾ ಸ್ವಸಹಾಯ ಸಂಘದ ಸದಸ್ಯರ ಠೇವಣಿ ಹಣ ಕೂಡಲೇ ವಾಪಸು ನೀಡುವಂತೆ ಮಹಿಳಾ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ಹುತ್ತೂರು ಹೋಬಳಿ ವ್ಯಾಪ್ತಿಯ ಮಹಿಳಾ ಸಂಘಗಳು ನಗರದ ಡಿಸಿಸಿ ಬ್ಯಾಂಕ್ ಮುಂದೆ ಧರಣಿ ನಡೆಸಿದರು.ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಶಶಿಕಲಾ ಮಾತನಾಡಿ, ಜಿಲ್ಲೆಯ ಹುತ್ತೂರು ಹೋಬಳಿ ವ್ಯಾಪ್ತಿಯ ಮಹಿಳಾ ಸಂಘಗಳಿಗೆ ಸಾಲು ನೀಡುವುದಾಗಿ ನಂಬಿಸಿ ಸುಮಾರು ೭೦ ರಿಂದ ೮೦ ಸಾವಿರದವರಗೆ ೩೦೦ ಸಂಘಗಳಿಂದ ಠೇವಣಿ ಹಣವನ್ನು ಸಂಗ್ರಹಿಸಿ ಸುಮಾರು ಎರಡು ವರ್ಷ ಕಳೆದರು ಇದುವರೆಗೂ ಯಾವುದೇ ಸಾಲವನ್ನು ನೀಡಿಲ್ಲ ಎಂದು ಆರೋಪಿಸಿದರು.
ಮನವಿ ಮಾಡದರೂ ಹಣ ನೀಡಿಲ್ಲಸಾಲ ಕಟ್ಟಿಲ್ಲವೆಂದರೆ ಮನೆ ತನಕ ಬರುವ ಅಧಿಕಾರಿಗಳು ನಮ್ಮ ಠೇವಣಿ ಹಣವನ್ನು ಇಷ್ಟು ದಿನಗಳವರೆಗೆ ಹಾಗೆಯೇ ಇಟ್ಟುಕೊಂಡಿದ್ದಾರೆ. ಇದಕ್ಕೆ ಹೊಣೆ ಯಾರು, ಕೂಡಲೇ ನಮ್ಮ ಠೇವಣಿ ಹಣವನ್ನು ವಾಪಸ್ ನೀಡಲಿ. ಈಗಾಗಲೇ ಹುತ್ತೂರು ಸೊಸೈಟಿಯ ವಡಗೂರು ಶಾಖೆಯಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಆಡಳಿತ ಮಂಡಳಿಗೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ ಜೊತೆಗೆ ಕಳೆದ ಸರ್ವ ಸದಸ್ಯರ ಸಭೆಯಲ್ಲಿ ಸಹ ಈ ವಿಷಯದ ಕುರಿತಾಗಿ ಪ್ರಸ್ತಾವನೆ ಮಾಡಲಾಗಿದೆ ಎಂದರು.
ಹಣ ಕೊಟ್ಟಿದ್ದರಿಂದ ತಮ್ಮ ಮನೆಗಳಲ್ಲಿ ನಿರಂತರವಾಗಿ ಗಲಾಟೆಗಳು ನಡೆಯುತ್ತಿದ್ದು ಹೆಣ್ಣು ಮಕ್ಕಳು ಮನೆ ಬಿಡುವ ಸನ್ನಿವೇಶ ಬಂದಿದೆ. ಕೂಡಲೇ ಹಣ ವಾಪಸ್ ಮಾಡಬೇಕು ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟಕ್ಕೆ ಹೋಬಳಿ ವ್ಯಾಪ್ತಿಯ ಮಹಿಳಾ ಸಂಘಗಳು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಠೇವಣಿ ಹಣ ದುರುಪಯೋಗ
ಹುತ್ತೂರು ಸೊಸೈಟಿ ಅಧ್ಯಕ್ಷ ಕೋಟೆ ಸಿ.ಎಂ.ನಾರಾಯಣಸ್ವಾಮಿ ಮಾತನಾಡಿ, ಸೊಸೈಟಿಯಲ್ಲಿನ ಹಿಂದಿನ ಸಿಇಒ ವಿಜಯಕುಮಾರ್ ಅವರು ಸುಮಾರು ೧೧೬ ಮಹಿಳಾ ಸಂಘಗಳಿಂದ ೧.೩೫ ಕೋಟಿ ಹಣವನ್ನು ಸಂಗ್ರಹಿಸಿ ಬ್ಯಾಂಕ್ ಗೆ ಕಟ್ಟದೇ ಸ್ವಂತಕ್ಕೆ ದುರುಪಯೋಗ ಮಾಡಿಕೊಂಡಿದ್ದಾನೆ ಅತನ ವಿರುದ್ದ ಈಗಾಗಲೇ ದೂರು ದಾಖಲಾಗಿದೆ ಅತನ ಬೇಜಾವ್ದಾರಿಯಿಂದ ಇಂತಹ ಪರಿಸ್ಥಿತಿ ಬಂದಿದೆ ಕೋರ್ಟ್ ಮೂಲಕ ವಸೂಲಿ ಮಾಡಲಾಗುತ್ತದೆ ಎಂದು ಸಮಜಾಯಿಷಿ ನೀಡಿದರು.ಮಹಿಳಾ ಸಂಘಗಳ ಪ್ರತಿನಿಧಿಗಳಾದ ಜ್ಯೋತಿ, ಮಂಜುಳಾ, ಅಮರಾವತಿ, ಕಾಂತಮ್ಮ, ಲೀಲಾವತಿ, ಭಾವನಾ, ವಿಜಯಮ್ಮ, ನೇತ್ರಾವತಿ, ಕಮಲಮ್ಮ, ಶ್ವೇತಾ, ಪದ್ಮಾವತಿ ಇದ್ದರು.