ಕನ್ನಡಪ್ರಭ ವಾರ್ತೆ ಬೇತಮಂಗಲಬಂಗಾರ ತಿರುಪತಿ ಸನ್ನಿಧಿಗೆ ಬರುವಂತಹ ವೃದ್ಧರು ಹಾಗೂ ಅಂಗವಿಕಲ ಭಕ್ತರು ಸ್ವಾಮಿ ದರ್ಶನ ಪಡೆದುಕೊಳ್ಳಲು ಸುಲಭವಾಗಬೇಕೆಂಬ ದೃಷ್ಟಿಯಿಂದ ಸ್ವಾಮಿಯ ಬೆಟ್ಟಕ್ಕೆ ಎರಡು ಕೋಟಿ ವೆಚ್ಚದಲ್ಲಿ ರಸ್ತೆ ಮಾಡಿಸುವುದಾಗಿ ಶಾಸಕಿ ಎಂ.ರೂಪಕಲಾ ಶಶಿಧರ್ ಭರವಸೆ ನೀಡಿದರು.ಸಮೀಪದ ಗುಟ್ಟಹಳ್ಳಿ ಬಂಗಾರು ತಿರುಪತಿಯ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಯಾತ್ರಿ ನಿವಾಸ ಕಟ್ಟಡ ಲೋಕಾರ್ಪಣೆ ಮಾಡಿ ಮಾತನಾಡಿದರು. ಭಕ್ತರ ಅನುಕೂಲಕ್ಕಾಗಿ ನಿರ್ಮಾಣ
ಬಂಗಾರ ತಿರುಪತಿ ದೇಗುಲಕ್ಕೆ ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ಭಕ್ತಾದಿಗಳು ಬರುವ ದೃಷ್ಟಿಯಿಂದ ಭಕ್ತರು ವಿಶ್ರಾಂತಿ ಪಡೆಯಲು ಪ್ರವಾಸೋಧ್ಯಮ ಇಲಾಖೆಯ ಅನುದಾನ ಬಳಸಿಕೊಂಡು ೮ ಕೊಠಡಿಗಳ ಕಟ್ಟಡ ೭೦ ಲಕ್ಷದಲ್ಲಿ ನಿರ್ಮಿಸಿ ಲೋಕಾರ್ಪಣೆ ಮಾಡಿದೆ, ಮುಂದಿನ ದಿನಗಳಲ್ಲಿ ಇನ್ನು ೧೦ ರಿಂದ ೧೫ ಕೊಠಡಿಗಳ ಕಟ್ಟಡವನ್ನು ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಬಂಗಾರ ತಿರುಪತಿಗೆ ಭೇಟಿ ನೀಡುವ ಭಕ್ತರಿಗೆ ಸಕಲ ಸೌಲಭ್ಯಗಳನ್ನು ಕಲ್ಪಿಸುವ ದೃಷ್ಟಿಯಿಂದ ಈ ಯಾತ್ರ ನಿವಾಸ ನಿರ್ಮಿಸಲಾಗಿದೆ, ದೇವಾಲಯದ ನಿರ್ವಹಣೆಯಲ್ಲಿ ಈ ಕಟ್ಟಡವು ಮುಂದುವರೆಯಲಿದ್ದು, ಭಕ್ತಾದಿಗಳು ಇದರನ್ನು ಸದ್ಬಳಕೆ ಮಾಡಿಕೊಂಡು ಸ್ವಚ್ಛತೆ ಕಾಪಾಡಬೇಕೆಂದು ತಿಳಿಸಿದರು.ಎರಡು ಬೆಟ್ಟಕ್ಕೆ ರಸ್ತೆ ನಿರ್ಮಾಣ ತಿರುಪತಿಗೆ ಹೋಗಲು ಸಾಧ್ಯವಾಗದ ಅನೇಕ ಭಕ್ತರು ಬಂಗಾರು ತಿರುಪತಿಗೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆಯುವುದನ್ನು ಕಾಣಬಹುದು, ಆದರೆ ಬೆಟ್ಟದ ಮೆಟ್ಟಲುಗಳನ್ನು ಹೇರಲು ಸಾಧ್ಯವಾಗದೆ ಕೆಳಗಡೆಯೇ ಸುಮಾರು ಭಕ್ತರು ನಿರಾಸೆಯಿಂದ ವಾಪಸ್ ತೆರುಳುತ್ತಾರೆ, ಅಂತಹ ಭಕ್ತರು ಸಹ ಸ್ವಾಮಿಯ ದರ್ಶನ ಪಡೆಯಬೇಕೆಂಬ ದೃಷ್ಟಿಯಿಂದ ೨ ಬೆಟ್ಟಕ್ಕೆ ಸುಮಾರು ೨ ಕೋಟಿ ಅನುದಾನದಲ್ಲಿ ರಸ್ತೆ ನಿರ್ಮಾಣ ಮಾಡಲು ಯೋಜನೆ ರೂಪಿಸಿದೆ ಎಂದು ತಿಳಿಸಿದರು.ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್ ರೆಡ್ಡಿ, ದೇಗುಲ ಸಮಿತಿ ಅಧ್ಯಕ್ಷ ಅಶೋಕ್ ಕೃಷ್ಣಪ್ಪ, ಜಿಪಂ ಮಾಜಿ ಸದಸ್ಯ ಅ.ಮು.ಲಕ್ಷ್ಮೀನಾರಾಯಣ್, ಗ್ರಾಪಂ ಅಧ್ಯಕ್ಷರಾದ ಹಂಗಳ ಸೊಣಮ್ಮ ರಮೇಶ್, ಬೇತಮಂಗಲ ವಿನೂ ಕಾರ್ತಿಕ್, ಮಾಜಿ ಅಧ್ಯಕ್ಷ ಕಾರಿ ಪ್ರಸನ್ನ, ತಾಪಂ ಮಾಜಿ ಅಧ್ಯಕ್ಷ ಶಂಕರಪ್ಪ, ಮುಖಂಡರಾದ ಪಾಪೇಗೌಡ, ಕೃಷ್ಣೇಗೌಡ ಮತ್ತಿತರರು ಇದ್ದರು.