ಕಾರ್ಯಕರ್ತರ ಪುನರ್‌ ಸಂಘಟನೆ ಅಗತ್ಯ

KannadaprabhaNewsNetwork | Published : Feb 6, 2025 12:17 AM

ಸಾರಾಂಶ

ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ಇರಬೇಕು. ಆದರೆ ನಮ್ಮ ಪಕ್ಷದಲ್ಲಿ ಶಾಸಕ ಸ್ಥಾನದ ಜೊತೆಗೆ ಜಿಲ್ಲಾಧ್ಯಕ್ಷ ಸ್ಥಾನವಹಿಸಿಕೊಂಡಿರುವ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆಗೆ ಹಿನ್ನಡೆಯಾಗಿದೆ. ಹಾಗಾಗಿ ಜಿಲ್ಲಾ ಅಧ್ಯಕ್ಷ ಸ್ಥಾನ ಕ್ರಿಯಾಶೀಲ ಯುವಕರಿಗೆ ನೀಡಿದರೆ ಉತ್ತಮ. ಪಕ್ಷದ ಅಭಿವೃದ್ದಿಗೆ ಎಲ್ಲಾ ಭಿನ್ನಾಭಿಪ್ರಾಯ ಬದಿಗೆ ಸರಿಸಿ ಒಗ್ಗಟ್ಟಾಗಬೇಕು.

ಕನ್ನಡಪ್ರಭ ವಾರ್ತೆ ಕೋಲಾರವ್ಯಕ್ತಿಗಿಂತ ಪಕ್ಷ ಮುಖ್ಯವಾಗಿದೆ, ಮೇಲುಕೀಳು ಎಂಬುದಿಲ್ಲ. ಬೇರು ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರನ್ನು ಪುನರ್ ಸಂಘಟನೆ ಅವಶ್ಯಕವಾಗಿದೆ, ಪಕ್ಷ ಉಳಿದರೆ ಮಾತ್ರ ನಾವೆಲ್ಲಾ ಉಳಿಯಲು ಸಾಧ್ಯ, ತಾಲ್ಲೂಕು ಹೋಬಳಿ ಪಂಚಾಯಿತಿ ಬೂತ್ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ ಸಭೆಗಳನ್ನು ಆಯೋಜಿಸಬೇಕು ಪಕ್ಷದ ಅಭಿವೃದ್ದಿಗೆ ಎಲ್ಲಾ ಭಿನ್ನಾಭಿಪ್ರಾಯ ಬದಿಗೆ ಸರಿಸಿ ಒಗ್ಗಟ್ಟಾಗಬೇಕೆಂದು ಜೆ.ಡಿ.ಎಸ್ ಮುಖಂಡ ಸಿ.ಎಂ.ಆರ್. ಶ್ರೀನಾಥ್ ಕರೆ ನೀಡಿದರು. ತಾಲ್ಲೂಕಿನ ಕಾಮಧೇನಹಳ್ಳಿಯಲ್ಲಿ ಜೆ.ಡಿ.ಎಸ್. ತಾಲ್ಲೂಕು ಅಧ್ಯಕ್ಷ ಬಾಬು ಮೌನಿ ಅಧ್ಯಕ್ಷತೆಯಲ್ಲಿ ಸದಸ್ಯತ್ವ ನೊಂದಣಿ ಕಾರ್ಯಗಾರ, ಜಿಪಂ, ತಾಪಂ ಮತ್ತು ಎ.ಪಿ.ಎಂ.ಸಿ. ಮುಂಬರುವ ಚುನಾವಣೆಗಳಿಗೆ ಸಿದ್ದರಾಗಲು ಕಾರ್ಯಗಾರ, ತಾಲ್ಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಕಾರ್ಯಾಗಾರ, ಹೋಬಳಿವಾರು ಅಧ್ಯಕ್ಷರು, ನಗರ ಘಟಕ ಅಧ್ಯಕ್ಷರ ಆಯ್ಕೆ ಕಾರ್ಯಗಾರ ನಡೆಸಲು ತಾಲ್ಲೂಕಿನ ಮುಖಂಡರು ಮತ್ತು ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು. ಘಟಕಗಳ ಸಮಿತಿ ರಚನೆ

ಜೆ.ಡಿ.ಎಸ್ ತಾಲೂಕು ಅಧ್ಯಕ್ಷ ಬಾಬು ಮೌನಿ ಮಾತನಾಡಿ, ಪ್ರತಿ ಘಟಕದಲ್ಲಿ ಸಮಿತಿಯ ೧೫ ಮಂದಿ ಕ್ರಿಯಾಶೀಲ ಸದಸ್ಯರನ್ನು ಗುರುತಿಸಿ ತಲಾ ೧೦ ರೂ ನೀಡಿ ಸದಸ್ಯತ್ವ ಪಡೆಯಬೇಕು. ಎಸ್.ಸಿ.ಎಸ್.ಟಿ. ಓ.ಬಿ.ಸಿ. ಅಲ್ಪಸಂಖ್ಯಾತ, ಮಹಿಳಾ. ಯುವಕ, ರೈತರ ಘಟಕ ಸೇರಿದಂತೆ ೨೧ ಘಟಕಗಳ ಸಮಿತಿ ರಚಿಸಬೇಕಾಗಿದೆ ಎಂದರು.

ಒಬ್ಬರಿಗೆ ಒಂದೇ ಹುದ್ದೆ

ಜಿಪಂ ಮಾಜಿ ಸದಸ್ಯ ಬಾಲಾಜಿ ಚೆನ್ನಯ್ಯ ಮಾತನಾಡಿ, ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ಇರಬೇಕು. ಆದರೆ ನಮ್ಮ ಪಕ್ಷದಲ್ಲಿ ಶಾಸಕ ಸ್ಥಾನದ ಜೊತೆಗೆ ಜಿಲ್ಲಾಧ್ಯಕ್ಷ ಸ್ಥಾನವಹಿಸಿಕೊಂಡಿರುವ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆಗೆ ಹಿನ್ನಡೆಯಾಗಿದೆ. ಹಾಗಾಗಿ ಜಿಲ್ಲಾ ಅಧ್ಯಕ್ಷ ಸ್ಥಾನ ಕ್ರಿಯಾಶೀಲ ಯುವಕರಿಗೆ ನೀಡಿದರೆ ಉತ್ತಮ ಎಂದರು. ವಕೀಲೆ ರತ್ನಮ್ಮ, ಸೀತಿ ಎಸ್‌ಎಫ್‌ಸಿಎಸ್‌ ಉಪಾಧ್ಯಕ್ಷ ಅಶೋಕ್, ಜನಪನಹಳ್ಳಿ ಆನಂದ್, ಬೆಳಮಾರನಹಳ್ಳಿ ಚಂದ್ರಶೇಖರ್, ಮುಖಂಡರಾದ ವಿಜಯಕುಮಾರ್ ಗೌಡ, ಕುರುಬ ಸಂಘದ ನಿರ್ದೇಶಕ ಅಶೋಕ್, ಜೆ.ಡಿ.ಎಸ್. ಪ್ರಧಾನ ಕಾರ್ಯದರ್ಶಿ ವಕ್ಕೇಲೇರಿ ರಾಮು, ಮತ್ತಿತರರು ಇದ್ದರು.

Share this article