ಕೊಳ್ಳೇಗಾಲದಲ್ಲಿ ವಿಜೃಂಭಣೆಯ ಸಾಯಿ ಉತ್ಸವ

KannadaprabhaNewsNetwork |  
Published : Oct 18, 2024, 12:12 AM IST
ಕೊಳ್ಳೇಗಾಲದಲ್ಲಿ ವಿಜೖಂಭಣೆಯಿಂದ ಜರುಗಿದ ಸಾಯಿ ಉತ್ಸವ-  ಬ್ಲೂ ಬಾಕ್ಸ್‌  | Kannada Prabha

ಸಾರಾಂಶ

ಕೊಳ್ಳೇಗಾಲದಲ್ಲಿ ಸಾಯಿ ಉತ್ಸವದ ವೇಳೆ ಹಾಜರಿದ್ದ ಶಾಸಕ ಕೃಷ್ಣಮೂರ್ತಿ ಅವರು ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಸಮಾಜ ಸೇವಕ ಮಹಾನಂದ, ಎಚ್‌ಕೆ ಟ್ರಸ್ಟ್‌ನ ಪ್ರೇಮಲತಾ ಕೃಷ್ಣಸ್ವಾಮಿ, ನಗರಸಭೆ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷ ಶಂಕರ್ ಇನ್ನಿತರರಿದ್ದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಶ್ರೀ ಶಿರಡಿ ಸತ್ಯ ಸಾಯಿ ಟ್ರಸ್ಟ್, ಎಚ್.ಕೆ ಮೆಮೋರಿಯಲ್ ಟ್ರಸ್ಟ್, ರೋಟರಿ ಮಿಡ್ ಟೌನ್ ಸಂಸ್ಥೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕೊಳ್ಳೇಗಾಲದಲ್ಲಿ ಶ್ರೀ ಸಾಯಿ ಉತ್ಸವ ಕಾರ್ಯಕ್ರಮವು ಗುರುವಾರ ಸಂಜೆ ವಿಜೃಂಭಣೆಯಿಂದ ನಡೆಯಿತು. ಪಟ್ಟಣದ ಸಾಯಿಬಾಬಾ ದೇವಸ್ಥಾನದ ಮುಂಭಾಗದಲ್ಲಿ ಸಿದ್ಧತೆಗೊಂಡಿದ್ದ ರಥದ ಮೇಲೆ ಸಾಯಿಬಾಬಾ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ಬಳಿಕ ಶಾಸಕ ಎ‌‌.ಆರ್‌.ಕೃಷ್ಣಮೂರ್ತಿ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು. ಉತ್ಸವದಲ್ಲಿ ಡೊಳ್ಳು ಕುಣಿತ, ಹುಲಿ ವೇಷಧಾರಿ ಕುಣಿತ, ತಮಟೆ, ಗೊರವನ ಕುಣಿತ, ಮಂಗಳವಾದ್ಯ, ವೀರಗಾಸೆ ಕುಣಿತ ಸಮೇತ ವಿವಿಧ ಕಲಾ ತಂಡದೊಂದಿಗೆ ಪ್ರಮುಖ ರಸ್ತೆಗಳಲ್ಲಿ ನಡೆಸಿದರು.

ಈ ಉತ್ಸವದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚಂದ್ರು, ನಗರಸಭೆ ಅಧ್ಯಕ್ಷರು ರೇಖಾ, ಉಪಾಧ್ಯಕ್ಷರು ಎ.ಪಿ‌.ಶಂಕರ್, ಡಿವೈಎಸ್ಪಿ ಹಾಗೂ ಸಮಾಜ ಸೇವಕ ಮಹಾನಂದ, ಚಾಮುಲ್ ನಿರ್ದೇಶಕ ಕಮರವಾಡಿ ರೇವಣ್ಣ, ಉಪ್ಪಾರ ನಿಗಮದ ಮಾಜಿ ರಾಜ್ಯಾಧ್ಯಕ್ಷ ಮಧುವನಹಳ್ಳಿ ಶಿವಕುಮಾರ್, ಕಂದಹಳ್ಳಿ ನಂಜುಂಡಸ್ವಾಮಿ, ರೋಟರಿ ಮಿಡ್ ಟೌನ್ ಅಧ್ಯಕ್ಷ ಲೋಕೇಶ್, ಪ್ರವೀಣ್, ಎ.ಡಿ.ಶಿವಪ್ರಕಾಶ್, ಎಚ್.ಕೆ.ಮೆಮೋರಿಯಲ್ ಟ್ರಸ್ಟ್‌ ಪ್ರೇಮಲತಾ ಕೃಷ್ಣಸ್ವಾಮಿ, ನಗರಸಭೆ ಸದಸ್ಯೆ ಸುಮ, ಬಸ್ತಿಪುರ ರವಿ ಸೇರಿದಂತೆ ಹಲವು ಮುಖಂಡರು ಮೆರವಣಿಗೆ ವೇಳೆ ಸಾಥ್ ನೀಡಿದರು. ಮೆರವಣಿಗೆಯುದ್ದಕ್ಕೂ ನೆರೆದಿದ್ದ ಭಕ್ತ ಸಮೂಹ ಸಾಯಿ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಕೈಮುಗಿದು ಕಣ್ ತುಂಬಿಕೊಂಡರು. ಉತ್ಸವವು ಯಶಸ್ವಿಯಾಗಿ ನಡೆಯಿತು. ಇದಕ್ಕೆ ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವೆ ಎಂದು ಇದೆ ವೇಳೆ ಮಹಾನಂದ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ