ಕನ್ನಡಪ್ರಭ ವಾರ್ತೆ ಹಳೇಬೀಡು
ಹಳೆಬೀಡು ಹೋಬಳಿಯ ರಾಜನಸಿರಿಯೂರು ಗ್ರಾಮದ ಸಾಮಾನ್ಯ ಕೃಷಿ ಕುಟುಂಬದಲ್ಲಿ ಜನಿಸಿದ ಶಿಕ್ಷಕ ಮೋಹನ್ ರಾಜ್ ತಾಲೂಕಿನ ಎಲ್ಲಾ ಶಾಲೆಗಳಿಗೆ ಎರಡು ಗಿಡವನ್ನ ನೀಡಿ ಅದರ ಬೆಳವಣಿಗೆ ಮತ್ತು ಅದರ ಪಾಲನೆ ಬಗ್ಗೆ ಶಿಕ್ಷಕರಿಗೆ ತಿಳಿಸುವ ಕೆಲಸ ಅದರ ಜತೆಗೆ ಯಾವುದೇ ದಾಕ್ಷಿಣ್ಯ ನೋಡದೆ ಕೆಲಸ ಮಾಡಿಸುತ್ತಿದ್ದರು.
ಪ್ರತಿ ಮೂರು ತಿಂಗಳಿಗೆ ರಕ್ತದಾನ ಮಾಡುವ ಕಾರ್ಯ ಮಾಡಿ ಅನೇಕ ಜನರ ಪ್ರಾಣವನ್ನು ಉಳಿಸಿದ್ದಾರೆ. ಈಗಾಗಲೇ ಒಟ್ಟು ೩೫ ಬಾರಿ ರಕ್ತದಾನ ಮಾಡಿದ್ದಾರೆ. ಇವರಿಗೆ ಹಾಸನ ಜಿಲ್ಲಾ ಆಡಳಿತದಿಂದ ಪ್ರಶಸ್ತಿ ಸಹ ಲಭಿಸಿದೆ.ಪ್ರಧಾನ ಮಂತ್ರಿ ಪೋಷಣಶಕ್ತಿ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಹಳೆಬೀಡಿನ ಕರ್ನಾಟಕ ಪಬ್ಲಿಕ್ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಬೆಳಿಗ್ಗೆ ಪ್ರಾರ್ಥನೆ ನಂತರ ಅಕ್ಷರ ದಾಸೋಹದ ಮಂತ್ರವನ್ನು ಮಕ್ಕಳಿಂದ ಹೇಳಿಸಿದ್ದರು. ಮಕ್ಕಳು ಅನ್ನವನ್ನು ದಂಡ ಮಾಡದೆ ಊಟ ಮಾಡಬೇಕು ಎಂದು ಊಟದ ಶಿಸ್ತು ಬೆಳೆಸಿದಂತಹ ಶಿಕ್ಷಕ ಎಂದು ಸಹಾಯಕ ನಿರ್ದೇಶಕ ಡಾ. ಜಗದೀಶ್ ನಾಯ್ಕ್ ಹೇಳುತ್ತಾರೆ.
ಶಿಕ್ಷಕ ಮೋಹನ್ ರಾಜ್ ತಮ್ಮ ಮರಣ ನಂತರ ದೇಹವನ್ನು ದಾನ ಮಾಡಿದ್ದಾರೆ. ಅವರ ಕಾರ್ಯಕ್ಕೆ ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದಾರೆ.