ಕಾಡುಗೊಲ್ಲರ ಸಮುದಾಯ ಸಂಘಟಿತವಾಗಿ ಮುಂಚೂಣಿಗೆ ಬರಬೇಕು

KannadaprabhaNewsNetwork |  
Published : Jul 30, 2025, 12:45 AM IST
ನಗರದ ಶ್ರೀ ಸೀತಾರಾಮ ಮಂದಿರದಲ್ಲಿ ಆಯೋಜಿಸಲಾಗಿದ್ದ ನೂತನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಉದ್ಘಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಜೆಡಿಎಸ್ ಮುಖಂಡ ಎನ್.ಆರ್ ಸಂತೋಷ ಮಾತನಾಡಿದರು | Kannada Prabha

ಸಾರಾಂಶ

ಪ್ರತಿ ಸಮುದಾಯಗಳು ಕೇವಲ ಅಧಿಕಾರಕ್ಕಾಗಿ ಸ್ಥಾನಗಳನ್ನು ಅಲಂಕರಿಸದೇ ಸಂಘಟನೆಗೆ ಹೆಚ್ಚು ಆಸಕ್ತರಾಗಬೇಕಿದೆ. ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಸೇರಿದಂತೆ ಇನ್ನಿತರೆ ಕ್ಷೇತ್ರದಲ್ಲಿ ಮುಖ್ಯವಾಹಿನಿಗೆ ಬರಬೇಕಾದರೆ ಸಂಘಟನೆ ಮುಖ್ಯವಾಗಿದೆ. ನೂತನ ಪದಾಧಿಕಾರಿಗಳು ಅರಸೀಕೆರೆ ತಾಲೂಕಿನಲ್ಲಿ ಸಂಘಟನೆಗೆ ಹೆಚ್ಚು ಒತ್ತನ್ನು ನೀಡುವುದರ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಲು ಪ್ರಯತ್ನಿಸಬೇಕು. ಸಮುದಾಯದ ಸಂಘಟನೆ ಬಲಿಷ್ಠಗೊಳಿಸುವ ಜೊತೆಯಲ್ಲಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಗಮನ ಹರಿಸಲು ಮುಂದಾಗಬೇಕು. ನಿಮ್ಮೆಲ್ಲರ ಶಕ್ತಿಯನ್ನು ಕಾಡುಗೊಲ್ಲರ ಸಮುದಾಯ ಅಭಿವೃದ್ಧಿಗೆ ಧಾರೆ ಎರೆದಾಗ ಮಾತ್ರ ಎಲ್ಲ ಕ್ಷೇತ್ರಗಳಲ್ಲೂ ಪ್ರಮುಖ ಪಾತ್ರ ವಹಿಸಲು ಸಾದ್ಯವಾಗುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಕಾಡುಗೊಲ್ಲರ ಸಮುದಾಯವು ಸನಾತನ ಸಂಸ್ಕೃತಿ ಮತ್ತು ಸಂಸ್ಕಾರಗಳಲ್ಲಿ ತಮ್ಮದೇ ಪಾತ್ರಗಳನ್ನು ವಹಿಸುತ್ತಿದೆ. ಈ ಸಮುದಾಯದವರು ಸಂಘಟಿತರಾಗಿ ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಗೆ ಬರಬೇಕು ಎಂದು ಜೆಡಿಎಸ್ ಮುಖಂಡ ಎನ್.ಆರ್ ಸಂತೋಷ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಶ್ರೀ ಸೀತಾರಾಮ ಮಂದಿರದಲ್ಲಿ ಆಯೋಜಿಸಲಾಗಿದ್ದ ನೂತನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಉದ್ಘಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರತಿ ಸಮುದಾಯಗಳು ಕೇವಲ ಅಧಿಕಾರಕ್ಕಾಗಿ ಸ್ಥಾನಗಳನ್ನು ಅಲಂಕರಿಸದೇ ಸಂಘಟನೆಗೆ ಹೆಚ್ಚು ಆಸಕ್ತರಾಗಬೇಕಿದೆ. ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಸೇರಿದಂತೆ ಇನ್ನಿತರೆ ಕ್ಷೇತ್ರದಲ್ಲಿ ಮುಖ್ಯವಾಹಿನಿಗೆ ಬರಬೇಕಾದರೆ ಸಂಘಟನೆ ಮುಖ್ಯವಾಗಿದೆ. ನೂತನ ಪದಾಧಿಕಾರಿಗಳು ಅರಸೀಕೆರೆ ತಾಲೂಕಿನಲ್ಲಿ ಸಂಘಟನೆಗೆ ಹೆಚ್ಚು ಒತ್ತನ್ನು ನೀಡುವುದರ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಲು ಪ್ರಯತ್ನಿಸಬೇಕು. ಸಮುದಾಯದ ಸಂಘಟನೆ ಬಲಿಷ್ಠಗೊಳಿಸುವ ಜೊತೆಯಲ್ಲಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಗಮನ ಹರಿಸಲು ಮುಂದಾಗಬೇಕು. ನಿಮ್ಮೆಲ್ಲರ ಶಕ್ತಿಯನ್ನು ಕಾಡುಗೊಲ್ಲರ ಸಮುದಾಯ ಅಭಿವೃದ್ಧಿಗೆ ಧಾರೆ ಎರೆದಾಗ ಮಾತ್ರ ಎಲ್ಲ ಕ್ಷೇತ್ರಗಳಲ್ಲೂ ಪ್ರಮುಖ ಪಾತ್ರ ವಹಿಸಲು ಸಾದ್ಯವಾಗುತ್ತದೆ ಎಂದರು.

ಕಾರ್ಯಕ್ರಮವನ್ನ ಉದ್ಘಾಟಿಸಿದ ಕರ್ನಾಟಕ ಕಾಡುಗೊಲ್ಲರ ಪರಿಷತ್ ರಾಜ್ಯಾಧ್ಯಕ್ಷ ಅರುಣ್ ಕೃಷ್ಣಯ್ಯ ಮಾತನಾಡಿ, ಸಮುದಾಯದ ಹೋರಾಟ ಮತ್ತು ಏಳಿಗೆ ಒಬ್ಬರಿಂದ ಸಾಧ್ಯವಿಲ್ಲ, ಸಾವಿರಾರು ಸಂಘಟಕರಿಂದ ಮಾತ್ರ ಸಾಧ್ಯವಾಗುತ್ತದೆ. ಸಂಘಟನೆಗೆ ಶಕ್ತಿಯಿದ್ದು ಒಗ್ಗಟ್ಟಿನ ಮೂಲಕ ನಮ್ಮ ಸಮಾಜಕ್ಕೆ ನ್ಯಾಯ ಒದಗಿಸಿಕೊಳ್ಳಲು ಮುಂದಾಗಬೇಕಿದೆ. ಗ್ರಾಮ ಗ್ರಾಮದಲ್ಲಿ ಸೈನಿಕರ ರೀತಿ ಕೆಲಸ ಮಾಡಬೇಕಿದ್ದು, ಇದುವರೆಗೂ ಬಂದಂತಹ ಪಕ್ಷಗಳು, ಸರ್ಕಾರಗಳು ನಮ್ಮನ್ನು ಬಳಸಿಕೊಂಡಿವೆ, ನಮ್ಮ ಸಮಾಜಕ್ಕೆ ನ್ಯಾಯ ಒದಗಿಸಿಕೊಡುವಲ್ಲಿ ಸಂಪೂರ್ಣ ವಿಫಲವಾಗಿವೆ. ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆ ಹಳ್ಳಿ ಹಳ್ಳಿಗಳಲ್ಲಿ ಸಂಘಟಿತಾರಾಗಿ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಸೌಲಭ್ಯಗಳನ್ನು ಪಡೆಯಲು ಹೋರಾಟಗಳನ್ನು ನಡೆಸಬೇಕಿದೆ ಎಂದು ಕರೆ ನೀಡಿದರು.

ತಾ. ಕಾಡುಗೊಲ್ಲರ ಪರಿಷತ್ ಸಂಘಟನೆಯ ಗ್ರಾಮ ಘಟಕಗಳ ಅಧ್ಯಕ್ಷರು, ಉಪಾಧ್ಯಕ್ಷರುಗಳಿಗೆ ಅಧಿಕಾರ ಹಸ್ತಾಂತರಿಸಿ ನೇಮಕ ಪತ್ರ ನೀಡುವುದರೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ದುಮ್ಮೆನಹಳ್ಳಿ ಗ್ರಾ.ಪಂ ಅಧ್ಯಕ್ಷ ಅಜ್ಜಪ್ಪ, ರಾಜ್ಯ ಘಟಕ ಉಪಾಧ್ಯಕ್ಷ ಉಮೇಶ್ ಈರಣ್ಣ, ತುಮಕೂರು ಜಿಲ್ಲಾ ಉಪಾಧ್ಯಕ್ಷ ಗುರುಶಾಂತ, ಪ್ರದಾನ ಕಾರ್ಯದರ್ಶಿ ಪವನ್ ಕುಮಾರ್. ಹಾಸನ ಜಿಲ್ಲಾಧ್ಯಕ್ಷ ಸೋಮಶೇಖರ್, ಜಿಲ್ಲಾ ಉಪಾಧ್ಯಕ್ಷ ತೊಂಟರಾಜ್, ಜಿಲ್ಲಾ ಸಂಘಟನೆ ಕಾರ್ಯದರ್ಶಿ ರಘು ಅರಸೀಕೆರೆ ತಾಲ್ಲೂಕು ಅಧ್ಯಕ್ಷ ಅಶೋಕ, ಉಪಾಧ್ಯಕ್ಷ, ಸುಂದರೇಶ್. ಪದಾಧಿಕಾರಿಗಳಾದ ದಯಾನಂದ್. ಪ್ರಸನ್ನ. ದೇವರಾಜ್ , ಸಂದೀಪ್ , ಸಂಜು ಸೇರಿದಂತೆ ನೂರಾರು ಜನತೆ ಉಪಸ್ಥಿತರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ