ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಸಮೀಪದ ಮುತವಾಡ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಮಹರ್ಷಿ ವಾಲ್ಮೀಕಿ ದೇವಸ್ಥಾನದ ಉದ್ಘಾಟನೆ, ಕಳಸಾರೋಣ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಮಹಾನ ಪುರುಷ ವಾಲ್ಮೀಕಿ ಅವರ ಮೂರ್ತಿ ಸ್ಥಾಪಿಸಲಾಗಿದ್ದು, ಭಕ್ತಿ, ಭಾವದಿಂದ ಅವರ ಆಶೀರ್ವಾದಕ್ಕೆ ಪಾತ್ರರಾಗಿ ಪುನೀತರಾಗಬೇಕು ಎಂದರು.ಇಂಚಲ ಶ್ರೀ ಶಿವಯೋಗಿಶ್ವರ ಸಾಧು ಸಂಸ್ಥಾನ ಮಠದಿಂದ ಸುಮಂಗಲೆಯರು ಕುಂಭ ಮೆರವಣೆಗೆ, ಆರತಿ, ಭಜನೆ, ಡೊಳ್ಳು ಇನ್ನಿತರ ವಾದ್ಯ ಮೇಳದೊಂದಿಗೆ ಸಾರೋಟಿನಲ್ಲಿ ವಾಲ್ಮೀಕಿ ಮೂರ್ತಿ ಮೆರವಣಿಗೆ ಮುತವಾಡ ಗ್ರಾಮಕ್ಕೆ ಸಾಗಿತು. ಇಂಚಲ ಗ್ರಾಮದ ಮೇಟಿ ಹಾಗೂ ವಾರಿ ಕುಟುಂಬಸ್ಥರಿಂದ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಮದನಭಾವಿ ಮಾತೋಶ್ರೀ ಶ್ರೀದೇವಿತಾಯಿ, ಸಮಾಜ ಸೇವಕ ನಾಗಪ್ಪ ಮೇಟಿ, ಗ್ರಾ.ಪಂ ಅಧ್ಯಕ್ಷ ಶಂಕರ ಬಾಗೇವಾಡಿ, ಮಾಜಿ ಜಿ.ಪಂ ಸದಸ್ಯ ನಿಂಗಪ್ಪ ಅರಿಕೇರಿ, ನಿವೃತ್ತ ಕೃಷಿ ಅಧಿಕಾರಿ ಎಸ್.ಎಚ್. ನಾಯ್ಕರ, ಸಬ್ ರಿಜಿಸ್ಟರ್, ಸಿದ್ದರಾಯ ಸಿದ್ದನಗೌಡ್ರ, ಎಪಿಎಂಸಿ ಮಾಜಿ ಅಧ್ಯಕ್ಷ ಭರಮಣ್ಣ ಸತ್ಯನವರ, ನಿಂಗಪ್ಪ ಮೂಡಲಗಿ, ಪಕೀ ರಪ್ಪ ಗುಟಗುದ್ದಿ, ಈರಣ್ಣ ಕಾಜಗಾರ, ಮಾಂತೇಶ ಬಾಜಿ, ಈರಣ್ಣ ಸವಳಗಿ, ಮುನೀರ ಮಿರ್ಜನ್ನವರ, ಗ್ರಾ.ಪಂ ಸದಸ್ಯರು, ಗ್ರಾಮಸ್ಥರು ಇದ್ದರು.