ಚನ್ನಕೇಶವನ ದರ್ಶನ ಪಡೆದ ಉಪಸಭಾಪತಿ ರುದ್ರಪ್ಪ ಲಮಾಣಿ

KannadaprabhaNewsNetwork |  
Published : Nov 23, 2025, 01:45 AM IST
22ಎಚ್ಎಸ್ಎನ್6 : ವಿಧಾನಸಭಾ ಉಪಸಭಾಪತಿ ರುದ್ರಪ್ಪ ಲಮಾಣಿ ಅವರು  ಬೇಲೂರು  ಶ್ರೀ ಚನ್ನಕೇಶವ ದೇಗುಲದಲ್ಲಿ  ದರ್ಶನ ಪಡೆದರು. | Kannada Prabha

ಸಾರಾಂಶ

ಉಪಸಭಾಪತಿ ರುದ್ರಪ್ಪ ಲಮಾಣಿ, ಚನ್ನಕೇಶವ ದೇವಾಲಯ ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಹೊಯ್ಸಳರ ಶಿಲ್ಪಕಲೆಯ ಜೀವಂತ ನಿದರ್ಶನ. ಇಂತಹ ಐತಿಹಾಸಿಕ ಸ್ಥಳಗಳನ್ನು ಮುಂದಿನ ಪೀಳಿಗೆಗೆ ಉಳಿಸಲು ಎಲ್ಲರಿಗೂ ಜವಾಬ್ದಾರಿ ಇದೆ. ಈ ಹಿಂದೆ ನಾನು ಮುಜರಾಯಿ ಸಚಿವನಾಗಿದ್ದಾಗ ಇದನ್ನು ವಿಶ್ವದರ್ಜೆಗೆ ಏರಿಸಲು ಹತ್ತು ಹಲವಾರು ಯೋಜನೆಗಳನ್ನು ರೂಪಿಸಿದ್ದೆ. ಇದರ ಜೊತೆಯಲ್ಲಿ ಉತ್ತಮ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಲಾಗಿತ್ತು. ಆದರೆ ಅದು ಇಲ್ಲಿವರೆಗೆ ಏನಾಗಿದೆ ಎಂದು ಮಾಹಿತಿ ಇಲ್ಲ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ರಾಜ್ಯದ ವಿಧಾನಸಭಾ ಉಪಸಭಾಪತಿ ರುದ್ರಪ್ಪ ಲಮಾಣಿ ಅವರು ವಿಶ್ವವಿಖ್ಯಾತ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯಕ್ಕೆ ಕುಟುಂಬಸ್ಥರೊಂದಿಗೆ ಭೇಟಿ ನೀಡಿ ದರ್ಶನ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ಉಪಸಭಾಪತಿ ರುದ್ರಪ್ಪ ಲಮಾಣಿ, ಚನ್ನಕೇಶವ ದೇವಾಲಯ ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಹೊಯ್ಸಳರ ಶಿಲ್ಪಕಲೆಯ ಜೀವಂತ ನಿದರ್ಶನ. ಇಂತಹ ಐತಿಹಾಸಿಕ ಸ್ಥಳಗಳನ್ನು ಮುಂದಿನ ಪೀಳಿಗೆಗೆ ಉಳಿಸಲು ಎಲ್ಲರಿಗೂ ಜವಾಬ್ದಾರಿ ಇದೆ. ಈ ಹಿಂದೆ ನಾನು ಮುಜರಾಯಿ ಸಚಿವನಾಗಿದ್ದಾಗ ಇದನ್ನು ವಿಶ್ವದರ್ಜೆಗೆ ಏರಿಸಲು ಹತ್ತು ಹಲವಾರು ಯೋಜನೆಗಳನ್ನು ರೂಪಿಸಿದ್ದೆ. ಇದರ ಜೊತೆಯಲ್ಲಿ ಉತ್ತಮ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಲಾಗಿತ್ತು. ಆದರೆ ಅದು ಇಲ್ಲಿವರೆಗೆ ಏನಾಗಿದೆ ಎಂದು ಮಾಹಿತಿ ಇಲ್ಲ ಎಂದರು. ಇಂತಹ ಪ್ರವಾಸಿತಾಣಗಳು ವಿಶ್ವ ಮಾನ್ಯತೆ ಪಡೆದಿದ್ದು ಇವುಗಳಿಗೆ ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಗಳಾಗಬೇಕು. ಈಗಾಗಲೇ ಯುನೆಸ್ಕೋ ವಿಶ್ವ ಪಟ್ಟಿಗೆ ಸೇರಿರುವುದು ಶ್ಲಾಘನೀಯ. ಇದನ್ನು ಹೆಚ್ಚಿನ ರೀತಿಯಲ್ಲಿ ವಿಶ್ವ ದರ್ಜೆಯ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಲು ಸರ್ಕಾರಕ್ಕೆ ಮನವಿ ಮಾಡುತ್ತೇನೆ.ಇದು ನಮ್ಮ ಖಾಸಗಿ ಕಾರ್ಯಕ್ರಮ ವಾಗಿದ್ದು ಇಲ್ಲಿ ಯಾವುದೇ ರಾಜಕೀಯ ಬೇಡ ಎಂದರು. ಈ ಹಿಂದೆ ಇಲ್ಲಿ ಹೊಯ್ಸಳ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದ್ದು ಅದು ಈಗ ನಿಂತಿರುವ ಬಗ್ಗೆ ನಮ್ಮ ಕಾರ್ಯಕರ್ತರು ನನ್ನ ಗಮನಕ್ಕೆ ತಂದಿದ್ದು ಇಂತಹ ಪ್ರವಾಸಿ ತಾಣಗಳಲ್ಲಿ ಇಂತಹ ಉತ್ಸವ ನಡೆದಾಗ ಅದು ವಿಶ್ವ ಮಾನ್ಯತೆ ಪಡೆಯುತ್ತದೆ. ಅದಕ್ಕೆ ಸರ್ಕಾರ ಇಂತಹ ಉತ್ಸವಗಳನ್ನು ಮುಂದುವರಿಸಬೇಕು ಎಂದರು. ಉಪಸಭಾಪತಿಯವರು ದೇಗುಲಕ್ಕೆ ಬಂದ ಸಂದರ್ಭದಲ್ಲಿ ಪ್ರಧಾನ ಅರ್ಚಕರಾದ ಶ್ರೀನಿವಾಸ್ ಭಟ್, ನರಸಿಂಹಪ್ರಿಯ ಭಟ್ ಹಾಗೂ ತಹಸೀಲ್ದಾರ್‌ ಶ್ರೀಧರ್ ಕಂಕನವಾಡಿ ಹಾಗು ದೇಗುಲ ಇಒ ಯೋಗೇಶ್ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಜಿ ನಿಶಾಂತ್, ಪುರಸಭೆ ಅಧ್ಯಕ್ಷೆ ಉಷಾ ಸತೀಶ್, ತೀರ್ಥಕುಮಾರಿ ವೆಂಕಟೇಶ್, ಜಮಾಲ್, ಮೀನಾಕ್ಷಿ, ಮಾಜಿ ಸದಸ್ಯ ಜುಬೇರ್‌ ಅಹಮದ್ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿ ಎಷ್ಟು ಕೇಸ್‌ ಸಿಬಿಐಗೆ ನೀಡಿದೆ? : ಸಿಎಂ
ರಾಷ್ಟ್ರಧ್ವಜ ತಯಾರಿಸ್ತಿ ದ್ದ ಕೈಗಳಲ್ಲೀಗ ಕೆಲಸವಿಲ್ಲ!