ಎಸ್‌ಐಆರ್‌ಸಿಯಿಂದ ಹೊಸ ಐಟಿ ಕಾಯ್ದೆ ಬಗ್ಗೆ ಕಾರ್ಯಾಗಾರ ಸಂಪನ್ನ

KannadaprabhaNewsNetwork |  
Published : Jun 03, 2026, 02:45 AM IST
01ಎಸ್‌ಐಆರ್‌ಸಿ | Kannada Prabha

ಸಾರಾಂಶ

sirc

ಉಡುಪಿ: ಐಸಿಎಐ ಉಡುಪಿ ಶಾಖೆ (ಎಸ್‌ಐಆರ್‌ಸಿ)ಯು 2025ರ ಹೊಸ ಆದಾಯ ತೆರಿಗೆ ಕಾಯ್ದೆ ಕುರಿತ ಎರಡು ದಿನಗಳ ಕಾರ್ಯಾಗಾರವನ್ನು ಮೇ 29 ಮತ್ತು 30ರಂದು ಉಡುಪಿಯಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಮಂಗಳೂರು ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಸಿ.ಬಿ. ಸುರೇಶ್ ಕುಮಾರ್ ಉದ್ಘಾಟಿಸಿ, ಹೊಸ ಆದಾಯ ತೆರಿಗೆ ಕಾಯ್ದೆಯನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳುವ ಅಗತ್ಯತೆ ಒತ್ತಿ ಹೇಳಿದರು. ಕಾರ್ಯಾಗಾರದಲ್ಲಿ 100ಕ್ಕೂ ಹೆಚ್ಚು ಲೆಕ್ಕಪರಿಶೋಧಕರು ಹಾಗೂ ತೆರಿಗೆ ವೃತ್ತಿಪರರು ಭಾಗವಹಿಸಿದ್ದರು.

ಹೊಸ ಕಾಯ್ದೆಯ ಪ್ರಮುಖ ಅಂಶಗಳ ಕುರಿತು ತಜ್ಞರು ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ಶಾಖೆಯ ಅಧ್ಯಕ್ಷ ಸಿಎ ಎಂ. ರಾಘವೇಂದ್ರ ಮೊಗೆರಾಯ ಅವರು ಸ್ವಾಗತಿಸಿದರು. ಕಾರ್ಯದರ್ಶಿ ಸಿಎ ಕೆ. ಲಕ್ಷ್ಮೀಶ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ಸಿಎ ಅಶ್ವತ್ ಜೆ. ಶೆಟ್ಟಿ, ಖಜಾಂಚಿ ಸಿಎ ಅರ್ಚನಾ ಆರ್. ಮಯ್ಯ ಮತ್ತು ಸದಸ್ಯ ಸಿಎ ಸೋನಿತ್ ಎಸ್. ಶೆಟ್ಟಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರಿಗೆ ಆನ್‌ಲೈನ್‌ ಹಾಜರಾತಿ ಧರ್ಮಸಂಕಟ !
ಕ್ರೆಡಿಟ್‌ಗಾಗಿ ಕಾಂಗ್ರೆಸ್-ಬಿಜೆಪಿ ಮಧ್ಯೆ ಪ್ರಚಾರ ಜೋರು!