ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪಟ್ಟಣದ ಬಸವೇಶ್ವರ ದೇವಸ್ಥಾನದ ಉದ್ಯಾನವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವ ತತ್ವದ ಮೂಲ ಬೇರುಗಳಾದ ಜೋಡೆತ್ತಿನ ಕೃಷಿಕರು ಉಳಿದರೆ ಮಾತ್ರ ವಿಷ ಮುಕ್ತ ಆಹಾರ ಉತ್ಪಾದನೆಯಾಗಿ ಮಾನವರು ಆರೋಗ್ಯಯುತವಾಗಿ ಜೀವನ ನಡೆಸಲು ಸಾಧ್ಯ. ರಾಜ್ಯದ ಹತ್ತು ಪ್ರತಿಶತ ಬಜೆಟ್ ಅನ್ನು ರೈತರ ಬಸವ ತತ್ವ ಪುನರುತ್ಥಾನಕ್ಕಾಗಿ ಮೀಸಲಿಡುವ ಹಾಗೂ ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ₹11 ಸಾವಿರ ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿಗೆ ತರುವ ಅವಶ್ಯಕತೆ ಕುರಿತು ವೈಜ್ಞಾನಿಕವಾಗಿ ಚಿಂತನೆ ಮಾಡುವುದು ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದರು.
ನಂದಿ ಸಂತತಿ ನಾಶವಾಗಿ ತಿನ್ನುವ ಅನ್ನ ವಿಷವಾಗುವ ಮುಂಚೆ ನಾವೆಲ್ಲರೂ ಒಗ್ಗೂಡಿ ಪರಿಹಾರ ಕಂಡುಕೊಳ್ಳುವ ಅವಶ್ಯಕತೆಯಿದೆ. ನಂದಿ ಕೃಷಿಕರಿಗೆ ಪೂರಕವಾದ ಕಾನೂನು ಹಾಗೂ ಯೋಜನೆಗಳನ್ನು ಜಾರಿಗೆ ತಂದು ಗ್ರಾಮಗಳನ್ನು ಸ್ವಾವಲಂಬಿ ಹಾಗೂ ಆರೋಗ್ಯಯುತವಾಗಿ ಇಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಕಳೆದ ವರ್ಷ ಬಸವನಬಾಗೇವಾಡಿಯಲ್ಲಿ ನಡೆದ 320 ಎತ್ತಿನ ಬಂಡಿಗಳ ಸಮಾವೇಶ ಹಾಗೂ ಈಚೆಗೆ ಸಿದ್ದೇಶ್ವರ ಸ್ವಾಮೀಜಿ ಜನ್ಮ ಸ್ಥಳದಲ್ಲಿ ನಡೆದ 330 ಎತ್ತಿನ ಬಂಡಿಗಳ ಸಮಾವೇಶವು 1000 ಎತ್ತಿನ ಬಂಡಿಗಳ ಸಮಾವೇಶ ಆಯೋಜಿಸಿ ರಾಷ್ಟ್ರ ಮಟ್ಟದ ನಂದಿ ಸೇನೆ ಸಂಘಟನೆಗೆ ಚಾಲನೆ ನೀಡಿರುವುದು ಸ್ಫೂರ್ತಿಯಾಗಿವೆ ಎಂದರು.ಕನ್ನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ, ಸೋಮಲಿಂಗ ಅಜ್ಜನವರು ಹಾಗೂ ತಾಲೂಕಿನ ಎಲ್ಲ ಸಂತರ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯುವುದು. ಅಂತಾರಾಷ್ಟ್ರೀಯ ಕೃಷಿ ವಿಜ್ಞಾನಿ ಡಾ.ಚಂದ್ರಶೇಖರ ಬಿರಾದಾರ ಹಾಗೂ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ವಿ.ಐ.ಬೆಣಗಿ ರೈತರ ಬಸವ ತತ್ವ ಪುನರುತ್ಥಾನದ ಕುರಿತು ವೈಜ್ಞಾನಿಕ ವಿಚಾರ ಮಂಡನೆ ಮಾಡಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಂದಿ ಕೂಗು ಅಭಿಯಾನದ ಸ್ವಯಂ ಸೇವಕರಾದ ಬಸವರಾಜ ಶಿವಪ್ಪ ಮನಗೂಳಿ,ಅಭಿಷೇಕ ಬಿರಾದಾರ,ವಕೀಲ ಎಚ್.ಎಸ್.ಗುರಡ್ಡಿ, ಹಣಮಂತ್ರಾಯ ಗುಣಕಿ, ಮಲ್ಲನಗೌಡ ನಾಡಗೌಡ ಇದ್ದರು.