)
ಜಿಲ್ಲೆಯಲ್ಲಿ 8.25 ಲಕ್ಷ ಮತದಾರರು ಮಾತ್ರ ಪತ್ತೆ । ಜಿಲ್ಲೆಯಲ್ಲಿ ಒಟ್ಟು 9,71,459 ಮತದಾರರಿದ್ದಾರೆ
ಪಂಚ ರಾಜ್ಯದ ಚುನಾವಣೆ ಫಲಿತಾಂಶದ ಬಳಿಕ ದೇಶದಲ್ಲಿ ಭಾರೀ ಚರ್ಚೆ, ಆರೋಪ, ಪ್ರತ್ಯಾರೋಪಗಳಿಗೆ ಕಾರಣವಾಗಿರುವ ಕೇಂದ್ರ ಚುನಾವಣಾ ಆಯೋಗದಿಂದ ‘ಮತಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ’ (ಎಸ್ಐಆರ್)ಗೆ ಕಳೆದ ಐದು ತಿಂಗಳಿನಿಂದ ಮ್ಯಾಪಿಂಗ್ ನಡೆಯುತ್ತಿರುವ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಇನ್ನೂ 1.46 ಲಕ್ಷ ಮತದಾರರ ಮ್ಯಾಪಿಂಗ್ ದೊರೆಯದಿರುವುದು ಜಿಲ್ಲೆಯ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರನ್ನು ಆತಂಕಕ್ಕೀಡು ಮಾಡಿದೆ.
ಪಶ್ಚಿಮ ಬಂಗಾಳ ಸೇರಿದಂತೆ ದೇಶದ ವಿವಿಧ ರಾಜ್ಯದಲ್ಲಿ ಕೇಂದ್ರ ಚುನಾವಣಾ ಆಯೋಗ ಈಗಾಗಲೇ ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಳಿಸಿದೆ. ಈ ವೇಳೆ ನಕಲಿ ಮತ್ತು ಒಂದಕ್ಕಿಂತ ಹೆಚ್ಚುಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದವರ ಹೆಸರನ್ನು ಮತದಾರ ಪಟ್ಟಿಯಿಂದ ತೆಗೆದು ಹಾಕಿತ್ತು. ಇದನ್ನು ವಿರೋಧಿಸಿದ್ದ ಪ್ರಮುಖ ರಾಜಕೀಯ ಪಕ್ಷಗಳು ಪಂಚ ರಾಜ್ಯಗಳ ಚುನಾವಣೆಯಲ್ಲಿ ಸೋಲುಂಟಾಗದ ಎಸ್‌ಐಆರ್ ವಿರುದ್ಧ ಆರೋಪಗಳನ್ನು ಮಾಡುತ್ತಿವೆ.ಇದೀಗ 3ನೇ ಹಂತದಲ್ಲಿ ಎಸ್‌ಐಆರ್ ಆರಂಭಿಸುವುದಕ್ಕೆ ಅಧಿಸೂಚನೆ ಹೊರಡಿಸಿದೆ. ಕಳೆದ 5 ತಿಂಗಳಿನಿಂದ ಮ್ಯಾಪಿಂಗ್ ಕಾರ್ಯ ಬೂತ್ ಮಟ್ಟದ ಅಧಿಕಾರಿಗಳು ಮಾಡುತ್ತಿದ್ದಾರೆ. ಎಸ್‌ಐಆರ್‌ಗೆ ಪೂರ್ವಭಾವಿಯಾಗಿ 2002ರ ಮತ್ತು 2025ರ ಮತದಾರರ ಪಟ್ಟಿ ಹೋಲಿಕೆ (ಮ್ಯಾಪಿಂಗ್) ಮಾಡಲಾಗುತ್ತಿದೆ.
ಶೇ.15 ರಷ್ಟು ಬಾಕಿಕಳೆದ 2025ರ ಮತದಾರ ಪಟ್ಟಿ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 9,71,459 ಮತದಾರರಿದ್ದಾರೆ. ಈ ಪೈಕಿ 2002ರ ಮತದಾರ ಪಟ್ಟಿಯಲ್ಲಿ 5,95,178 ಇದ್ದ ಮತದಾರರಿದ್ದಾರೆ. 2002ರ ನಂತರ 3,84,277 ಮಂದಿ ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಈವರೆಗೆ 8,25,623 ಮಂದಿ ಮ್ಯಾಪಿಂಗ್ ಮಾಡಲಾಗಿದೆ. ಇನ್ನೂ ಶೇ.15 ರಷ್ಟು ಮ್ಯಾಪಿಂಗ್ ಪ್ರಕ್ರಿಯೆ ಬಾಕಿ ಇದೆ.
ಮ್ಯಾಪಿಂಗ್ ಗೆ ಬಾಕಿ ಇರುವವ ಮತದಾರರ ವಿಳಾಸಕ್ಕೆ ಬೂತ್‌ಮಟ್ಟದ ಅಧಿಕಾರಿಗಳ ಮೂಲಕ ನೋಟಿಸ್ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮೂರು ಬಾರಿ ನೋಟಿಸ್ ನೀಡಲಾಗುತ್ತದೆ. ನೋಟಿಸ್ ಸ್ವೀಕರಿಸಿ ಮ್ಯಾಪಿಂಗ್ ಗೆ ಅಗತ್ಯ ಮಾಹಿತಿ ಸಲ್ಲಿಸಿದರೆ ಮತದಾರ ಪಟ್ಟಿಯಲ್ಲಿ ಹೆಸರು ಇರಲಿದೆ. ಇಲ್ಲವಾದರೆ, ಪಟ್ಟಿಯಿಂದ ತೆಗೆದು ಹಾಕಿ ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಈ ವೇಳೆಯೂ ಆಕ್ಷೇಪಣೆ ಸಲ್ಲಿಸಿ ದಾಖಲೆ ಸಲ್ಲಿಸಿದರೆ ಮತದಾರ ಪಟ್ಟಿಗೆ ಹೆಸರು ಸೇರಿಸ ಲಾಗುತ್ತದೆ. ಇಲ್ಲವಾದರೆ, ಪಟ್ಟಿಯಿಂದ ಹೆಸರು ತೆಗೆಯಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.
ಎರೆಡೆರಡು ಕಡೆ ಮತದಾರ ಪಟ್ಟಿಯಲ್ಲಿ ಹೆಸರಿರುವವರು ಪತ್ತೆ
---ಬಾಕ್ಸ್---
ಚಿಕ್ಕಮಗಳೂರು ಜಿಲ್ಲೆಗೆ ಒಳಪಡುವ ಐದು ಉಪವಿಭಾಗಗಳ ಪೈಕಿ ಶೃಂಗೇರಿ, ಮೂಡಿಗೆರೆ, ತರೀಕೆರೆ ಹಾಗೂ ಕಡೂರು ಉಪ ವಿಭಾಗದಲ್ಲಿ ಶೇ.85ಕ್ಕಿಂತ ಹೆಚ್ಚಿನ ಮ್ಯಾಪಿಂಗ್ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ, ಚಿಕ್ಕಮಗಳೂರು ಉಪ ವಿಭಾಗದಲ್ಲಿ ಮೇ 11 ಕ್ಕೆ ಶೇ 75.90ರಷ್ಟು ಮಾತ್ರ ಪೂರ್ಣಗೊಂಡಿದೆ. ಇನ್ನೂ ಶೇ. 24ರಷ್ಟು ಮ್ಯಾಪಿಂಗ್ ಬಾಕಿ ಉಳಿದಿದೆ.--ಬಾಕ್ಸ್--
ನಕಲಿ ಹಾಗೂ ಹಲವು ಕಡೆ ಮತದಾರರ ಪಟ್ಟಿಯಲ್ಲಿ ಹೆಸರುಳ್ಳವರನ್ನು ಪತ್ತೆ ಮಾಡುವುದೇ ಎಸ್‌ಐಆರ್ ಪ್ರಕ್ರಿಯೆ. ಅದರ ಪೂರ್ವಭಾವಿ ಸಿದ್ಧತೆ ಅಂಗವಾಗಿ ಮತದಾರನನ್ನು ಅಥವಾ ಅವರ ಕುಟುಂಬದ ಅಜ್ಜ, ಅಜ್ಜಿ, ತಂದೆ ಅಥವಾ ತಾಯಿ 2002ರಲ್ಲಿ ಮತದಾನ ಮಾಡಿದ ಕ್ಷೇತ್ರ, ಮತಗಟ್ಟೆ, ಕ್ರಮ ಸಂಖ್ಯೆಯೊಂದಿಗೆ ಹೋಲಿಕೆ ಮಾಡಿ ಪರಿಶೀಲಿಸುವುದಾಗಿದೆ. ಅದಕ್ಕಾಗಿ ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಿ ನೆಲೆಸಿರುವ ಮತದಾರರು 2002ರ ತಮ್ಮ ಮತಗಟ್ಟೆ ವಿವರವನ್ನು ಹಾಲಿ ಇರುವ ಮತಗಟ್ಟೆ ಅಧಿಕಾರಿ (ಬಿಎಲ್‌ಒ)ಗೆ ನೀಡಬೇಕು.ಎಸ್‌ಐಆರ್ ಪ್ರಕ್ರಿಯೆ ಆರಂಭದ ನಂತರ ಮತಗಟ್ಟೆ ಅಧಿಕಾರಿಗಳು ಮನೆ-ಮನೆಗೆ ಹೋಗಿ ಮತದಾರರ ಪಟ್ಟಿ ಪರಿಶೀಲನೆ ನಡೆಸಲಿದ್ದಾರೆ. ಮೃತಪಟ್ಟವರು, ವಿಳಾಸ ಬದಲಾದವರು, ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಚೀಟಿ ಹೊಂದಿರುವವರ ವಿವರ ಕಲೆ ಹಾಕುತ್ತಾರೆ. ಅರ್ಹ ದಾಖಲೆ ಒದಗಿಸಿದವರು ಪಟ್ಟಿಯಲ್ಲಿ ಉಳಿಯುತ್ತಾರೆ. ಇದರಿಂದ ಅರ್ಹ ಮತದಾರರ ಸಂಖ್ಯೆ ಅಂದಾಜು ಸಿಗಲಿದೆ.
--ಬಾಕ್ಸ್--ಜಿಲ್ಲೆಯ ಎಸ್‌ಐಆರ್ ಮ್ಯಾಪಿಂಗ್ ವಿವರ (ಮೇ 11ರ ಮಾಹಿತಿ)ವಿಧಾನಸಭಾ ಕ್ಷೇತ್ರಹಾಲಿ ಮತದಾರರುಪೂರ್ಣಗೊಂಡ ಮ್ಯಾಪಿಂಗ್‌ಶೇಕಡಬಾಕಿ ಮ್ಯಾಪಿಂಗ್ ಸಂಖ್ಯೆಶೃಂಗೇರಿ1,68,4581,53,98091.4114,478ಮೂಡಿಗೆರೆ1,69,8921,45,58185.6924,311ಚಿಕ್ಕಮಗಳೂರು2,29,8811,74,48175.9055,400ತರೀಕೆರೆ1,94,3381,72,72188.8821,617ಕಡೂರು2,08,8901,78,86085.6230,030ಒಟ್ಟ9,71,4598,25,62384.991.45,836(ಫೋಟೋ; ಮತಪಟ್ಟಿ ಪರಿಶೀಲನೆಗೆ ಸಂಬಂಧಿಸಿದ ಫೋಟೋ ಬಳಸುವುದು)