ಕನ್ನಡಪ್ರಭ ವಾರ್ತೆ ಹೊಸಕೋಟೆ
ತಾಲೂಕಿನ ಆಲಪ್ಪನಹಳ್ಳಿ ಬಳಿ ಪೂರ್ವ ಕರ್ನಾಟಕ ಬೋರ್‌ವೆಲ್ ರಿಗ್ ಮಾಲೀಕರು ಹಾಗೂ ಏಜೆಂಟರ ಸಂಘದ ಸಂಧಾನ ಸಭೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಇದಕ್ಕೂ ಮೊದಲು 0 ದಿಂದ 1 ಸಾವಿರ ಅಡಿಗೆ ₹1.60ಲಕ್ಷ ದರ ನಿಗದಿ ಮಾಡಿದ್ದೆವು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕಾರ್ಬನ್ ಬಿಟ್, ಆಯಿಲ್, ಹ್ಯಾಮರ್ ಸೇರಿದಂತೆ ಎಲ್ಲಾ ವಸ್ತುಗಳು ಸಮರೋಪಾದಿಯಲ್ಲಿ ಏರಿಕೆ ಕಂಡಿದ್ದರಿಂದ ಮಾಲೀಕರಿಗೆ ಹಳೆಯ ದರದಲ್ಲಿ ಬೋರ್‌ವೆಲ್ ಕೊರೆಯುವುದು ಅಸಾಧ್ಯದ ಮಾತಾಗಿತ್ತು. ಹಳೆಯ ದರದಲ್ಲಿ ಚಾಲಕರಿಗೆ ವೇತನ, ಊಟ, ಲಾರಿಗೆ ಇಂಧನ ಸೇರಿದಂತೆ ಬೋರ್‌ವೆಲ್ ಸಾಮಗ್ರಿಗಳ ಖರೀದಿ ಮಾಡಿ ಲಾರಿಗಳ ಲೋನ್ ಕಟ್ಟುವುದೇ ಕಷ್ಟವಾಗಿತ್ತು. ಈಗ ಅಂತಿಮವಾಗಿ ಸಭೆ ನಡೆಸಿ ಏಜೆಂಟರು ₹1.80ಲಕ್ಷ ಹೊಸ ದರ ನಿಗದಿ ಮಾಡಿದ್ದು ರೈತರು ಕೂಡ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಬೋರ್‌ವೆಲ್ ರಿಗ್ ಮಾಲೀಕ ಪ್ರಕಾಶ್ ಮಾತನಾಡಿ, ಬೋರ್‌ವೆಲ್‌ನ ಒಂದು ಬಿಟ್‌ಅನ್ನು 1800 ಅಡಿವರೆಗೆ ಬಳಕೆ ಮಾಡಬಹುದಾಗಿದೆ. ಆದರೆ ಒಮ್ಮೆ ಬಳಕೆ ಮಾಡಿದ್ದು ಮತ್ತೊಮ್ಮೆ ಬಳಕೆಗೆ ಬರೋಲ್ಲ. ಹಳೆಯ ದರದಿಂದ ಮಾಲೀಕರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದ ಹಿನ್ನೆಲೆ ವಾಹನಗಳನ್ನು ನಿಲ್ಲಿಸಲಾಗಿತ್ತು. ಈಗ ಅಂತಿಮವಾಗಿ ಸಭೆ ನಡೆಸಿ ದರ ಹೆಚ್ಚಳ ಮಾಡುವ ನಿರ್ಧಾರ ಮಾಡಲಾಯಿತು ಎಂದರು.
ಏಜೆಂಟರಾದ ಜಗದೀಶ್ ಸ್ವಾಮಿ, ರಿಗ್ ಮಾಲೀಕರಾದ ಚನ್ನಕೇಶವ, ಚರ್ಲಥನ್, ಸುಬ್ರಮಣಿ, ರಾಮಕೃಷ್ಣಶಂಕರ್, ಕುಮಾರನ್ ಪ್ರಕಾಶ್, ಪ್ರೀಮಿಯರ್ ಆನಂದ್, ಷಣ್ಮುಗ, ಎಸ್‌ಆರ್‌ಎಲ್ ರಾಜ, ಎಸ್‌ಎಸ್‌ವಿ ಪೆರಿಸ್ವಾಮಿ, ಅಂಬಾಲ್ ಶೇಖರ್, ರಾಜಕೃಷ್ಣ ರಾಜವೆಲ್, ವೇಲವನ್, ಜಯಕೃಷ್ಣ, ಮೋಹನ್ ದೊಡ್ಡಬಳ್ಳಾಪುರ, ಧರಣಿಸ್ವಾಮಿ ಕೋಲಾರ, ಸಂಜು ಪರಮಶಿವ ಚಿಕ್ಕಬಳ್ಳಾಪುರ, ದಾಸರಹಳ್ಳಿ ಮಂಜು, ತೆನೆಯೂರು ನಾಗೇಶ್ ಹಾಜರಿದ್ದರು.