ಜಿಲ್ಲೆಯ 10,024 ಗೃಹ ಲಕ್ಷ್ಮಿಯರಿಗೆ ಇಲ್ಲ ₹2 ಸಾವಿರ

KannadaprabhaNewsNetwork |  
Published : Jun 11, 2026, 01:45 AM IST
ದದದ | Kannada Prabha

ಸಾರಾಂಶ

ಚಿಕ್ಕಮಗಳೂರುಚಿಕ್ಕಮಗಳೂರು ಜಿಲ್ಲೆಯ ಬರೋಬ್ಬರಿ 10,024 ಮನೆ ಯಜಮಾನಿಯರಿಗೆ ‘ಗೃಹಲಕ್ಷ್ಮಿ’ ಯೋಜನೆ ಮಾಸಿಕ ₹2 ಸಾವಿರ ತಲುಪುತ್ತಿಲ್ಲ. ಸರ್ಕಾರಿ ಕಚೇರಿಗೆ ಅಲೆದಾಡಿ, ಅಲೆದಾಡಿ ಇದೀಗ ಮಹಿಳೆಯರು ಸುಮ್ಮನಾಗಿದ್ದಾರೆ.

ಒಟ್ಟು 2,72,902 ಮಹಿಳೆಯರು ಗೃಹ ಲಕ್ಷ್ಮಿ ಯೋಜನೆಗೆ ನೋಂದಣಿ

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಚಿಕ್ಕಮಗಳೂರು ಜಿಲ್ಲೆಯ ಬರೋಬ್ಬರಿ 10,024 ಮನೆ ಯಜಮಾನಿಯರಿಗೆ ‘ಗೃಹಲಕ್ಷ್ಮಿ’ ಯೋಜನೆ ಮಾಸಿಕ ₹2 ಸಾವಿರ ತಲುಪುತ್ತಿಲ್ಲ. ಸರ್ಕಾರಿ ಕಚೇರಿಗೆ ಅಲೆದಾಡಿ, ಅಲೆದಾಡಿ ಇದೀಗ ಮಹಿಳೆಯರು ಸುಮ್ಮನಾಗಿದ್ದಾರೆ.

ಹೌದು, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯದ ಎಲ್ಲ ಮನೆ ಯಜಮಾನಿಯರಿಗೆ ಮಾಸಿಕ ₹2 ಸಾವಿರ ನೀಡುವ ಯೋಜನೆ ಆರಂಭಿಸಿತ್ತು. ಈ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 2,72,902 ಮಹಿಳೆಯರು ಗೃಹ ಲಕ್ಷ್ಮಿ ಯೋಜನೆಗೆ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಂಡಿದ್ದಾರೆ.

ಆದರೆ, ಈ ಪೈಕಿ 2,62,880 ಮಂದಿ ಮಾತ್ರ ಗೃಹ ಲಕ್ಷ್ಮಿ ಯೋಜನೆ ಸೌಲಭ್ಯ ದೊರೆಯುತ್ತಿದೆ. ಬಾಕಿ ಇರುವ 10 ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಈ ಯೋಜನೆ ಲಾಭ ದೊರೆಯುತ್ತಿಲ್ಲ.

ಅದರಲ್ಲಿ 4238 ಮಂದಿ ಐಟಿ, ಜಿಎಸ್‌ಟಿ ಪಾವತಿದಾರರು, 3712 ಮಂದಿ ಮರಣ ಹೊಂದಿದ್ದಾರೆ. 306 ಮಂದಿ ಆಧಾರ್‌ ಸಂಖ್ಯೆ ಲಿಂಕ್‌ ಆಗಿಲ್ಲ. 409 ಮಂದಿ ತಿದ್ದುಪಡಿ ಅರ್ಜಿ ಸಲ್ಲಿಕೆ ಹಿನ್ನೆಲೆಯಲ್ಲಿ 330 ಮಂದಿ ಇದೀಗ ಹೊಸ ಅರ್ಜಿ ಸಲ್ಲಿಕೆ ದಾರರು. 1029 ಮಂದಿಯ ಬ್ಯಾಂಕ್‌ ಖಾತೆ ಸರಿಯಾಗಿಲ್ಲ ಎಂಬ ಕಾರಣಕ್ಕೆ ಗೃಹ ಲಕ್ಷ್ಮಿ ಹಣ ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಮಾರಕವಾದ ಮಾನದಂಡಗಳು

ಯೋಜನೆ ಅನುಷ್ಠಾನದ ಹೊಣೆ ಹೊತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅರ್ಹರಿಗೆ ಮಾತ್ರ ಯೋಜನೆ ಸೌಲಭ್ಯ ಸಿಗಬೇಕೆಂದು ಆಗಾಗ ‘ಗೃಹಲಕ್ಷ್ಮಿ’ಯರ ಪಟ್ಟಿ ಪರಿಷ್ಕರಿಸುತ್ತಾ ಬಂದಿದೆ. ಯೋಜನೆಗೆ ನಿಗದಿಪಡಿಸಿರುವ ಮಾನದಂಡಗಳಿಗೆ ಹೊರತಾಗಿರುವವರನ್ನು ಪಟ್ಟಿಯಿಂದ ಕೈ ಬಿಡುತ್ತಿದೆ. ಈ ಪ್ರಕಾರ ಸುಮಾರು 8,256 ಮಂದಿಯನ್ನು ಪಟ್ಟಿಯಿಂದ ತೆಗೆಯಲಾಗಿದೆ.

ಪ್ರಮುಖವಾಗಿ ಮೂರು ಕಾರಣ ನೀಡಲಾಗುತ್ತಿದೆ. ‘ಗೃಹಲಕ್ಷ್ಮಿ’ಗೆ ಅರ್ಹರಾದ ತಮ್ಮ ಬ್ಯಾಂಕ್ ಖಾತೆಗೆ ಆಧಾರ್‌ ಸೀಡಿಂಗ್ ಮಾಡದಿರುವುದು, ಸ್ವತಃ ಫಲಾನುಭವಿ ಆದಾಯ ತೆರಿಗೆ (ಐಟಿ) ಮತ್ತು ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಪಾವತಿ ಸುತ್ತಿರುವುದು. ಫಲಾನುಭವಿ ಮೃತಪಟ್ಟಿರುವ ಕಾರಣದಿಂದ ಗೃಹಲಕ್ಷ್ಮಿ ಹಣ ನೀಡಲಾಗುತ್ತಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಐ.ಟಿ–ಜಿಎಸ್‌ಟಿ ಪಾವತಿದಾರರೇ ದೊಡ್ಡ ಸಂಖ್ಯೆ

ಗೃಹಲಕ್ಷ್ಮಿ ಹಣ ದೊರೆಯದಿರುವವ ಪೈಕಿ ಐಟಿ ಜಿಎಸ್‌ಟಿ ಪಾವತಿಸುತ್ತಿರುವವರ ಸಂಖ್ಯೆಯೇ ಹೆಚ್ಚಾಗಿದೆ. ಒಟ್ಟು 4238 ಮಂದಿ ಜಿಎಸ್‌ಟಿ, ಐಟಿ ಪಾವತಿ ಮಾಡುತ್ತಿದ್ದಾರೆ. ಹೀಗಾಗಿ. ಅವರನ್ನು ಗೃಹಲಕ್ಷ್ಮಿ ಯೋಜನೆ ಫಲಾನುಭವಿ ಪಟ್ಟಿಯಿಂದ ಕೈ ಬಿಡಲಾಗಿದೆ. ಈ ಪೈಕಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಬರೋಬ್ಬರಿ 1429 ಮಂದಿ ಇದ್ದಾರೆ ಎಂದು ಅಧಿಕಾರಿಗಳು ’ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

---ಬಾಕ್ಸ್‌---

ಇ-ಕೆವೈಸಿ ಸಮಸ್ಯೆ 1335 ಮಂದಿ ಇಲ್ಲ ₹2 ಸಾವಿರ

ಫಲಾನುಭವಿಗಳ ಬ್ಯಾಂಕ್ ಖಾತೆಗೆ ಆಧಾರ್‌ ಇ-ಕೆವೈಸಿ ಆಗಿಲ್ಲ ಎಂಬ ಕಾರಣಕ್ಕೆ 1335 ಮಂದಿಗೆ ಗೃಹಲಕ್ಷ್ಮಿ ಹಣ ಹೋಗುತ್ತಿಲ್ಲ. ಈ ಪೈಕಿ ಕೇವಲ ಆಧಾರ್‌ ಕಾರ್ಡ್‌ ಲಿಂಕ್‌ ಆಗಿಲ್ಲ ಎಂಬ ಕಾರಣಕ್ಕೆ 306 ಮಂದಿಗೆ ಸರ್ಕಾರದ ₹2 ಸಾವಿರ ಸಂದಾಯವಾಗುತ್ತಿಲ್ಲ. ಇನ್ನುಳಿದಂತೆ 1029 ಮಂದಿ ಬ್ಯಾಂಕ್‌ ಖಾತೆ ಸರಿಯಾಗಿಲ್ಲ ಎಂಬ ಕಾರಣಕ್ಕೆ ಹಣ ನಿಲ್ಲಿಸಲಾಗಿದೆ.

---ಬಾಕ್ಸ್‌---1,026 ಮಂದಿ ಮರು ಅರ್ಜಿ ಪರಿಗಣಿಸಿಲ್ಲ

ಮಹಿಳೆಯರು ತಾವು ಐಟಿ ಜಿಎಸ್‌ಟಿ ಪಾವತಿ ಮಾಡುತ್ತಿಲ್ಲ ಸೇರಿದಂತೆ ವಿವಿಧ ಕಾರಣ ನೀಡಿ ಸರ್ಕಾರಕ್ಕೆ ಮರು ಅರ್ಜಿ ಸಲ್ಲಿಕೆ ಮಾಡಿ ಗೃಹಲಕ್ಷ್ಮಿ ಹಣ ಪಾವತಿ ಮಾಡುವಂತೆ ಈ ವರೆಗೆ ಜಿಲ್ಲೆಯಿಂದ ಒಟ್ಟು 1026 ಮಂದಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಯಾವುದೇ ಒಂದೇ ಒಂದು ಅರ್ಜಿಗೂ ಅನುಮೋದನೆ ಸಿಕ್ಕಿಲ್ಲ.---- ಬಾಕ್ಸ್‌---

ಜಿಲ್ಲೆಯ ಗೃಹ ಲಕ್ಷ್ಮಿ ಭಾಗ್ಯದ ವಿವರ:ತಾಲೂಕುನೋಂದಣಿ ಸಂಖ್ಯೆಹಾಲಿ ಫಲಾನುಭವಿ ಸಂಖ್ಯೆಗೃಹಲಕ್ಷ್ಮಿ ವಂಚಿತರ ಸಂಖ್ಯೆ

ಚಿಕ್ಕಮಗಳೂರು72,68769,6443,043

ಕಡೂರು72,77070,2372,533

ತರೀಕೆರೆ35,46834,2921,176

ಅಜ್ಜಂಪುರ19,80319,217586

ಮೂಡಿಗೆರೆ29,06827,9081,160

ಎನ್‌ ಆರ್‌ಪುರ16,19315,594599

ಶೃಂಗೇರಿ8,2737,966307

ಕೊಪ್ಪ18,64218,022620

ಒಟ್ಟು2,72,9042,62,88010,024

----ಕೋಟ್‌---

ಜಿಲ್ಲೆಯಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿರುವ ಪೈಕಿ 2.62 ಲಕ್ಷ ಮಂದಿಗೆ ಕಳೆದ ಫೆಬ್ರವರಿ ವರೆಗೆ ತಲಾ ₹2 ಸಾವಿರ ಜಮಾ ಆಗಿದೆ. ಐಟಿ. ಜಿಎಸ್‌ಟಿ ಪಾವತಿದಾರರಿಗೆ ಗೃಹಲಕ್ಷ್ಮಿ ಯೋಜನೆ ಅನ್ವಯವಾಗಲ್ಲ. ಅಂತವರನ್ನು ಯೋಜನೆಯಿಂದ ಕೈಬಿಡಲಾಗಿದೆ.

- ಶಿವಾನಂದ ಸ್ವಾಮಿ, ಅಧ್ಯಕ್ಷರು, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾದಕ ದ್ರವ್ಯ ಸೇವನೆಯಿಂದ ಜೀವಕ್ಕೆ ಹಾನಿ: ಪಿಎಸ್‌ಐ ಹೊಳೆಬಸಪ್ಪ ಸಲಹೆ
ಇನ್ನು ಕಾಯೋಕೆ ಆಗಲ್ಲ, ಬೇಗ ಮಿನಿಸ್ಟರ್ ಆಗಿ ಬನ್ನಿ